twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಕ್ಕೆ ಡಬ್ಬಿಂಗ್ ಬೇಕೇ ಬೇಕು! ಫೇಸ್ ಬುಕ್ ನಲ್ಲಿ ಚಳುವಳಿ

    By Harshitha
    |

    ಕನ್ನಡ ಚಿತ್ರರಂಗಕ್ಕೆ 'ಡಬ್ಬಿಂಗ್' ಮಾರಕ. ಡಬ್ಬಿಂಗ್ ನಿಂದ ಕನ್ನಡ ಚಿತ್ರರಂಗದ ಮಾರುಕಟ್ಟೆಗೆ ನಷ್ಟ ಆಗುತ್ತದೆ. 'ಡಬ್ಬಿಂಗ್' ಅನ್ನೋದು ಕನ್ನಡ ವಿರೋಧಿ ಅಂತ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ.

    ಆದ್ರೆ, ಕನ್ನಡಕ್ಕೆ ಡಬ್ಬಿಂಗ್ ಬೇಕೇ ಬೇಕು. ಕನ್ನಡದಲ್ಲಿ ಡಬ್ಬಿಂಗ್ ಅಗತ್ಯ ಅನ್ನುವುದನ್ನ ಸಾರುವುದಕ್ಕೆ ಫೇಸ್ ಬುಕ್ ನಲ್ಲಿ ಅನೇಕ ಕಮ್ಯೂನಿಟಿ ಸೆಂಟರ್ ಪೇಜ್ ಗಳು ಕ್ರಿಯೇಟ್ ಆಗಿವೆ. [ಕನ್ನಡ ಕೇಬಲ್ ಚಾನೆಲ್ ಗಳಲ್ಲಿ 'ಡಬ್ಬಿಂಗ್'ನದ್ದೇ ಪಾರುಪತ್ಯ]

    dubbing

    'Dubbing is Needed in Kannada', 'Remove Dubbing Ban in Kannada', 'Allow Dubbing in Kannada' ಹೆಸರಿನಲ್ಲಿರುವ ಕಮ್ಯೂನಿಟಿ ಪೇಜ್ ಗಳು ಕನ್ನಡದಲ್ಲಿ ಡಬ್ಬಿಂಗ್ ಬೇಕು ಅಂತ ಆನ್ ಲೈನ್ ಚಳುವಳಿ ಶುರುಮಾಡಿದೆ. ['ಡಬ್ಬಿಂಗ್' ವಿವಾದದ ಬಗ್ಗೆ ಉಪೇಂದ್ರ ಹೇಳಿದ್ದೇನು?]

    ಗೆಳೆಯರೇ,ನೀವಿನ್ನು ಸಹಿ ಮಾಡದೆ ಇದ್ದಲ್ಲಿ, ಈ ಕೂಡಲೇ ಸಹಿ ಮಾಡಿ #ಡಬ್ಬಿಂಗ್ ಪರ ನಿಮ್ಮ ಬೆಂಬಲ ಸೂಚಿಸಿ.ಸಹಿ ಕೊಂಡಿ ಇಲ್ಲಿದೆ : http://chn.ge/1IT3LRb

    Posted by Dubbing Is Needed In Kannada on Tuesday, August 25, 2015

    ಸಾಲದಕ್ಕೆ, ಡಬ್ಬಿಂಗ್ ವಿಷಯದಲ್ಲಿ ಕನ್ನಡಿಗರ ಆಯ್ಕೆ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ ಮನವಿ ಮಾಡುವ ಸಲುವಾಗಿ ಎಲ್ಲರಿಂದ ಸಹಿ ಸಂಗ್ರಹಿಸಿ ಫೇಸ್ ಬುಕ್ ನಲ್ಲಿ ಅಭಿಯಾನ ನಡೆಸಲಾಗುತ್ತಿದೆ. [ಕನ್ನಡ ಚಾನೆಲ್ ನಲ್ಲಿ ಬಂದೇಬಿಡ್ತು ಡಬ್ಬಿಂಗ್ ಸಿನಿಮಾ?]

    ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ, ಕನ್ನಡಿಗರ ಆಯ್ಕೆ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಿರಿ. #ಡಬ್ಬಿಂಗ್ ಮೇಲಿನ ತಡೆ ತೊಡೆಯಿರಿ.ಗೆಳ...

    Posted by Dubbing Is Needed In Kannada on Monday, August 24, 2015

    'ಕನ್ನಡದ್ಲಲೇ ಜ್ಞಾನ ಮತ್ತು ಮನರಂಜನೆಯನ್ನು ಪಡೆಯುವುದು ಕನ್ನಡಿಗರ ಹಕ್ಕು' ಅಂತ ಹೇಳ್ತಾ ಅಭಿಯಾನಕ್ಕೆ ಚಾಲನೆ ನೀಡಿದೆ. ಈಗಾಗಲೇ ನೂರಾರು ಜನರು ಸಹಿ ಹಾಕಿ ಡಬ್ಬಿಂಗ್ ಗೆ ಬೆಂಬಲ ಸೂಚಿಸಿದ್ದಾರೆ. (Image Courtesy: Dubbing is needed in Kannada Facebook page)

    English summary
    Many Community pages in Facebook have started Online petition and signature campaign to support Dubbing in Kannada Film Industry.
    Wednesday, August 26, 2015, 14:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X