For Quick Alerts
  ALLOW NOTIFICATIONS  
  For Daily Alerts

  ಗುರುಪ್ರಸಾದ್ ನಿರ್ದೇಶನ ಶಾಲೆಗೆ ವಿದ್ಯಾರ್ಥಿಗಳ ನೂಕುನುಗ್ಗಲು

  By Harshitha
  |

  'ಮಠ', 'ಎದ್ದೇಳು ಮಂಜುನಾಥ', 'ಡೈರೆಕ್ಟರ್ಸ್ ಸ್ಪೆಷಲ್' ನಂತಹ ಚಿತ್ರಗಳಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ನಿರ್ದೇಶಕ ಗುರುಪ್ರಸಾದ್, ಇತ್ತೀಚೆಗಷ್ಟೇ ನಿರ್ದೇಶನದಿಂದ ಕೊಂಚ ಗ್ಯಾಪ್ ತೆಗೆದುಕೊಂಡು Guruprasad's Institute of Script Writing and Film Direction ಸಂಸ್ಥೆಯನ್ನ ಸ್ಥಾಪಿಸಿದ್ದಾರೆ.

  ಚಲನಚಿತ್ರ ರಂಗದಲ್ಲಿ ತೆರೆ ಹಿಂದೆ ಕೆಲಸ ಮಾಡಲು ಇಚ್ಛಿಸುವ ಹಾಗು ನಿರ್ದೇಶಕರಾಗುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಸ್ಕ್ರಿಪ್ಟ್ ರೈಟಿಂಗ್ ತರಬೇತಿ ನೀಡುವ ಸಲುವಾಗಿ ಗುರುಪ್ರಸಾದ್ ಈ ಸಂಸ್ಥೆ ತೆರೆದಿದ್ದಾರೆ. ಇದರಲ್ಲಿ ಚಲನಚಿತ್ರ ಹಾಗೂ ಧಾರಾವಾಹಿಗಳಿಗೆ ಸ್ಕ್ರಿಪ್ಟ್ ಬರೆಯುವುದು ಹೇಗೆ ಅನ್ನುವುದನ್ನ ಹೇಳಿಕೊಡುವ ಜವಾಬ್ದಾರಿ ಗುರುಪ್ರಸಾದ್ ರದ್ದು.

  ಈ ಕುರಿತು ಕೆಲ ದಿನಗಳ ಹಿಂದೆಯಷ್ಟೇ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನಾವೇ ವರದಿ ಮಾಡಿದ್ವಿ. ಆಸಕ್ತ ಅಭ್ಯರ್ಥಿಗಳು directorguruprasad@gmail.com ಗೆ ಮೇಲ್ ಮಾಡಬಹುದು ಅಂತ ತಿಳಿಸಿದ್ವಿ. ಈ ವರದಿಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಗೆ ಸ್ವತಃ ನಿರ್ದೇಶಕ ಗುರುಪ್ರಸಾದ್ ಧಂಗಾಗಿದ್ದಾರೆ.[ಸ್ಕ್ರಿಪ್ಟ್ ರೈಟಿಂಗ್ ಸೀಕ್ರೆಟ್ ಹೇಳಿಕೊಡಲಿದ್ದಾರೆ ಗುರುಪ್ರಸಾದ್]

  ಲಭ್ಯವಿರುವ 40 ಸೀಟುಗಳಿಗೆ 1000ಕ್ಕೂ ಹೆಚ್ಚು ಅಪ್ಲೀಕೇಷನ್ ಗಳನ್ನು ಗುರುಪ್ರಸಾದ್ ಮೇಲ್ ಗೆ ಬಂದಿದ್ದವು. ಆದ್ರೆ, ಈ ಮೊದಲೇ ಅವರು ಹೇಳಿದಂತೆ, ಅದಮ್ಯ ಆಸಕ್ತಿ ಇರುವವರಿಗೆ ಮಾತ್ರ ತರಬೇತಿ. ಸಂದರ್ಶನದ ಮೂಲಕ ಅಭ್ಯರ್ಥಿಗಳ ಪ್ರತಿಭೆ ಅಳೆದು ತೂಗಿ 32 ಮಂದಿಯನ್ನ ಗುರುಪ್ರಸಾದ್ ಆಯ್ಕೆ ಮಾಡಿದ್ದಾರೆ.

  ಈಗ ಉಳಿದಿರುವುದು ಕೇವಲ 8 ಸೀಟುಗಳು ಮಾತ್ರ. ಡೈರೆಕ್ಟರ್ ಕ್ಯಾಪ್ ತೊಡುವ ಮುನ್ನ ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿ ಪ್ರವೀಣರಾಗಬೇಕಂದ್ರೆ, ನಿಮಗೆ ಇಲ್ಲಿದೆ ಕಡೆ ಅವಕಾಶ. ಯಾರಿಗೆ ಗೊತ್ತು, ಆ 8 ಸೀಟ್ ನಲ್ಲಿ ನಿಮ್ಮ ಹೆಸರಿಗೆ ಒಂದು ಸೀಟ್ ಸಿಗಬಹುದು. ಮುಂದೆ ಡೈರೆಕ್ಟರ್ ಕ್ಯಾಪ್ ತೊಡಬಹುದು.

  English summary
  If you are interested to learn the art of Script Writing and Direction, Here is an opportunity to learn the secrets of Cinema Scripts in Guruprasad's Institute of Script Writing and Film Direction. Only 8 seats left. Hurry up.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X