»   » ಅಲಮೇಲಮ್ಮನಿಗೆ ಆಪರೇಶನ್ ಮಾಡಲು ಹೊರಟ ಸಿಂಪಲ್ ಸುನಿ

ಅಲಮೇಲಮ್ಮನಿಗೆ ಆಪರೇಶನ್ ಮಾಡಲು ಹೊರಟ ಸಿಂಪಲ್ ಸುನಿ

Posted By:
Subscribe to Filmibeat Kannada

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಮತ್ತು 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಅಂತ ಸಿಂಪಲ್-ಸಿಂಪಲ್ ಸಿನಿಮಾಗಳ ಮೂಲಕ ಭರ್ಜರಿ ಡೈಲಾಗ್ ಗಳ ಸುರಿಮಳೆ ಸುರಿಸಿ ಯಶಸ್ಸು ಕಂಡ ನಿರ್ದೇಶಕ ಸಿಂಪಲ್ ಸುನಿ ಅವರು ಈ ಬಾರಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

ಸದಾ ಮಾತೇ ಬಂಡವಾಳ ಎನ್ನುತ್ತಿದ್ದ ನಿರ್ದೇಶಕರು ಈ ಬಾರಿ ವಿಭಿನ್ನ ಆಪರೇಷನ್ ಒಂದನ್ನು ಮಾಡಲು ಎಲ್ಲಾ ತಯಾರಿ ನಡೆಸುತ್ತಿದ್ದು, ಸಖತ್ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರಕ್ಕೆ ಕೈ ಹಾಕಿದ್ದಾರೆ.[ವಿಮರ್ಶೆ; ಖುಷ್-ಖುಷಿಯಾದ 'ಸಿಂಪಲ್' ಲವ್ ಸ್ಟೋರಿ]


'Operation Alamelamma' by director Simple Suni

ಹೌದು ಈ ಬಾರಿ ಸಿಂಪಲ್ ಸುನಿ ಅವರು 'ಆಪರೇಶನ್ ಅಲಮೇಲಮ್ಮ' ಎಂಬ ವಿಭಿನ್ನ ಸಿನಿಮಾ ಮಾಡಲು ಹೊರಟಿದ್ದು, ಈ ಚಿತ್ರದ ಚಿತ್ರೀಕರಣ ಸೋಮವಾರದಿಂದಲೇ ಸದ್ದಿಲ್ಲದೇ ಆರಂಭವಾಗಿದೆ.


ಖುದ್ದು ನಿರ್ದೇಶಕ ಸುನಿ ಅವರೇ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ತುಂಬಾ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳಿವೆಯಂತೆ. ಥ್ರಿಲ್ಲರ್ ಜೊತೆ ಅಪಹರಣ ಕಥೆ ಹೊಂದಿರುವ ಚಿತ್ರ ಇದಾಗಿದ್ದು, ಸುನಿ ಅವರದು ಇದು ಚೊಚ್ಚಲ ಪ್ರಯತ್ನ.['ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ರಿಲೀಸ್ ಯಾವಾಗ?]


'Operation Alamelamma' by director Simple Suni

ಅಂದಹಾಗೆ ತಮ್ಮ ಎಲ್ಲಾ ಚಿತ್ರಗಳಲ್ಲಿ ಹೊಸಬ್ಬರಿಗೆ ಅವಕಾಶ ಕೊಟ್ಟಿದ್ದ ಸುನಿ ಅವರು ಈ ಚಿತ್ರದಲ್ಲೂ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದಾರೆ. ಈ ಬಾರಿ ರಂಗಭೂಮಿ ಕಲಾವಿದ ಮನೀಶ್ ರಿಷಿ ಅವರಿಗೆ ಸಿಂಪಲ್ ಸುನಿ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು, ಈ ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಮನೀಶ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.


ನಟ ಮನೀಶ್ ರಿಷಿ ಅವರು ಧಾರಾವಾಹಿಯಲ್ಲಿ ಮಿಂಚಿದ್ದು, ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅನುರೂಪ' ಧಾರಾವಾಹಿಯಲ್ಲಿ ಕಾಲೇಜು ಅಧ್ಯಾಪಕ 'ತೇಜಸ್ವಿ' ಎಂಬ ಪಾತ್ರವನ್ನು ಪೋಷಿಸುತ್ತಿದ್ದರು. ಇದೀಗ ಸುನಿ ಅವರ ಜೊತೆ 'ಆಪರೇಶನ್ ಅಲಮೇಲಮ್ಮ' ಮಾಡಲು ತಯಾರಾಗಿದ್ದಾರೆ.


'Operation Alamelamma' by director Simple Suni

ಸದ್ಯಕ್ಕೆ ಬಿಡುಗಡೆಗೆ ತಯಾರಾಗಿರುವ ಪವನ್ ಕುಮಾರ್ ಅವರ 'ಯು-ಟರ್ನ್' ಚಿತ್ರದ ನಾಯಕಿ ಶ್ರದ್ಧಾ ಶ್ರೀನಾಥ್ ಅವರು ಈ ಚಿತ್ರದಲ್ಲಿ ರಿಷಿ ಅವರ ಜೊತೆ ಡ್ಯುಯೆಟ್ ಹಾಡಲಿದ್ದು, ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇದರ ಜೊತೆಗೆ 'ಊರ್ವಿ' ಚಿತ್ರವನ್ನು ಕೂಡ ಒಪ್ಪಿಕೊಂಡಿದ್ದಾರೆ.


'Operation Alamelamma' by director Simple Suni

'ಯು-ಟರ್ನ್' ಚಿತ್ರದ ಪ್ರೀಮಿಯರ್ ಶೋಗಾಗಿ ಪ್ರಸ್ತುತ ನ್ಯೂಯಾರ್ಕ್ ನಲ್ಲಿ ರುವ ನಟಿ ಶ್ರದ್ಧಾ ಶ್ರೀನಾಥ್ ಅವರು ಜೂನ್ ನಿಂದ 'ಆಪರೇಶನ್ ಅಲಮೇಲಮ್ಮ' ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಡೈಲಾಗ್ ಸಿನಿಮಾಗಳ ಮೂಲಕ ಫೇಮಸ್ ಆದ ನಿರ್ದೇಶಕರು ಈ ಬಾರಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ.

English summary
Director Suni, after the critically acclaimed and commercially successful 'Simplag Innondu Love Story', has start on his next project Operation Alamelamma. Surprisingly, he has quietly gone on floors with it from Monday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada