»   » 'ಅಲಮೇಲಮ್ಮ'ನ ಆಪರೇಷನ್ ಮುಗಿದಿಲ್ಲ, ಮತ್ತೊಂದು ಕಥೆ ಆರಂಭ.!

'ಅಲಮೇಲಮ್ಮ'ನ ಆಪರೇಷನ್ ಮುಗಿದಿಲ್ಲ, ಮತ್ತೊಂದು ಕಥೆ ಆರಂಭ.!

Posted By:
Subscribe to Filmibeat Kannada

ಸಿಂಪಲ್ ಸುನಿ ನಿರ್ದೇಶನದ 'ಆಪರೇಷನ್ ಅಲಮೇಲಮ್ಮ' ಚಿತ್ರ ಬಿಡುಗಡೆಯಾಗಿ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೊದಲ ದಿನ ಅಲಮೇಲಮ್ಮನ ಆಪರೇಷನ್ ನೋಡಿದವರಿಗೆ ಚಿತ್ರದ ಕೊನೆಯಲ್ಲಿ 'ಪಾರ್ಟ್-2' ಮಾಡಬಹುದು ಎಂಬ ಸಣ್ಣ ಅನುಮಾನ ಮೂಡುವುದಂತೂ ನಿಜಾ. ಯಾಕಂದ್ರೆ, ಚಿತ್ರದಲ್ಲಿ 'ದಿ ಎಂಡ್' ಇಲ್ಲ. ಆಪರೇಷನ್ ಕಥೆಗೊಂದು ವಿರಾಮ ಕೊಟ್ಟಿದ್ದಾರೆ ಅಷ್ಟೇ.

ಈ ಮಾತು ಸಿನಿಮಾ ಬಿಡುಗಡೆಗೂ ಮುಂಚೆಯೂ ಕೇಳಿ ಬಂದಿತ್ತು. ಸ್ವತಃ ನಿರ್ದೇಶಕರೇ ಈ ಬಗ್ಗೆ ಮಾತನಾಡಿದ್ದರು. 'ಆಪರೇಷನ್ ಅಲಮೇಲಮ್ಮ' ಚಿತ್ರದ ಸೀಕ್ವೆಲ್ ಮಾಡುವ ಬಗ್ಗೆ ನಾಯಕ ನಟ ರಿಷಿ ಅವರ ಜೊತೆಯಲ್ಲಿ ಚರ್ಚೆ ನಡೆಸಿದ್ದರಂತೆ. ಮುಂದುವರೆದ ಭಾಗವನ್ನ ನಿರ್ಮಾಣ ಮಾಡಲು ಇಬ್ಬರು ನಿರ್ಮಾಪಕರು ಕೂಡ ಸಿಕ್ಕಿದ್ದಾರಂತೆ.

'ಅಲಮೇಲಮ್ಮ' ವಿಮರ್ಶೆ: ಸಿಂಪಲ್ಲಾಗ್ ಒಂದು 'ಕಿಡ್ನಾಪ್' ಸ್ಟೋರಿ

Operation Alamelamma Sequel

ಮೊದಲ ದಿನ 'ಆಪರೇಷನ್ ಅಲಮೇಲಮ್ಮ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ನಿರ್ಮಾಪಕರಿಗೆ ಬಂಡವಾಳ ವಾಪಸ್ ಆಗುವ ಭರವಸೆ ವ್ಯಕ್ತಪಡಿಸಿರುವ ನಿರ್ದೇಶಕರು, ನಿರ್ಮಾಪಕರು ಖುಷಿ ಆದ್ರೆ, ಖಂಡಿತಾ 'ಪಾರ್ಟ್-2' ಮಾಡ್ತೀನಿ ಎಂದಿದ್ದಾರೆ.

ಒಂದು ಕಡೆ 'ಅಲಮೇಲಮ್ಮ' ಆಪರೇಷನ್ ಅಂತ್ಯ ಕಂಡಿಲ್ಲ, ಮತ್ತೊಂದೆಡೆ ಸೀಕ್ವೆಲ್ ಮಾಡುವ ಆಸಕ್ತಿ ಚಿತ್ರತಂಡಕ್ಕೆ ಇದೆ.ಹೀಗಾಗಿ, ಚಿತ್ರತಂಡ ಗಟ್ಟಿ ಮನಸ್ಸು ಮಾಡಿದ್ರೆ, ಖಂಡಿತಾ 'ಆಪರೇಷನ್ ಅಲಮೇಲಮ್ಮ'ನ ಮುಂದಿನ ಕಥೆ ನೋಡಬಹುದು.

ಹಾಸ್ಯದಲ್ಲಿ ಸಸ್ಪೆನ್ಸ್ ತೋರಿಸಿದ ಸುನಿಯ 'ಅಲಮೇಲಮ್ಮ'ನಿಗೆ ವಿಮರ್ಶಕರು ಏನಂದ್ರು?

English summary
Director Simple Suni has Planning to do sequel of Operation Alamelamma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada