»   » ಹಿಂದಿ, ತಮಿಳಿಗೆ 'ಆಪರೇಷನ್ ಅಲಮೇಲಮ್ಮ', ನಾಯಕ ಯಾರು?

ಹಿಂದಿ, ತಮಿಳಿಗೆ 'ಆಪರೇಷನ್ ಅಲಮೇಲಮ್ಮ', ನಾಯಕ ಯಾರು?

Posted By:
Subscribe to Filmibeat Kannada

ಸಿಂಪಲ್ ಸುನಿ ನಿರ್ದೇಶನ 'ಆಪರೇಷನ್ ಅಲಮೇಲಮ್ಮ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಎಲ್ಲೆಡೆ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಹಿಂದಿ ಹಾಗೂ ತಮಿಳಿನಲ್ಲೂ ಅಲಮೇಲಮ್ಮನ 'ಆಪರೇಷನ್' ಕಂಡು ಫುಲ್ ಖುಷ್ ಆಗಿದ್ದಾರೆ.

ಹಿಂದಿ-ತಮಿಳಿನಲ್ಲಿ 'ಆಪರೇಷನ್ ಅಲಮೇಲಮ್ಮ'ನ ಎಂದು ಆಶ್ಚರ್ಯವಾಗಬೇಡಿ. ನೇರವಾಗಿ ವಿಷ್ಯಕ್ಕೆ ಬರ್ತೀನಿ. ಶ್ರದ್ಧಾ ಶ್ರೀನಾಥ್ ಮತ್ತು ರಿಷಿ ಅಭಿನಯದ ಕಾಮಿಡಿ ಕಮ್ ಥ್ರಿಲ್ಲಿಂಗ್ ಕಹಾನಿ ಈಗ ಬೇರೆ ಭಾಷೆಗಳಲ್ಲಿ ರೀಮೇಕ್ ಆಗುತ್ತಿದೆ.

ಈಗಾಗಲೇ ತಮಿಳಿನಲ್ಲಿ ನಾಯಕ ಕೂಡ ಅಂತಿಮವಾಗಿದ್ದು, ಒಟ್ಟು ಮೂರು ಭಾಷೆಯಲ್ಲಿ ಅಲಮೇಲಮ್ಮನ 'ಆಪರೇಷನ್' ನಡೆಯಲಿದೆ. ಮುಂದೆ ಓದಿ....

ಮೂರು ಭಾಷೆಗಳಿಗೆ ರೀಮೇಕ್

ಕನ್ನಡದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಆಪರೇಷನ್ ಅಲಮೇಲಮ್ಮ' ಚಿತ್ರಕ್ಕೆ ಭರ್ಜರಿ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ತಮಿಳು, ಹಿಂದಿ ಹಾಗೂ ಮರಾಠಿಯಲ್ಲಿ ಸಿನಿಮಾ ರೀಮೇಕ್ ಆಗುತ್ತಿದೆ.

'ಅಲಮೇಲಮ್ಮ' ವಿಮರ್ಶೆ: ಸಿಂಪಲ್ಲಾಗ್ ಒಂದು 'ಕಿಡ್ನಾಪ್' ಸ್ಟೋರಿ

ತಮಿಳಿನಲ್ಲಿ ನಾಯಕ ಯಾರು

ತಮಿಳಿನಲ್ಲಿ 'ಹಾರಿಜನ್' ಸಂಸ್ಥೆ 'ಆಪರೇಷನ್ ಅಲಮೇಲಮ್ಮ'ನ ರೀಮೇಕ್ ಹಕ್ಕು ಖರೀದಿಸಲು ಮುಂದೆ ಬಂದಿದೆ. ಕನ್ನಡದಲ್ಲಿ ರಿಷಿ ಮಾಡಿದ್ದ ಪಾತ್ರವನ್ನ ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಲಿದ್ದಾರಂತೆ. ಈ ಬಗ್ಗೆ ಮಾತುಕತೆ ಕೂಡ ಆಗಿದೆಯಂತೆ.

ಹಾಸ್ಯದಲ್ಲಿ ಸಸ್ಪೆನ್ಸ್ ತೋರಿಸಿದ ಸುನಿಯ 'ಅಲಮೇಲಮ್ಮ'ನಿಗೆ ವಿಮರ್ಶಕರು ಏನಂದ್ರು?

ಹಿಂದಿಯಲ್ಲಿ ಯಾರು?

ಇನ್ನು ಬಾಲಿವುಡ್ ನಲ್ಲಿ 'ಧೂನ್' ಪ್ರೊಡಕ್ಷನ್ 'ಆಪರೇಷನ್ ಅಲಮೇಲಮ್ಮ'ನ ರೀಮೇಕ್ ಹಕ್ಕು ಖರೀದಿಸಲಿದ್ದು, ಮಾತುಕತೆ ಅಂತಿಮವಾಗಿದೆ. ಇದೇ ಸಂಸ್ಥೆ ಮರಾಠಿಯಲ್ಲೂ ಈ ಚಿತ್ರವನ್ನ ನಿರ್ಮಾಣ ಮಾಡಲಿದೆಯಂತೆ.

ಸ್ವೀಕೆಲ್ ಪಕ್ಕಾ

ಈ ಮಧ್ಯೆ 'ಆಪರೇಷನ್ ಅಲಮೇಲಮ್ಮ' ಚಿತ್ರದ ಸೀಕ್ವೆಲ್ ಮಾಡುವುದಾಗಿ ಸ್ವತಃ ಸುನಿ ಹೇಳಿಕೊಂಡಿದ್ದರು. ಸದ್ಯ, 'ಚಮಕ್' ಚಿತ್ರವನ್ನ ಮಾಡುತ್ತಿರುವ ಸುನಿ ಆದಷ್ಟೂ ಬೇಗ ಪಾರ್ಟ್ 2 ಚಿತ್ರವನ್ನ ಶುರು ಮಾಡಲಿದ್ದಾರಂತೆ. ಹೊಸ ಅವತಾರದಲ್ಲಿ ರಿಷಿ ಈ ಚಿತ್ರದಲ್ಲಿ ಮುಂದುವರೆಯಲಿದ್ದಾರಂತೆ.

'ಅಲಮೇಲಮ್ಮ'ನ ಆಪರೇಷನ್ ಮುಗಿದಿಲ್ಲ, ಮತ್ತೊಂದು ಕಥೆ ಆರಂಭ.!

English summary
Kannada Movie Operation Alamelamma to Remake in Hindi and Tamil Says Director Simple Suni.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada