twitter
    For Quick Alerts
    ALLOW NOTIFICATIONS  
    For Daily Alerts

    ಒಟಿಟಿ ಅವಾರ್ಡ್ಸ್: ಪಂಚೆಯಲ್ಲೇ ಸ್ಟೇಜ್ ಹತ್ತಿ ಪ್ರಶಸ್ತಿ ಪಡೆದ ರಾಜ್ ಬಿ ಶೆಟ್ಟಿ, ರಿಷಭ್; ಅಲ್ಲೂ ಅಪ್ಪು ನೆನಪು

    |

    ಸೆಪ್ಟೆಂಬರ್ 11ರ ಭಾನುವಾರದಂದು ಮುಂಬೈನಲ್ಲಿ ಇದೇ ಮೊದಲ ಬಾರಿಗೆ ಒಟಿಟಿ ಪ್ಲೇ ಸಂಸ್ಥೆ ರಾಷ್ಟ್ರೀಯ ಮಟ್ಟದಲ್ಲಿ ಒಟಿಟಿ ಪ್ಲೇ ಪ್ರಶಸ್ತಿಯನ್ನು ವಿತರಿಸಿತು. ಇನ್ನು ಇದೇ ದಿನದಂದು ಬೆಂಗಳೂರಿನಲ್ಲಿ ನಡೆದ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ತಮಿಳು ಹಾಗೂ ಮಲಯಾಳಂ ಚಿತ್ರಗಳಿಗೆ ಪ್ರಶಸ್ತಿಯನ್ನು ವಿತರಿಸಲಾಗಿತ್ತು. ಇದರ ಮುನ್ನಾ ದಿನ ನಡೆದಿದ್ದ ಕನ್ನಡ ಹಾಗೂ ತೆಲುಗು ಚಿತ್ರಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿದ್ದ ಗರುಡ ಗಮನ ವೃಷಭ ವಾಹನ ಚಿತ್ರ ಸೈಮಾ ಅತ್ಯುತ್ತಮ ಕನ್ನಡ ಚಿತ್ರ ಎಂಬ ಪ್ರಶಸ್ತಿಯನ್ನು ಗೆದ್ದಿತು.

    ಇದೇ ಸಿನಿಮಾಗಾಗಿ ಒಟಿಟಿ ಪ್ಲೇ ಅವಾರ್ಡ್ ಅನ್ನೂ ಸಹ ರಾಜ್ ಬಿ ಶೆಟ್ಟಿ ಹಾಗೂ ರಿಷಭ್ ಶೆಟ್ಟಿ ಪಡೆದುಕೊಂಡಿದ್ದಾರೆ. ವಿಶೇಷ ಹಾಗೂ ವಿಷಾದವೇನೆಂದರೆ ಈ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಬಂದ ಏಕೈಕ ಪ್ರಶಸ್ತಿ ಇದೊಂದೇ ಎಂಬುದು. ಭಾರತ ಚಲನಚಿತ್ರರಂಗಕ್ಕೆ ಹೊಸ ಅಲೆಯ ಕೊಡುಗೆಗಳನ್ನು ನೀಡುವುದರಲ್ಲಿ ಮೊದಲಿಗರು ಎಂಬ ಅವಾರ್ಡ್ ಅನ್ನು ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಗೆದ್ದಿದ್ದಾರೆ.

    ಈ ಮೂಲಕ ಶನಿವಾರ ತಮ್ಮ ಗರುಡ ಗಮನ ವೃಷಭ ವಾಹನ ಸಿನಿಮಾಗೆ ಸೈಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದ ಖುಷಿಯಲ್ಲಿದ್ದ ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಭಾನುವಾರ ಒಟಿಟಿ ಪ್ಲೇ ಅವಾರ್ಡ್ ಗೆದ್ದು ಕನ್ನಡ ಚಿತ್ರರಂಗದ ಗರಿಮೆಯನ್ನು ಹೆಚ್ಚಿಸಿದೆ.

    ಪಂಚೆಯಲ್ಲೇ ಪ್ರಶಸ್ತಿ ಪಡೆದ ಶೆಟ್ರು

    ಪಂಚೆಯಲ್ಲೇ ಪ್ರಶಸ್ತಿ ಪಡೆದ ಶೆಟ್ರು

    ಇನ್ನು ಈ ಪ್ರತಿಷ್ಟಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ತೆರಳಿದ್ದ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಇಬ್ಬರೂ ಸಹ ಬಿಳಿ ಪಂಚೆಯನ್ನು ಧರಿಸಿಯೇ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ವಿಡಿಯೋವನ್ನು ವೀಕ್ಷಿಸಿದ ಕನ್ನಡಿಗರು ನಮ್ಮ ಮಣ್ಣಿನ ಸಂಸ್ಕೃತಿ ಇದು, ಇತರೆ ನಟರೂ ಇದನ್ನೇ ಅನುಸರಿಸಿದರೆ ಎಷ್ಟು ಚಂದ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ಭಾಷೆಯನ್ನೂ ಮೀರಿ ಗುರುತಿಸಿದ್ದಕ್ಕೆ ರಾಜ್ ಬಿ ಶೆಟ್ಟಿ ಖುಷ್

    ಭಾಷೆಯನ್ನೂ ಮೀರಿ ಗುರುತಿಸಿದ್ದಕ್ಕೆ ರಾಜ್ ಬಿ ಶೆಟ್ಟಿ ಖುಷ್

    ಇನ್ನು ತಮ್ಮ ಪ್ರತಿಭೆಯನ್ನು ಗುರುತಿಸಿ ವಿಶೇಷ ಅವಾರ್ಡ್ ನೀಡಿದಕ್ಕಾಗಿ ರಾಜ್ ಬಿ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾತನಾಡಿದ ರಾಜ್ ಬಿ ಶೆಟ್ಟಿ ಇಷ್ಟು ದಿನಗಳಲ್ಲಿ ಓರ್ವ ನಟನ ಪ್ರತಿಭೆಯನ್ನು ಆತನ ಭಾಷೆಯಿಂದ ತೂಗಲಾಗುತ್ತಿತ್ತು, ಆದರೆ ಈ ಅವಾರ್ಡ್ ಮೂಲಕ ಆ ಕೆಟ್ಟ ಪ್ರವೃತ್ತಿಯನ್ನು ಒಟಿಟಿ ಪ್ಲೇ ಬ್ರೇಕ್ ಮಾಡಿದೆ ಎಂದು ಹೇಳಿಕೆ ನೀಡಿ ಕನ್ನಡ ಚಿತ್ರರಂಗವನ್ನು ಕಳಪೆಯನ್ನಾಗಿ ನೋಡುತ್ತಿದ್ದವರಿಗೆ ಟಾಂಗ್ ಕೊಟ್ಟಿದ್ದಾರೆ.

    ಅಪ್ಪು ನೆನೆದ ರಿಷಬ್

    ಅಪ್ಪು ನೆನೆದ ರಿಷಬ್

    ಇನ್ನು ರಾಜ್ ಬಿ ಶೆಟ್ಟಿ ಬಳಿಕ ಮೈಕ್ ಹಿಡಿದು ಮಾತನಾಡಿದ ರಿಷಬ್ ಶೆಟ್ಟಿ ಈ ಪ್ರಶಸ್ತಿಯನ್ನು ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಿಸುತ್ತಿದ್ದೇನೆ ಎಂದು ಘೋಷಿಸಿದರು. ಈ ಮಾತನ್ನು ಕೇಳಿ ಕಾರ್ಯಕ್ರಮದಲ್ಲಿದ್ದ ಭಾರತದ ಎಲ್ಲಾ ಚಿತ್ರರಂಗಗಳ ಕಲಾವಿದರು ಚಪ್ಪಾಳೆ ತಟ್ಟಿದರು.

    English summary
    Raj B Shetty & Rishab Shetty Won OTT Play award for Pioneering Contributions To New Wave Cinema. Read on
    Wednesday, September 14, 2022, 17:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X