»   » ಪಿ.ಎನ್ ಸತ್ಯ ಅವರ ಇಮೇಜ್ ಬದಲಿಸಿದ ಚಿತ್ರಗಳು

ಪಿ.ಎನ್ ಸತ್ಯ ಅವರ ಇಮೇಜ್ ಬದಲಿಸಿದ ಚಿತ್ರಗಳು

By Bharath Kumar
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕನ್ನಡದ ಖ್ಯಾತ ನಿರ್ದೇಶಕ ಪಿ ಎನ್ ಸತ್ಯ ಇನ್ನಿಲ್ಲ ಎಂಬ ಸುದ್ದಿ ಚಿತ್ರೋಧ್ಯಮಕ್ಕೆ ಹಾಗೂ ಕಲಾಭಿಮಾನಿಗಳಿಗೆ ಶಾಕ್ ನೀಡಿದೆ. ಹಲವು ಕನ್ನಡ ನಟರ ಇಮೇಜ್ ಬದಲಿಸಿ, ಇಂಡಸ್ಟ್ರಿಯಲ್ಲಿ ತನ್ನದೇ ಆದ ಟ್ರೆಂಡ್ ಹುಟ್ಟುಹಾಕಿ, ತಾನೊಬ್ಬ ಡಿಫ್ರೆಂಟ್ ಡೈರೆಕ್ಟರ್ ಎಂದೇ ಗುರುತಿಸಿಕೊಂಡಿದ್ದರು.

  ಅಂಡರ್ ವರ್ಲ್ಡ್ ಸಿನಿಮಾಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಸತ್ಯ, ದರ್ಶನ್, ಶಿವರಾಜ್ ಕುಮಾರ್, ಆದಿತ್ಯ, ಅಂತವರಿಗೆ ಕಂಪ್ಲೀಟ್ ಮಾಸ್ ಸಿನಿಮಾಗಳನ್ನ ಮಾಡಿ ಹೊಸ ಲುಕ್ ನೀಡಿದ್ದರು.

  'ಮೆಜೆಸ್ಟಿಕ್' ಚಿತ್ರ ಖ್ಯಾತಿಯ ನಿರ್ದೇಶಕ ಪಿ ಎನ್ ಸತ್ಯ ನಿಧನ

  ರೌಡಿಸಂ ಸಿನಿಮಾಗಳು ಅಂದ್ರೆ, ಆ ಚಿತ್ರವನ್ನ ಪಿಎನ್ ಸತ್ಯ ನಿರ್ದೇಶನ ಮಾಡಿದ್ರೆ ಹಿಟ್ ಆಗುತ್ತೆ ಎಂಬ ವಾಡಿಕೆಗೆ ಇಂಡಸ್ಟ್ರಿ ಬಂದಿತ್ತು. ಅಷ್ಟರ ಮಟ್ಟಿಗೆ ಸತ್ಯ ಅವರ ನಿರ್ದೇಶನದಲ್ಲಿ ಮೋಡಿ ಮಾಡಿದ್ದರು. ಸುಮಾರು 16 ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಸತ್ಯ 21ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರೂ ಕೂಡ. ಸತ್ಯ ಅವರ ಇಮೇಜ್ ಬದಲಿಸಿದ ಚಿತ್ರಗಳ ಬಗ್ಗೆ ಒಂದು ವಿಶೇಷ ವರದಿ. ಮುಂದೆ ಓದಿ......

  'ಮೆಜೆಸ್ಟಿಕ್'ನಲ್ಲಿ ಸತ್ಯ

  ಪಿ ಎನ್ ಸತ್ಯ ಅವರನ್ನ ನಿರ್ದೇಶಕನೆಂದು ಪರಿಚಯ ಮಾಡಿದ ಸಿನಿಮಾ 'ಮೆಜೆಸ್ಟಿಕ್' ಸಿನಿಮಾ. ದರ್ಶನ್ ನಾಯಕನಾಗಿ ಅಭಿನಯದ ಚೊಚ್ಚಲ ಸಿನಿಮಾ. ಈ ಚಿತ್ರದಿಂದ ದರ್ಶನ್ ಇಮೇಜ್ ಹೇಗೋ ಬದಲಾಯ್ತೋ, ಅದೇ ರೀತಿ ಸತ್ಯ ಅವರ ಇಮೇಜ್ ಕೂಡ ಸಂಪೂರ್ಣವಾಗಿ ಚೇಂಜ್ ಆಯ್ತು. ಇಲ್ಲಿಂದ ಕನ್ನಡಕ್ಕೊಬ್ಬ ಮಾಸ್ ನಿರ್ದೇಶಕನ ಎಂಟ್ರಿ ಆಯ್ತು. ರೆಗ್ಯೂಲರ್ ಚಿತ್ರಗಳಿದ್ದ ಸಮಯದಲ್ಲಿ ರೌಡಿಸಂ ಎಂಬ ರಕ್ತಚರಿತ್ರೆಯನ್ನ ಸೃಷ್ಟಿಸಿದರು.

  ಅಗಲಿದ ಆಪ್ತ ಸ್ನೇಹಿತ ಪಿ.ಎನ್.ಸತ್ಯ ಬಗ್ಗೆ ನಟ ದರ್ಶನ್ ನುಡಿ

  'ಡಾನ್' ಸತ್ಯ

  ಮೊದಲ ಸಿನಿಮಾ ಕಂಪ್ಲೀಟ್ ರೌಡಿಸಂ ಮಾಡಿದ್ದ ಸತ್ಯ ಎರಡನೇ ಚಿತ್ರವನ್ನೂ ಕೂಡ ಅದೇ ಮಾದರಿಯಲ್ಲಿ ನಿರ್ದೇಶನ ಮಾಡಿದ್ರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ 'ಡಾನ್' ಸಿನಿಮಾ ಮಾಡಿದ್ರು. ಈ ಚಿತ್ರದ ಮೂಲಕ ಶಿವಣ್ಣನ ಇಮೇಜ್ ಕೂಡ ಬದಲಿಸಿದ್ರು. ಮನಮೆಚ್ಚಿದ ಹುಡುಗನನ್ನ ಡಾನ್ ಆಗಿ ತೋರಿಸಿದರು.

  ಸತ್ಯನ 'ದಾಸ'

  'ಮೆಜೆಸ್ಟಿಕ್' ನಂತರ ಪಿ ಎನ್ ಸತ್ಯ ಮತ್ತು ದರ್ಶನ್ ಜೋಡಿಯಲ್ಲಿ ಮೂಡಿ ಬಂದ ಎರಡನೇ ಸಿನಿಮಾ ದಾಸ. ಈ ಚಿತ್ರವೂ ಸಂಪೂರ್ಣವಾಗಿ ರೌಡಿಸಂನಿಂದಲೇ ಕೂಡಿತ್ತು. ದರ್ಶನ್ ಕೈಯಲ್ಲಿ ಲಾಂಗ್ ಕೊಟ್ಟು ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಅಂಡರ್ ವರ್ಲ್ಡ್ ಬಿತ್ತರಿಸಿದರು. ಸತತ ಮೂರನೇ ಚಿತ್ರವನ್ನ ಅಂಡರ್ ವರ್ಲ್ಡ್ ಕುರಿತು ಸಿನಿಮಾ ಮಾಡಿ 'ಅಂಡರ್ ವರ್ಲ್ಡ್' ಡೈರೆಕ್ಟರ್ ಅಂತಾನೆ ಖ್ಯಾತಿ ಗಳಿಸಿಕೊಂಡರು.

  ಸಿಗರೇಟ್, ಕುಡಿತದಿಂದ ದೂರವಿದ್ದರೂ ಕ್ಯಾನ್ಸರ್ ಗೆ ಬಲಿಯಾದರು ಪಿ.ಎನ್.ಸತ್ಯ

  ದರ್ಶನ್ 'ಶಾಸ್ತ್ರಿ'

  ದರ್ಶನ್ ಜೊತೆ ಎರಡು ಸಿನಿಮಾ ಹಿಟ್ ಆದ ಬೆನ್ನಲ್ಲೆ ಮತ್ತೊಂದು ಚಿತ್ರಕ್ಕೂ ಕೂಡ ಸತ್ಯ ಅವರು ಆಕ್ಷನ್ ಕಟ್ ಹೇಳಿದ್ರು. ಲವರ್ ಬಾಯ್ ಇಮೇಜ್ ಜೊತೆಗೆ ಮಾಸ್ ರೌಡಿ ಪಾತ್ರದಲ್ಲಿ ದರ್ಶನ್ ಮಿಂಚಿದರು. ಈ ಚಿತ್ರದಲ್ಲೂ ತಮ್ಮ ಮಾಸ್ ಇಮೇಜ್ ಇಟ್ಟು ಸಿನಿಮಾವನ್ನ ಗೆಲ್ಲಿಸಿದ್ದರು ನಿರ್ದೇಶಕ ಸತ್ಯ.

  ಸುದೀಪ್ 'ಗೂಳಿ'

  ದರ್ಶನ್ ಜೊತೆ ಸತತ ಸಿನಿಮಾಗಳನ್ನ ಮಾಡುತ್ತಿದ್ದ ಪಿ ಎನ್ ಸತ್ಯ ಸುದೀಪ್ ಗೆ 'ಗೂಳಿ' ಸಿನಿಮಾ ನಿರ್ದೇಶನ ಮಾಡಿದ್ರು. ಈ ಚಿತ್ರದ ಮೂಲಕ ಸುದೀಪ್ ಅವರಿಗೂ ಮಾಸ್ ಇಮೇಜ್ ಹೆಚ್ಚಿಸಿದ ಖ್ಯಾತ ಸತ್ಯ ಅವರಿಗೆ ಸಲ್ಲುತ್ತೆ.

  ಪಿ.ಎನ್.ಸತ್ಯ ಅವರಿಗೆ ಟ್ವಿಟ್ಟರ್ ನಲ್ಲಿ ನಮನ ಅಂತಿಮ ಸಲ್ಲಿಸಿದ ಸುದೀಪ್

  ನಂತರದ ಸಿನಿಮಾಗಳು ಅಷ್ಟಕಷ್ಟೇ.!

  'ಮೆಜೆಸ್ಟಿಕ್', 'ಡಾನ್', 'ದಾಸ', 'ಸರ್ದಾರ', 'ಶಾಸ್ತ್ರಿ', 'ತಂಗಿಗಾಗಿ', 'ಗೂಳಿ' ಅಂತಹ ಚಿತ್ರಗಳಲ್ಲಿ ಗೆಲುವು ಕಂಡಿದ್ದ ಪಿ ಎನ್ ಸತ್ಯ ಈ ನಡುವೆ ಅದೇನ್ ಆಯ್ತೋ, ನಂತರದ ಚಿತ್ರಗಳು ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿಲ್ಲ. ಈ ಮಧ್ಯೆ ನಾಯಕನಾಗಿ ಕೂಡ ಸತ್ಯ 'ಪಾಗಲ್' ಎಂಬ ಚಿತ್ರದಲ್ಲಿ ಅಭಿನಯಿಸಿದರು. ಆದ್ರೆ, ಆ ಸಿನಿಮಾ ಮಕಾಡೆ ಮಲಗಿತು. ಪ್ರಜ್ವಲ್ ದೇವರಾಜ್ ಗೆ 'ಕೆಂಚ', ಶಿವಣ್ಣನಿಗೆ 'ಹ್ಯಾಟ್ರಿಕ್ ಹೊಡಿಮಗ', 'ಸುಗ್ರೀವ', 'ಜೇಡ್ರಳ್ಳಿ', ದುನಿಯಾ ವಿಜಯ್ ಗೆ 'ಶಿವಾಜಿನಗರ', ಆದಿತ್ಯ ಜೊತೆಯಲ್ಲಿ 'ಬೆಂಗಳೂರು ಅಂಡರ್ ವರ್ಲ್ಡ್' ಮತ್ತು ವಿನೋದ್ ಪ್ರಭಾಕರ್ ಗೆ 'ಮರಿ ಟೈಗರ್' ಸಿನಿಮಾ ನಿರ್ದೇಶಿಸಿದ್ದರು. ಈ ಎಲ್ಲ ಚಿತ್ರಗಳಲ್ಲಿಯೂ ಅಂಡರ್ ವರ್ಲ್ಡ್ ಬಿಡದೆ ಹಿಂಬಾಲಿಸಿದ್ದರು ಎನ್ನುವುದು ವಿಶೇಷ.

  English summary
  A writer and director, Satya made his debut with the Darshan-starrer Majestic, which introduced the actor in a lead role. He followed this up with films like Daasa, Shastri, Gooli with Sudeep; Thangigagi with Shivarajkumar; and Shivajinagara with Duniya Vijay. His last film was Mari Tiger starring Vinod Prabhakar.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more