twitter
    For Quick Alerts
    ALLOW NOTIFICATIONS  
    For Daily Alerts

    ಪಿ.ಶೇಷಾದ್ರಿ ನಿರ್ದೇಶನದಲ್ಲಿ ಸಾಹಿತಿ ಎಸ್‌.ಎಲ್‌.ಭೈರಪ್ಪ ಕುರಿತು ಸಾಕ್ಷ್ಯಚಿತ್ರ

    By Suneel
    |

    ಪಿ.ಶೇಷಾದ್ರಿ ಕನ್ನಡದ ಸದಭಿರುಚಿಯ ಚಲನಚಿತ್ರಗಳ ಪ್ರಮುಖ ನಿರ್ದೇಶಕರು. ಸತತ ಏಳು ಬಾರಿ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪಡೆದ ಭಾರತದ ಏಕೈಕ ನಿರ್ದೇಶಕರು ಎಂಬ ಅಪರೂಪದ ಸಾಧನೆಯು ಇವರದ್ದು. ಈ ಯಶಸ್ವಿ ನಿರ್ದೇಶಕ ಈಗ ಕನ್ನಡದ ಖ್ಯಾತ ಕಾದಂಬರಿಕಾರರಾದ ಎಸ್‌.ಎಲ್.ಭೈರಪ್ಪ ರವರ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಲು ಮುಂದಾಗಿದ್ದಾರೆ.

    ಹೌದು, ಪಿ.ಶೇಷಾದ್ರಿ ರವರು ಫೀಚರ್ ಫಿಲ್ಮ್ ಗಳಿಂದ ಬ್ರೇಕ್ ಪಡೆದಿದ್ದು ಈಗ ಸಾಹಿತಿ ಎಸ್.ಎಲ್‌.ಭೈರಪ್ಪ ರವರ ಜೀವನ ಮತ್ತು ಅವರ ಬರಹಗಳ ಕುರಿತು ಸಾಕ್ಷ್ಯಚಿತ್ರ ನಿರ್ಮಾಣ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ.

    P. Sheshadri is working on a documentary on the Kannada writer S.L. Bhyrappa

    "The Doyen Of Modern Kannada Novels" ಟೈಟಲ್ ಅಡಿಯಲ್ಲಿ ಡಾಕ್ಯುಮೆಂಟರಿ ಮಾಡಲು ಕೇಂದ್ರ ಸಾಹಿತ್ಯ ಅಕಾಡೆಮಿಯು ನಿಯೋಜಿಸಿರುವ ಹಿನ್ನೆಲೆಯಲ್ಲಿ ಈಗ ಪಿ.ಶೇಷಾದ್ರಿ ರವರು ಎಸ್‌.ಎಲ್‌.ಭೈರಪ್ಪ ನವರ ಪ್ರಮುಖ ಕಾದಂಬರಿಗಳನ್ನು ಮತ್ತೆ ಓದುತ್ತಿದ್ದಾರೆ. ಆದರೆ ಇವರು ಹಿಂದೆ ಸಾಹಿತ್ಯ ವಿದ್ಯಾರ್ಥಿ ಆಗಿದ್ದಾಗಲು ಭೈರಪ್ಪ ರವರ ಹಲವು ಕಾದಂಬರಿಗಳನ್ನು ಓದಿದ್ದರು. ಸಾಕ್ಷ್ಯಚಿತ್ರಕ್ಕಾಗಿ ಕಾದಂಬರಿ ಓದುವುದರ ಜೊತೆಗೆ ನಿರ್ದೇಶಕರು ಲೇಖಕರೊಂದಿಗೆ, ಬುದ್ಧಿಜೀವಿಗಳೊಂದಿಗೆ ಮತ್ತು ವಿಮರ್ಶಕರೊಂದಿಗೂ ಹಲವು ತಿಂಗಳುಗಳಿಂದ ಸಂಭಾಷಣೆಯನ್ನು ಸಹ ನಡೆಸುತ್ತಿದ್ದಾರೆ.

    P. Sheshadri is working on a documentary on the Kannada writer S.L. Bhyrappa

    ಎಸ್‌.ಎಲ್‌.ಭೈರಪ್ಪ ನವರು 6 ದಶಕಗಳಿಂದಲೂ ಬರವಣಿಗೆಯಲ್ಲಿ ತೊಡಗಿಕೊಂಡಿದ್ದು 26 ಕಾದಂಬರಿಗಳನ್ನು, 5 ಪ್ರಬಂಧಗಳು ಮತ್ತು ಆತ್ಮಚರಿತ್ರೆ(Bhitti) ಬರೆದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿನ ಇವರ ಕೆಲಸಕ್ಕೆ ಕನ್ನಡ, ಸಂಸ್ಕೃತ ಮತ್ತು ಇಂಗ್ಲೀಷ್ ಭಾಷೆಯೂ ಸೇರಿದಂತೆ ಭಾರತದ ಇತರೆ ಭಾಷೆಗಳಿಂದಲು ವಿಮರ್ಶೆಗಳು ಮತ್ತು ಮೆಚ್ಚುಗೆ ದೊರೆತಿದೆ. ಅಲ್ಲದೇ ಸಾಹಿತ್ಯ ಕ್ಷೇತ್ರದಲ್ಲಿನ ಇವರ ಕೊಡುಗೆಗೆ ಬಿರ್ಲಾ ಫೌಂಡೇಷನ್‌ನಿಂದ 'ಸರಸ್ವತಿ ಸಮ್ಮಾನ್' ಪುರಸ್ಕಾರ ಪಡೆದ ಏಕೈಕ ಕನ್ನಡ ಬರಹಗಾರರು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

    ಈಗಾಗಲೇ ದೂರದರ್ಶನಕ್ಕಾಗಿ 12 ಕ್ಕೂ ಹೆಚ್ಚು ಲೇಖಕರ ಕುರಿತು ಪಿ.ಶೇಷಾದ್ರಿ ರವರು ಡಾಕ್ಯುಮೆಂಟರಿ ನಿರ್ದೇಶನ ಮಾಡಿದ್ದಾರೆ. ಈಗ ಕೇಂದ್ರ ಸಾಹಿತ್ಯ ಆಕಾಡೆಮಿಯ ನಿಯೋಜನೆ ಮೇರೆಗೆ ನಿರ್ಮಿಸಲಿರುವ ಎಸ್.ಎಲ್‌.ಭೈರಪ್ಪ ರವರ ಕುರಿತ ಸಾಕ್ಷ್ಯಚಿತ್ರದಲ್ಲಿ ಅವರ ವೈಯಕ್ತಿಕ ಜೀವನಕ್ಕಿಂತ ಹೆಚ್ಚಾಗಿ ಅವರ ಸಾಹಿತ್ಯದ ಬಗ್ಗೆ ಗಮನ ನೀಡಲಾಗುತ್ತದೆ ಎಂದು ಶೇಷಾದ್ರಿ ರವರು ತಿಳಿಸಿದ್ದಾರೆ.

    P. Sheshadri is working on a documentary on the Kannada writer S.L. Bhyrappa

    ಡಾಕ್ಯುಮೆಂಟರಿಯಲ್ಲಿ ಭೈರಪ್ಪ ರವರ ಕಾದಂಬರಿಯಲ್ಲಿನ ಕೆಲವು ಸೀಕ್ವೆನ್ಸ್‌ಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಅಲ್ಲದೇ ಅವರು ಕಾದಂಬರಿಗಳನ್ನು ಏಕೆ ಬರೆದರು?, ಇದರ ಬಗ್ಗೆ ವಿಮರ್ಶಕರು ಹೇಗೆ ಯೋಚಿಸುತ್ತಾರೆ? ಎಂಬುದನ್ನು ಹೇಳಲಾಗುತ್ತದೆಯಂತೆ. ಭೈರಪ್ಪ ನವರ ಕೆಲವು ಪ್ರಮುಖ ಕಾದಂಬರಿಗಳ ಮೇಲೆಯೇ ಹೆಚ್ಚು ಗಮನ ಹರಿಸಲಿದ್ದು, ಯಾಣ ವಾತಾವರಣ ಕ್ರಿಯೇಟ್ ಮಾಡಲು ಪ್ಲಾನ್ ಮಾಡಿದ್ದು, ಅನುಮತಿ ಸಿಕ್ಕಲ್ಲಿ ಇಸ್ರೋದಲ್ಲಿ ಚಿತ್ರೀಕರಣ ಮಾಡುವ ಬಗ್ಗೆಯೂ ಪಿ.ಶೇಷಾದ್ರಿ ರವರು ಪ್ಲಾನ್ ಮಾಡಿದ್ದಾರೆ.

    English summary
    P. Sheshadri is working on a documentary on the Kannada writer S.L. Bhyrappa. The making has just begun and will focus on the writer and his writing.
    Wednesday, July 26, 2017, 14:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X