»   » ಲಂಡನ್ ಗೆ ಹಾರಲು ಸಜ್ಜಾದ ಶಿವಣ್ಣನ 'ಶಿವಲಿಂಗ'

ಲಂಡನ್ ಗೆ ಹಾರಲು ಸಜ್ಜಾದ ಶಿವಣ್ಣನ 'ಶಿವಲಿಂಗ'

Posted By:
Subscribe to Filmibeat Kannada

ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದನ್ನು ಲಂಡನ್ ನಲ್ಲಿ ಪ್ರದರ್ಶಿಸಲು ಇತ್ತೀಚೆಗೆ ಬ್ಲಾಕ್ ಬಸ್ಟರ್ ಹಿಟ್ ಕಂಡ 'ಶಿವಲಿಂಗ' ಸಿನಿಮಾ ತಂಡ ಯೋಜನೆ ಹಾಕಿಕೊಂಡಿದೆ.

ಈ ತಿಂಗಳು ಮಾರ್ಚ್ 19 ರಂದು ಲಂಡನ್ ನ ಸಫಾರಿ ಸಿನಿಮಾ ಹಾರೋ ಎಂಬಲ್ಲಿ ಸುಮಾರು 650 ಜನ ಪ್ರೇಕ್ಷಕರಿಗೆ 'ಶಿವಲಿಂಗ' ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಲಂಡನ್ ನಲ್ಲಿರುವ ರಿಯೋಬಿನ್ ರಾಜ್ ಪ್ರೊಡಕ್ಷನ್ ನವರು, ಶಿವಣ್ಣ ಮತ್ತು ಪಿ.ವಾಸು ಅವರ ಕಾಂಬಿನೇಷನ್ ನ 'ಶಿವಲಿಂಗ' ಚಿತ್ರ ತಂಡಕ್ಕೆ ಆಹ್ವಾನ ನೀಡಿದ್ದಾರೆ.['ಶಿವಲಿಂಗ' ಚಿತ್ರದ ಬಗ್ಗೆ ಏನೇನು ಮಾತುಗಳು ಕೇಳಿಬರುತ್ತಿವೆ ಗೊತ್ತೇ?]

P Vasu directorial 'Shivalinga' goes to London on March 19

'ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರವೊಂದನ್ನು ಲಂಡನ್ ನಲ್ಲಿ ಪ್ರದರ್ಶನಗೊಳಿಸಲು ಆಹ್ವಾನ ಬಂದಿದ್ದು, ಸಿನಿಮಾವನ್ನು ಬಹಳ ದೊಡ್ಡ ಮಟ್ಟದಲ್ಲಿ ಪ್ರದರ್ಶನಗೊಳಿಸಲು ಆಯೋಜಕರು ನಿರ್ಧರಿಸಿದ್ದಾರೆ'.

'ಅಂದಹಾಗೆ ಈ ಪ್ರೀಮಿಯರ್ ಶೋ ನಲ್ಲಿ 'ಶಿವಲಿಂಗ' ಚಿತ್ರತಂಡದ ಕೆಲವೇ ಕೆಲವು ಮಂದಿ ಹಾಗೂ ಚಿತ್ರದ ನಾಯಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಪಾಲ್ಗೊಳ್ಳಲಿದ್ದಾರೆ'.[ಬಾಲಿವುಡ್ ನಲ್ಲೂ ಸದ್ದು ಮಾಡಲಿದೆಯಾ 'ಶಿವಲಿಂಗ'? ]

P Vasu directorial 'Shivalinga' goes to London on March 19

'ನಾನು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತುಂಬಾ ಉತ್ಸುಕನಾಗಿದ್ದೇನೆ' ಎಂದು ನಿರ್ದೇಶಕ ಪಿ.ವಾಸು ಅವರು ಹೇಳಿಕೊಂಡಿದ್ದಾರೆ.[ತಮಿಳು ನಟ ರಾಘವ ಲಾರೆನ್ಸ್ 'ಶಿವಲಿಂಗ' ರೀಮೇಕ್ ಮಾಡ್ತಾರಾ?]

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಬಹುಭಾಷಾ ನಟಿ ವೇದಿಕಾ ಹಾಗೂ ತಮಿಳು ನಟ ಶಕ್ತಿ ಅವರು ನಟಿಸಿದ್ದ ಹಾರರ್- ಥ್ರಿಲ್ಲರ್ ಸಿನಿಮಾ 'ಶಿವಲಿಂಗ' ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಬೇರೆ ಭಾಷೆಗಳಿಗೂ ರೀಮೇಕ್ ಆಗುವ ಬಗ್ಗೆ ಸುದ್ದಿಯಾಗಿದೆ.

P Vasu directorial 'Shivalinga' goes to London on March 19

ಒಟ್ನಲ್ಲಿ ಬಾಕ್ಸಾಫೀಸ್ ನಲ್ಲೂ ಒಳ್ಳೆಯ ಕಲೆಕ್ಷನ್ ಮಾಡುತ್ತಿರುವ ಶಿವಣ್ಣ ಅಭಿನಯದ 'ಶಿವಲಿಂಗ' ಸಿನಿಮಾ ಇದೀಗ ವಿದೇಶಕ್ಕೆ ಹಾರಲು ಸಜ್ಜಾಗಿದೆ.

English summary
The makers of 'Shivalinga' have achieved a first in Sandalwood a full-fledged premiere before an audience in London on March 19. Kannada Actor Shiva Rajkumar, Actress Vedika in the lead role. The movie is directed by P.Vasu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada