For Quick Alerts
  ALLOW NOTIFICATIONS  
  For Daily Alerts

  ಪಿ ವಾಸು ಡೈರೆಕ್ಟರ್ ಅಲ್ಲ: 'ಆಪ್ತಮಿತ್ರ' ನಿರ್ದೇಶಕನ ಕುರಿತು ರವಿಚಂದ್ರನ್ ಹೀಗೆ ಹೇಳಿದ್ದೇಕೆ?

  |
  Crazy Star Ravichandran said that P Vasu is not a Director | FILMIBEAT KANNADA

  ಕನ್ನಡದಲ್ಲಿ ಆಪ್ತಮಿತ್ರ, ಆಪ್ತರಕ್ಷಕ, ದೃಶ್ಯ, ಶಿವಲಿಂಗ ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ನಿರ್ದೇಶಕ ಪಿ ವಾಸು ಅವರು ''ನಿರ್ದೇಶಕರೇ ಅಲ್ಲ'' ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ.

  ಶಿವರಾಜ್ ಕುಮಾರ್ ನಟನೆಯ 'ಆಯುಷ್ಮಾನ್ ಭವ' ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರವಿಚಂದ್ರನ್, ಪಿ ವಾಸು ಅವರ ವಿಶೇಷ ಪ್ರತಿಭೆ ಬಗ್ಗೆ ಮಾತನಾಡಿದರು. ನಿರ್ದೇಶನಕ್ಕಿಂತ ಅವರು ನಟನೆಯಲ್ಲಿ ಹೆಚ್ಚು ಪರಿಣಿತಿ ಹೊಂದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  'ಏಕಾಂಗಿ' ಎಲ್ಲಾ ಬಿಟ್ಟಾಕಿ, ನಿಮ್ ಸ್ಟೈಲ್ ಸಿನಿಮಾ ಮಾಡಿ: ಸುದೀಪ್

  ''ಪಿ ವಾಸು ಅವರು ನಿರ್ದೇಶಕರಲ್ಲ...ಅವರೊಬ್ಬ ಅತ್ಯುತ್ತಮ ನಟ. ನಿರ್ದೇಶಕರು ಕಥೆ ಬರೆಯುವಾಗ, ಆ ದೃಶ್ಯವನ್ನ ಹೇಗೆ ನಟಿಸಬೇಕು ಎಂದು ಗೊತ್ತಿದ್ರೆ ಮಾತ್ರ ಅವರು ಡೈರೆಕ್ಟರ್ ಆಗುವುದಕ್ಕ ಸಾಧ್ಯ. ಹಾಗಾಗಿ, ಪಿ ವಾಸು ಅವರು ಮೊದಲು ಆಕ್ಟರ್, ನಂತರ ಡೈರೆಕ್ಟರ್'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

  ಪಿ ವಾಸು ನಿರ್ದೇಶನದ ಆಯುಷ್ಮಾನ್ ಭವ ಸಿನಿಮಾ ಮುಂದಿನ ತಿಂಗಳು ತೆರೆಗೆ ಬರ್ತಿದೆ. ಶಿವರಾಜ್ ಕುಮಾರ್, ರಚಿತಾ ರಾಮ್, ಅನಂತ್ ನಾಗ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

  ಟ್ರೇಲರ್ ನೋಡಿಯೇ 'ಪೈಲ್ವಾನ್' ಚಿತ್ರದ ಭವಿಷ್ಯ ಹೇಳಿದ ರವಿಚಂದ್ರನ್

  ದ್ವಾರಕೀಶ್ ಅವರು ಈ ಚಿತ್ರವನ್ನ ನಿರ್ಮಿಸಿರುವುದು ವಿಶೇಷ. ಆಪ್ತಮಿತ್ರ ಚಿತ್ರದ ಬಳಿಕ ದ್ವಾರಕೀಶ್ ಜೊತೆ ಪಿ ವಾಸು ಸಿನಿಮಾ ಮಾಡಿದ್ದಾರೆ. ಈ ಹಿಂದೆ ರವಿಚಂದ್ರನ್ ನಟಿಸಿದ್ದ 'ದೃಶ್ಯ' ಸಿನಿಮಾ ಇದೇ ಪಿ ವಾಸು ಅವರು ನಿರ್ದೇಶನ ಮಾಡಿದ್ದರು.

  ಡಾ ರಾಜ್ ನಟಿಸಿರುವ ಗುರಿ, ವಿಷ್ಣು ನಟನೆಯ ಕಥಾನಾಯಕ, ಜಯಸಿಂಹ, ಜೀವನ ಜ್ಯೋತಿ, ಸಮರ್ಪಣ, ದಾದಾ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಪಿ ವಾಸು ನಿರ್ದೇಶನ ಮಾಡಿದ್ದಾರೆ. ತಮಿಳು, ತೆಲುಗು, ಮಲಯಾಳಂನಲ್ಲೂ ಹೆಚ್ಚು ಸಿನಿಮಾಗಳನ್ನ ಮಾಡಿದ್ದಾರೆ.

  English summary
  Crazy Star Ravichandran was participate in ayushman bhava pre release press meet. he said that P Vasu is not a director. why crazy star said like this?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X