»   » 'ಪ' ಅಕ್ಷರಕ್ಕಿದ್ಯಾ ಅಷ್ಟೊಂದು ಪವರ್: ಯಾಕಿಷ್ಟು ಸುದ್ದಿ? ಏನಿದು ವಿವಾದ?

'ಪ' ಅಕ್ಷರಕ್ಕಿದ್ಯಾ ಅಷ್ಟೊಂದು ಪವರ್: ಯಾಕಿಷ್ಟು ಸುದ್ದಿ? ಏನಿದು ವಿವಾದ?

Posted By:
Subscribe to Filmibeat Kannada
' ಪ ' ಅಕ್ಷರ ಈಗ ಸದ್ಯ ಟಾಕ್ ಆಫ್ ದಿ ಟೌನ್ | Filmibeat Kannada

ಕೆಲವು ಹೆಸರುಗಳು, ಕೆಲವು ವ್ಯಕ್ತಿಗಳೇ ಹಾಗೇ... ಸದಾ ಸುದ್ದಿಯಲ್ಲಿರ್ತಾರೆ. ಅಷ್ಟೇ ಯಾಕೆ ಇವ್ರು ವಿವಾದದಿಂದಲೋ ಅಥವಾ ಒಳ್ಳೆಯ ಸುದ್ದಿಯಿಂದಲೋ ಸದಾ ಸುದ್ದಿಯಲ್ಲಿ ಮಾತ್ರ ಇರ್ತಾರೆ. ಸದ್ಯ ಈಗ ಸುದ್ದಿಯಲ್ಲಿರೋದು 'ಪ' ಅಕ್ಷರದಲ್ಲಿ ಪ್ರಾರಂಭವಾಗುವ ಹೆಸರು ಮತ್ತು ಆ ಪದದಿಂದ ಹೆಸರುಳ್ಳ ವ್ಯಕ್ತಿಗಳು.

ಅಷ್ಟಕ್ಕೂ, ಈ ಹೆಸರುಗಳು ಯಾಕೆ ಸದಾ ಚಾಲ್ತಿಯಲ್ಲಿರುತ್ತೆ.? ಈ ಪದದಿಂದ ಬರುವ ಸಿನಿಮಾಗಳಾಗಲಿ, ವ್ಯಕ್ತಿಗಳಾಗಳಿ ವಿವಾದದ ಸುಳಿಯಲ್ಲಿ ಸಿಲುಕಿಕೊಳ್ತಾರಾ.? ಸದ್ಯ ಈಗ 'ಟಾಕ್ ಆಫ್ ದಿ ಟೌನ್' ಆಗಿರುವ ಆ ವ್ಯಕ್ತಿಗಳು ಮತ್ತು ಸಿನಿಮಾಗಳು ಯಾವುದು.? ಮುಂದೆ ಓದಿ...

ಎಲ್ಲರ ಬಾಯಲ್ಲೂ ಪದ್ಮಾವತಿ

ದೀಪಿಕಾ ಸಿನಿಮಾಗೆ ಈ ಹೆಸರಿಟ್ಟಾಗಿನಿಂದಲೂ ಸಿನಿಮಾ ಬಗ್ಗೆ ಒಂದಲ್ಲಾ ಒಂದು ಸುದ್ದಿ ಆಗುತ್ತಲೇ ಇದೆ. ವಿವಾದಗಳಿಂದಲೋ ಅಥವಾ ಸಿನಿಮಾದ ಪ್ರಾಮುಖ್ಯತೆಯಿಂದಲೋ ಒಟ್ಟಾರೆ ಆರಂಭದಿಂದಲೂ ಪದ್ಮಾವತಿ ಹೆಸರು ಮಾತ್ರ ಚಾಲ್ತಿಯಲ್ಲಿದೆ.

ಪದ್ಮಾವತಿ ವಿಚಾರ ಹೆಚ್ಚು 'ಪ್ರಕಾಶ' ವಾಗಿದೆ

ಪದ್ಮಾವತಿ ಅಂತೆಯೇ 'ಪ್ರಕಾಶ್ ರೈ' ಹೆಸರು ಕೂಡ ತುಂಬಾ ಕೇಳಿ ಬರ್ತಿದೆ. 'ಪ್ರಕಾಶ್ ರೈ' ಮಾತನಾಡಿದ್ರೆ ಸಾಕು ವಿವಾಗಳ ಸುಳಿಯಲ್ಲೇ ಸಿಕ್ಕಿಕೊಳ್ತಿದ್ದಾರೆ. ಸದ್ಯ ಪ್ರಕಾಶ್ ರೈ ದೀಪಿಕಾ ಪರ ಹೋರಾಟಕ್ಕೆ ನಿಂತು ಪ್ರಕಾಶ್ ರ ಹೆಸರು ಕೂಡ ಎಲ್ಲರ ಬಾಯಲ್ಲಿ ಓಡಾಡ್ತಿದೆ.

ಸಿಂಹದ ಮೇಲೆ 'ಪ್ರಕಾಶ್' ರಿಗೆ ಕೋಪ

'ಪದ್ಮಾವತಿ' ಸಿನಿಮಾ ಬಗ್ಗೆ ಮಾತನಾಡೋದಕ್ಕೂ ಮುಂಚಿನಿಂದಲೇ ಪ್ರಕಾಶ್ ರೈ ರ ಮಾತು ಟ್ರೋಲ್ ಮಾಡುವವರ ಪಾಲಿಗೆ ಆಹಾರವಾಗಿದೆ. ಇದಕ್ಕೆ ಗರಂ ಆಗಿರುವ ಪ್ರಕಾಶ್ ಸಂಸದ 'ಪ್ರತಾಪ್ ಸಿಂಹ'ರಿಗೆ ಲಾಯರ್ ನೋಟೀಸ್ ನೀಡಿದ್ದಾರೆ . ಇದರಿಂದ 'ಪ್ರತಾಪ್ ಸಿಂಹ'ರ ಹೆಸರು ಕೂಡ ಚಾಲ್ತಿಯಲ್ಲಿದೆ.

'ಪಿ.ಆರ್.ಕೆ' ಆಡಿಯೋ ಮೂಲಕ ಸಖತ್ ಸೌಂಡ್

ಸ್ಯಾಂಡಲ್ ವುಡ್ ನ 'ಪವರ್ ಸ್ಟಾರ್' ಕೂಡ ಸೋಷಿಯಲ್ ನೆಟ್ ವರ್ಕ್ ನಲ್ಲಿ ಬಾರಿ ಸೌಂಡ್ ಮಾಡ್ತಿದ್ದಾರೆ. 'ಪಿ.ಆರ್.ಕೆ' ಆಡಿಯೋ ಲಾಂಚ್ ಆಗುತ್ತೆ ಅಂತ ಒಂದು ತಿಂಗಳಿನಿಂದ ಪ್ರೇಕ್ಷಕರು ಕಾದಿದ್ದಾರೆ. ಫೈನಲಿ ನಾಳೆ (ನವೆಂಬರ್ 24) ಆಡಿಯೋ ಕಂಪನಿಗೆ ಚಾಲನೆ ಸಿಗಲಿದೆ.

ಕಿರುತೆರೆಯನ್ನೂ ಬಿಡದ 'ಪ'

ಜನ ಸಾಮಾನ್ಯರ ಮಧ್ಯೆ, ಸೋಷಿಯಲ್ ಮಿಡಿಯಾ, ಬಿಗ್ ಸ್ಕ್ರೀನ್ ಮಾತ್ರವಲ್ಲ ಸ್ಮಾಲ್ ಸ್ಕ್ರೀನ್ ನಲ್ಲೂ 'ಪ' ಅಕ್ಷರದ್ದೇ ಮಾತು. ಪುನೀತ್ ರಾಜ್ ಕುಮಾರ್ ನಡೆಸಿ ಕೊಡುವ ಫ್ಯಾಮಿಲಿ ಪವರ್ ರಿಯಾಲಿಟಿ ಶೋ ಇದೇ ವಾರ (ನವೆಂಬರ್ 25)ರಿಂದ ಶುರುವಾಗ್ತಿದೆ.

English summary
Padmavathi, Pratap Simha, Prakash Rai, PRK Audio are in talk of the town.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada