Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೇಳಲು ಸಿದ್ಧರಾಗಿ.. ಬರ್ತಿದೆ 'ಪೈಲ್ವಾನ್' ಚಿತ್ರದ ಮೊದಲ ಹಾಡು
'ಪೈಲ್ವಾನ್' ಟೀಸರ್ ಸೂಪರ್ ಹಿಟ್ ಆಗಿದೆ. ಇದೀಗ ಹಾಡುಗಳನ್ನು ಕೇಳುವ ಸಮಯ ಬಂದಿದೆ. ಸಿನಿಮಾದ ಮೊದಲ ಹಾಡು ನಾಳೆ (ಗುರುವಾರ) ರಿಲೀಸ್ ಆಗುತ್ತಿದೆ.
ಸಿನಿಮಾದ ಮೊದಲ ಹಾಡು ಟೈಟಲ್ ಸಾಂಗ್ ಆಗಿದೆ. 'ಬಂದ ನೋಡಿ ಪೈಲ್ವಾನ್..' ಎಂಬ ಹಾಡು ಗುರುವಾರ ಸಂಜೆ 06 ಗಂಟೆ 03 ನಿಮಿಷಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ, ಬಂದ ನೋಡು ಪೈಲ್ವಾನ್ ಬೀಟ್ ಟೀಸರ್ ಮೂಲಕ ಗಮನ ಸೆಳೆದಿತ್ತು. ಅದರ ಥೀಮ್ ಹಾಡನ್ನು ಅಭಿಮಾನಿಗಳು ನಾಳೆ ಕೇಳಬಹುದಾಗಿದೆ.
ಪೈಲ್ವಾನ್ ವಿತರಣೆ ಹಕ್ಕು ಪಡೆದ ಕಾರ್ತಿಕ್ ಗೌಡ
ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ. 'ಹೆಬ್ಬುಲಿ' ನಂತರ ಮತ್ತೆ ಸುದೀಪ್ ಚಿತ್ರದ ಜನ್ಯ ಮ್ಯೂಸಿಕ್ ನೀಡಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಈ ಹಾಡನ್ನು ಬರೆದಿದ್ದಾರೆ. ಲಹರಿ ಮ್ಯೂಸಿಕ್ ನಲ್ಲಿ ಹಾಡುಗಳು ಹೊರಬರಲಿದೆ.
ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲೆಯಾಳಂ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಬೇರೆ ಭಾಷೆಯ ಹಾಡುಗಳು ಕೂಡ ನಾಳೆಯೇ ಬಿಡುಗೆಯಾಗುತ್ತಿವೆ. ಸಿನಿಮಾದಲ್ಲಿ ಆರು ಹಾಡುಗಳು ಇದೆಯಂತೆ.
ಕುರುಕ್ಷೇತ್ರ ಮಾತ್ರವಲ್ಲ ಪೈಲ್ವಾನ್ ಗೆ ಎದುರಾಗಲಿವೆ ಮೂರು ದೊಡ್ಡ ಚಿತ್ರಗಳು.!
ಕೃಷ್ಣ ಈ ಸಿನಿಮಾದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಕೆ ಆರ್ ಜಿ ಸ್ಟೂಡಿಯೋ ಮೂಲಕ ಚಿತ್ರದ ವಿತರಣೆ ಆಗುತ್ತಿದೆ. ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರ ಆಗಸ್ಟ್ 29 ರಂದು ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ.