ಬಹುನಿರೀಕ್ಷಿತ 'ಪೈಲ್ವಾನ್' ಟ್ರೇಲರ್ ಹೊರ ಬಂತು

Recommended Video

Pailwaan trailer breakdown | ಪೈಲ್ವಾನ್ ಟ್ರೈಲರ್ ಬ್ರೇಕ್ಡೌನ್ | FILMIBEAT KANNADA

'ಪೈಲ್ವಾನ್' ಹಾಡುಗಳು ಈಗಾಗಲೇ ಹಿಟ್ ಆಗಿದೆ. ಹಾಡುಗಳು ನಂತರ ಇದೀಗ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಲಹರಿ ಯೂ ಟ್ಯೂಬ್ ಚಾನಲ್ ನಲ್ಲಿ ಇಂದು ಮಧ್ಯಾಹ್ನ ಒಂದು ಗಂಟೆಗೆ ಟ್ರೇಲರ್ ರಿಲೀಸ್ ಆಗಿದೆ.

ಟ್ರೇಲರ್ ನಲ್ಲಿ ಆಕ್ಷನ್ ಮತ್ತು ಡೈಲಾಗ್ ಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ''ನಾನು ಗೆಲ್ತಿನೋ.. ಇಲ್ವೋ.. ನನಗೆ ಗೊತ್ತಿಲ್ಲ ಆದ್ರೆ, ಸೋಲನ್ನು ಮಾತ್ರ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.'' ಎಂದು ಸುದೀಪ್ ಅಬ್ಬರಿಸಿದ್ದಾರೆ. ಸುದೀಪ್ ಪಾತ್ರದ ಹೆಸರು ಕಿಚ್ಚ ಎನ್ನುವುದು ಟ್ರೇಲರ್ ಮೂಲಕ ತಿಳಿದಿದೆ.

Pailwaan Kannada Movie Trailer Out

ಕುಸ್ತಿ ಪಟುವಾದ ಸುದೀಪ್ ರಾಷ್ಟ್ರ ಮಟ್ಟದಲ್ಲಿ ಆಟ ಆಡುವ ಆಸೆ ಹೊಂದಿರುತ್ತಾರೆ. ಅಂದಹಾಗೆ, ಟ್ರೇಲರ್ ಸುದೀಪ್ ಬಿಟ್ಟರೆ ಬೇರೆಯವರಿಗೆ ಹೆಚ್ಚು ಅವಕಾಶ ನೀಡಿಲ್ಲ. ಎರಡ್ಮೂರು ಬಾರಿ ಸುನೀಲ್ ಶೆಟ್ಟಿ ಹಾಗೂ ಒಂದು ಫ್ರೇಮ್ ನಲ್ಲಿ ನಾಯಕಿ ಬರುತ್ತಾರೆ. ಚಿತ್ರದ ಮೇಕಿಂಗ್ ಗಮನ ಸೆಳೆಯುತ್ತಿದೆ.

ಸುದೀಪ್ ಗೆ ಆಕಾಂಕ್ಷ ಸಿಂಗ್ ಜೋಡಿಯಾಗಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾ. ಜೊತೆಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೂಡ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದಾರೆ.

ಕೃಷ್ಣ ಈ ಸಿನಿಮಾದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ನಾಗೇಂದ್ರ ಸಾಹಿತ್ಯ ಹಾಡಿನಲ್ಲಿದೆ. ಸಿನಿಮಾ ಸಪ್ಟೆಂಬರ್ 12 ರಂದು ರಾಜ್ಯಾದಂತ್ಯ ಬಿಡುಗಡೆ ಆಗಲಿದೆ. ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

'ಪೈಲ್ವಾನ್' ಟ್ರೇಲರ್ ನೋಡಲು ಇಲ್ಲಿ ಕ್ಲಿಕ್ ಮಾಡಿ

More from Filmibeat

English summary
Actor Sudeep's Pailwaan kannada movie trailer out. The movie will be releasing on Saptember 12th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X