For Quick Alerts
  ALLOW NOTIFICATIONS  
  For Daily Alerts

  ಸಣ್ಣ ಚಿತ್ರಗಳ ಪಾಲಿಗೆ ಸ್ಟಾರ್ ನಟರೇ ವಿಲನ್.!

  |

  Recommended Video

  ಕುರುಕ್ಷೇತ್ರ, ಪೈಲ್ವಾನ್ ಅಂತಹ ಬಿಗ್ ಬಜೆಟ್ ಸಿನಿಮಾಗಳಿಂದ ತೊಂದರೆ ಎದುರಿಸುತ್ತಿದೆ ಸಣ್ಣ ಸಿನಿಮಾಗಳು

  ಸ್ಯಾಂಡಲ್ ವುಡ್ ನಲ್ಲಿ ಸದ್ಯ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಕೋಟಿ ಕೋಟಿ ಬಜೆಟ್ ನ ಸ್ಟಾರ್ ನಟರ ಸಿನಿಮಾಗಳು ಇನ್ನೇನು ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಗೆ ಬರುತ್ತೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಹಿಂದೆ ಮುಂದೆ ಆಗುವ ಮೂಲಕ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಗ್ ನಟರ ಸಿನಿಮಾಗಳ ಜೊತೆಗೆ ಉಳಿದ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ.

  ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಫಿಕ್ಸ್ ಆಗದೆ ಇರುವುದು ಉಳಿದ ಸಿನಿಮಾಗಳ ನಿರ್ಮಾಪಕರು ಯಾವಾಗ ಬಿಡುಗಡೆಗೆ ಮಾಡಬೇಕು ಎನ್ನುವ ಗೊಂದಲದಲ್ಲಿದ್ದಾರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಎಂಟ್ರಿ ಕೊಡುತ್ತೆ ಎಂದ ಕುರುಕ್ಷೇತ್ರ ಈಗ ವಾರಕ್ಕು ಮೊದಲು ರಿಲೀಸ್ ಆಗುತ್ತಿದೆ. ಇನ್ನು ಪೈಲ್ವಾನ್ ಸಿನಿಮಾದ ರಿಲೀಸ್ ಡೇಟ್ ಕೂಡ ಮುಂದಕ್ಕೆ ಹೋಗಿದೆ ಜೊತೆಗೆ ಅವನೇ ಶ್ರೀಮನ್ನಾರಾಯಾಣ ಸಿನಿಮಾ ಕೂಡ ರಿಲೀಸ್ ಡೇಟ್ ನಿಗದಿ ಮಾಡಿಲ್ಲ.

  ಇದರಿಂದ ಉಳಿದ ಸಿನಿಮಾಗಳು ಯಾವಾಗ ಚಿತ್ರಮಂದಿರಕ್ಕೆ ಬರಬೇಕು ಎನ್ನುವ ಗೊಂದಲದಲ್ಲಿ ಒದ್ದಾಡುತ್ತಿವೆ. ಸ್ಟಾರ್ ನಟರ ಸಿನಿಮಾಗಳು ಅಂದ್ಮಾನೆ ಸಹಜವಾಗಿಯೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಿರುತ್ತೆ. ಆಗಸ್ಟ್ ಮೊದಲ ವಾರದಲ್ಲಿ ಕುರುಕ್ಷೇತ್ರ ರಿಲೀಸ್ ಆದ್ರೆ ಒಂದೆರಡು ವಾರದ ಅಂತರದಲ್ಲಿ ಟಾಲಿವುಡ್ ನ ಸಾಹೋ ಸಿನಿಮಾ ತೆರೆಗೆ ಬರುತ್ತಿದೆ.

  ಮತ್ತೊಂದೆಡರು ವಾರಗಳ ಅಂತರದಲ್ಲಿ ಪೈಲ್ವಾನ್ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಇದರಿಂದ ಉಳಿದ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗುವುದು ಕಷ್ಟ. ಜೊತೆಗೆ ದೊಡ್ಡ ಸಿನಿಮಾಗಳು ರಿಲೀಸ್ ಡೇಟ್ ನಿಗದಿ ಮಾಡದಿರುವುದು ಉಳಿದ ಸಿನಿಮಾಗಳ ರಿಲೀಸ್ ಗೆ ಪ್ಲಾನ್ ಮಾಡಲು ಸಾಧ್ಯವಾಗುತ್ತಿಲ್ಲ.

  ವರಮಹಾಲಕ್ಷ್ಮಿಗೆ ಇಲ್ಲ ಸಿನಿಮಾಗಳು

  ವರಮಹಾಲಕ್ಷ್ಮಿಗೆ ಇಲ್ಲ ಸಿನಿಮಾಗಳು

  ಹಬ್ಬದ ಸಮಯದಲ್ಲಿ ಸಿನಿಮಾಗಳನ್ನು ರಿಲೀಸ್ ಮಾಡಬೇಕೆಂಬುವುದು ಚಿತ್ರತಂಡದ ಕನಸಾಗಿರುತ್ತೆ. ಅದರಂತೆ ಈ ಬಾರಿಯ ವರಮಹಾಲಕ್ಷ್ಮಿ ಹಬ್ಬಕ್ಕೆ ಸಾಕಷ್ಟು ಸಿನಿಮಾಗಳು ರಿಲೀಸ್ ಗೆ ತಯಾರಿ ಮಾಡಿಕೊಂಡಿದ್ದವು. ಆದ್ರೆ ಕುರುಕ್ಷೇತ್ರ ಮತ್ತು ಪೈಲ್ವಾನ್ ಅಂತಹ ದೊಡ್ಡ ಸಿನಿಮಾಗಳು ಎಂಟ್ರಿ ಕೊಡುತ್ತಿವೆ ಎಂದು ಸಣ್ಣಪುಟ್ಟ ಸಿನಿಮಾಗಳು ರಿಲೀಸ್ ಡೇಟ್ ಅನ್ನು ಮುಂದೂಡಿಕೊಂಡು ಸುಮ್ಮನಾಗಿದ್ದವು. ಆದ್ರೀಗ ಕುರುಕ್ಷೇತ್ರ ಮತ್ತು ಪೈಲ್ವಾನ್ ಸಿನಿಮಾಗಳ ರಿಲೀಸ್ ಡೇಟ್ ಹಿಂದೆ ಮುಂದೆ ಆಗುವ ಮೂಲಕ ಹಬ್ಬಕ್ಕೀಗ ಯಾವ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ.

  ಫೈನಲ್ ಆಗಿಲ್ಲ ಪೈಲ್ವಾನ್ ರಿಲೀಸ್ ಡೇಟ್

  ಫೈನಲ್ ಆಗಿಲ್ಲ ಪೈಲ್ವಾನ್ ರಿಲೀಸ್ ಡೇಟ್

  ಬಿಗ್ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾಗಳ ರಿಲೀಸ್ ಡೇಟ್ ಪಕ್ಕ ಫಿಕ್ಸ್ ಆದರೆ, ಉಳಿದ ಸಣ್ಣ ಸಣ್ಣ ಸಿನಿಮಾಗಳು ಯಾವಾಗ ರಿಲೀಸ್ ಮಾಡಬೇನ್ನುವ ತಯಾರಿ ಮಾಡಿಕೊಳ್ಳುತ್ತಿವೆ. ಸದ್ಯ 'ಕುರುಕ್ಷೇತ್ರ' ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಆದ್ರಿನ್ನು 'ಪೈಲ್ವಾನ್' ಯಾವಾಗ ತೆರೆಗೆ ಬರುತ್ತೆ ಎನ್ನುವುದು ಅಧಿಕೃತವಾಗಿ ಬಹಿರಂಗ ಆಗಿಲ್ಲ. ಆಗಸ್ಟ್ ತಿಂಗಳ ಕೊನೆಯಲ್ಲಿ 'ಪೈಲ್ವಾನ್' ತೆರೆಗೆ ಬರುತ್ತೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಆಗಸ್ಟ್ ಕೊನೆ ಸೆಪ್ಟಂಬರ್ ಪ್ರಾರಂಭ ಅಂದ್ರೆ ಗಣೇಶ ಹಬ್ಬದ ಸಮಯ. ಒಂದು ವೇಳೆ ಆಗಸ್ಟ್ ನಲ್ಲಿ ರಿಲೀಸ್ ಆಗಿಲ್ಲ ಅಂದ್ರೆ, ಗಣೇಶ ಹಬ್ಬಕ್ಕೂ ಯಾವ ಸಿನಿಮಾಗಳು ರಿಲೀಸ್ ಆಗದೆ ಇರುವ ಸ್ಥಿತಿ ಎದುರಾದರು ಅಚ್ಚರಿ ಇಲ್ಲ.

  ರಿಲೀಸ್ ಗೆ ರೆಡಿಯಾಗಿವೆ ಸಾಲು ಸಾಲು ಸಿನಿಮಾ

  ರಿಲೀಸ್ ಗೆ ರೆಡಿಯಾಗಿವೆ ಸಾಲು ಸಾಲು ಸಿನಿಮಾ

  ಬಿಗ್ ಬಜೆಟ್ ಸಿನಿಮಾಗಳನ್ನು ಹೊರತುಪಡಿಸಿ ಉಳಿದ ಸಿನಿಮಾಗಳ ರಿಲೀಸ್ ಸಂಖ್ಯೆ ಹೆಚ್ಚಾಗಿವೆ. ಬಟರ್ ಫ್ಲೈ, ಭೀಮಸೇನ ನಳಮಹರಾಜ, ದಶರಥ, ನನ್ನ ಪ್ರಕಾರ, ಮನೆ ಮಾರಟಕ್ಕಿದೆ, ಭಿನ್ನ, ಗಿಮಿಕ್, ಗಿರ್ಮಿಟ್, ಹುಲಿದುರ್ಗ, ಬಿಚ್ಚುಗತ್ತಿ ಚಿತ್ರಗಳು ಸೇರಿದಂತೆ ಸಾಕಷ್ಟು ಸಿನಿಮಾಗಳು ರಿಲೀಸ್ ಗೆ ಭರ್ಜರಿ ತಯಾರಿಗಳನ್ನು ಮಾಡಿಕೊಳ್ಳುತ್ತಿವೆ. ಆದ್ರೆ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಫಿಕ್ಸ್ ಆಗದೆ ಇರುವುದು ಈ ಸಿನಿಮಾಗಳ ರಿಲೀಸ್ ಯಾವಾಗ ಎನ್ನುವ ಗೊಂದಲದಲ್ಲಿ ಸಿಲುಕಿವೆ.

  ಚಿತ್ರಮಂದಿರಗಳ ಸಮಸ್ಯೆ

  ಚಿತ್ರಮಂದಿರಗಳ ಸಮಸ್ಯೆ

  ಸದ್ಯ ರಿಲೀಸ್ ಆಗುತ್ತಿರುವ ಬಿಗ್ ಬಜೆಟ್ ಚಿತ್ರಗಳು ದೇಶದಾದ್ಯಂತ ಸಾವಿರಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿವೆ. ಅಲ್ಲದೆ ಬೇರೆ ಬೇರೆ ಭಾಷೆಯಲ್ಲು ತೆರೆಕಾಣುತ್ತಿವೆ. ಇದರಿಂದ ಸಣ್ಣ ಸಿನಿಮಾಗಳಿಗೆ ಚಿತ್ರಮಂದಿರ ಸಿಗುವುದು ಕಷ್ಟಸಾಧ್ಯವಾಗಿದೆ. ಹಾಗಾಗಿ ದೊಡ್ಡ ಬಜೆಟ್ ಸಿನಿಮಾಗಳು ಮೊದಲೆ ರಿಲೀಸ್ ಡೇಟ್ ನಿಗದಿ ಮಾಡಿದ್ರೆ, ಉಳಿದ ಸಿನಿಮಾಗಳು ರಿಲೀಸ್ ಬಗ್ಗೆ ಪ್ಲಾನ್ ಮಾಡಿಕೊಳ್ಳಬಹುದು. ಆದ್ರೀಗ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಅಧಿಕೃತವಾಗಿ ಫಿಕ್ಸ್ ಆಗದೆ ಇರುವುದು ಸಣ್ಣ ಚಿತ್ರಗಳ ಸ್ಥಿತಿ ಅಂತತ್ರವಾಗಿವೆ.

  English summary
  Big budget films like Pailwan and Avane Srimannarayana Release date are not a fix is problem of small movies.
  Wednesday, July 17, 2019, 11:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X