»   » ಭಾರತೀಯ ಚಿತ್ರಗಳಿಗೆ ನಿಷೇಧ ಹೇರಿದ ಪಾಕಿಸ್ತಾನ

ಭಾರತೀಯ ಚಿತ್ರಗಳಿಗೆ ನಿಷೇಧ ಹೇರಿದ ಪಾಕಿಸ್ತಾನ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಪಾಕಿಸ್ತಾನದ ಸ್ಥಳೀಯ ಕೋರ್ಟ್ ಮಂಗಳವಾರ (ನ.19) ಭಾರತೀಯ ಚಲನಚಿತ್ರಗಳ ಪ್ರದರ್ಶನಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಹಿಂದಿ ಸೇರಿದಂತೆ ಯಾವುದೇ ಭಾರತೀಯ ಭಾಷೆ ಚಿತ್ರಗಳು ಪಾಕಿಸ್ತಾನದಲ್ಲಿ ಪ್ರದರ್ಶನಗೊಳ್ಳಬೇಕಾದರೆ ಕೆಲವು ಕಠಿಣ ನಿಯಮಗಳನ್ನು ಪಾಲಿಸಲೇಬೇಕು ಎಂದು ಲಾಹೋರ್ ಹೈಕೋರ್ಟಿನ ಜಸ್ಟೀಸ್ ಖಾಲಿದ್ ಮಹಮೂದ್ ಹೇಳಿದ್ದಾರೆ.

ಭಾರತೀಯರ ವಿರುದ್ಧ ಸದಾ ಕತ್ತಿ ಮಸೆಯುವ ವಿವಾದಿತ ಟಿವಿ ಟಾಕ್ ಶೋ ನಿರೂಪಕ ಮುಬ್ಶಿರ್ ಲುಕ್ಮನ್ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ಲಾಹೋರ್ ಹೈಕೋರ್ಟ್ ಮೇಲ್ಕಂಡ ಮಧ್ಯಂತರ ಆದೇಶ ಹೊರಡಿಸಿದೆ.

ಪಾಕಿಸ್ತಾನಿ ನೆಲದ ನಿಯಮದ ಪ್ರಕಾರ ವಿದೇಶಿ ಚಿತ್ರಗಳಿಗೆ ಅವಕಾಶ ಸೀಮಿತವಾಗಿದೆ. ಭಾರತೀಯ ಚಿತ್ರಗಳು ಸಂಪೂರ್ಣ ಭಾರತದಲ್ಲೇ ಚಿತ್ರೀಕರಣವಾಗಿರುತ್ತದೆ. ಭಾರತೀಯರೇ ಹಣ ಹೂಡಿಕೆ ಮಾಡಿರುತ್ತಾರೆ. ಚಿತ್ರ ವಿತರಣೆ ಸೇರಿದಂತೆ ಎಲ್ಲವೂ ಭಾರತೀಯರ ಕೈಯಲ್ಲೇ ಇರುತ್ತದೆ. ಆದರೆ, ನಕಲಿ ಪ್ರಮಾಣ ಪತ್ರಗಳನ್ನು ನೀಡಿ ಇಲ್ಲಿನ ಪ್ರಾಯೋಜಕರ ಹೆಸರಿನಡಿಯಲ್ಲಿ ಭಾರತೀಯ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಮುಬ್ಶಿರ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

Pakistan court imposes restriction on Indian movies

ಮುಬ್ಶಿರ್ ಅರ್ಜಿಯನ್ನು ಪುರಸ್ಕರಿಸಿದ ಲಾಹೋರ್ ಕೋರ್ಟ್ ನಕಲಿ ಪ್ರಮಾಣ ಪತ್ರದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದೆ. ಜತೆಗೆ ಫಿಲಂ ಸೆನ್ಸಾರ್ ಮಂಡಳಿ ಹಾಗೂ ವಾಣಿಜ್ಯ ಮಂಡಳಿಗೂ ಈ ಬಗ್ಗೆ ಪರಿಶೀಲನೆ ನಡೆಸಿ ನ.25ರೊಳಗೆ ವರದಿ ನೀಡುವಂತೆ ಸೂಚಿಸಿದೆ.

ಟಿವಿಗಳಿಗೆ ದಂಡ: ಭಾರತೀಯ ಹಾಗೂ ವಿದೇಶಿ ವಿಚಾರಗಳ ಬಗ್ಗೆಯೇ ಹೆಚ್ಚು ಪ್ರಕಟಿಸಿದ್ದಕ್ಕಾಗಿ ಪಾಕಿಸ್ತಾನದ 10 ಟಿವಿ ಚಾನೆಲ್ ಳು ಭಾರಿ ಮೊತ್ತದ ದಂಡ ತೆರಬೇಕಾಗಿದ ಪರಿಸ್ಥಿತಿ ಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಗತ್ಯಕ್ಕಿಂತ ಹೆಚ್ಚು ಭಾರತದ ಸುದ್ದಿಗಳು, ವಿದೇಶಿ ವಿಚಾರಗಳ ಬಗ್ಗೆ ಪ್ರಸಾರ ಮಾಡಿದ 10 ಮನೋರಂಜನಾ ಚಾನೆಲ್‌ಗಳಿಗೆ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣಾ ಪ್ರಾಧಿಕಾರ ಬರೋಬ್ಬರಿ 1 ಕೋಟಿ ದಂಡ ವಿಧಿಸಿದೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ವರ್ತನೆ ತೋರದಂತೆ ಎಚ್ಚರಿಕಾ ಪತ್ರವನ್ನೂ ರವಾನಿಸಿದೆ.

ಪಾಕಿಸ್ತಾನದಲ್ಲಿರುವ ಖಾಸಗಿ ಟಿವಿ ಚಾನೆಲ್ ಗಳು ಶೇ.10ರಷ್ಟು ವಿದೇಶಿ ವಿಚಾರಗಳನ್ನು ಮಾತ್ರ ಪ್ರಸಾರ ಮಾಡುವ ಹಕ್ಕು ಹೊಂದಿವೆ. ಆ ಶೇ.10ರಲ್ಲಿ ಶೇ.60ರಷ್ಟು ಭಾರತಕ್ಕೆ ಸಂಬಂಧಿಸಿದ ವಿಚಾರಗಳು ಹಾಗೂ ಶೇ.40ರಷ್ಟು ಇಂಗ್ಲಿಷ್ ಅಥವಾ ಇತರೆ ಸುದ್ದಿಗಳನ್ನು ಪ್ರಸಾರ ಮಾಡಬಹುದಾಗಿದೆ. ಆದರೆ ಈ ಮಿತಿಯನ್ನು ಮೀರಿದ್ದಕ್ಕಾಗಿ ಚಾನೆಲ್ ಗಳಿಗೆ ಪ್ರಾಧಿಕಾರ ದಂಡ ವಿಧಿಸಿದೆ. (ಪಿಟಿಐ)

English summary
A Pakistani court today(Nov.19) imposed restrictions on the screening of Indian films across the country and laid down certain conditions for their release. Justice Khalid Mahmood of the Lahore High Court issued the interim order in response to a petition filed by controversial TV talk show host Mubshir Lucman, a former film producer known for his anti-India stance.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada