For Quick Alerts
  ALLOW NOTIFICATIONS  
  For Daily Alerts

  ಟಿಕ್‌-ಟಾಕ್ ಬ್ಯಾನ್‌ನಿಂದ ಬೇಸರಗೊಂಡು ದೇಶ ತೊರೆದ ಟಿಕ್‌-ಟಾಕ್ ಸ್ಟಾರ್

  |

  ಟಿಕ್-ಟಾಕ್ ಬ್ಯಾನ್ ಆಗಿರುವುದು ಹಳೆಯ ವಿಷಯ, ಭಾರತದಲ್ಲಿ ಮಾತ್ರವಲ್ಲ ಅಮೆರಿಕದಲ್ಲೂ ಚೀನಾದ ಈ ಆಪ್ ನಿಷೇಧಿಸಲಾಗಿದೆ.

  ಆಶ್ಚರ್ಯಕರ ಬೆಳವಣಿಗೆಯಲ್ಲಿ ಚೀನಾದ ಮಿತ್ರ ದೇಶ ಪಾಕಿಸ್ತಾನದಲ್ಲೂ ಟಿಕ್‌-ಟಾಕ್ ಬ್ಯಾನ್ ಮಾಡಲಾಗಿದೆ. ಟಿಕ್‌-ಟಾಕ್ ಬ್ಯಾನ್‌ನಿಂದಾಗಿ ಹಲವು ಟಿಕ್‌-ಟಾಕ್ ಪ್ರೇಮಿಗಳು ಭಾರಿ ಆಘಾತ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಸೆಲೆಬ್ರಿಟಿಯೊಬ್ಬರಂತೂ ಟಿಕ್‌-ಟಾಕ್ ಇರದ ದೇಶದಲ್ಲಿ ಇರುವುದೇ ಇಲ್ಲ ಎಂದು ನಿರ್ಧರಿಸಿ ದೇಶವನ್ನೇ ತೊರೆಯಲು ನಿರ್ಧರಿಸಿದ್ದಾರೆ.

  ಹೌದು, ಪಾಕಿಸ್ತಾನದ ಖ್ಯಾತ ಟಿಕ್‌-ಟಾಕರ್ ಜನ್ನತ್ ಮಿರ್ಜಾ ದೇಶವನ್ನು ತೊರೆದು ಹೋಗುವುದಾಗಿ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಟಿಕ್‌-ಟಾಕ್ ಬ್ಯಾನ್ ಆಗಿದ್ದಕ್ಕಾಗಿ ಅವರು ಈ ನಿರ್ಣಯ ಮಾಡಿದ್ದಾರೆ. ಈಗಾಗಲೇ ವಿದೇಶದಲ್ಲಿರುವ ಜನ್ನತ್, ಅಲ್ಲಿಯೇ ನೆಲೆಸುವುದಾಗಿ ಹೇಳಿದ್ದಾರೆ.

  ಟಿಕ್‌-ಟಾಕ್ ವಿಡಿಯೋಗಳಿಂದಲೇ ಹಣ ಸಂಪಾದನೆ

  ಟಿಕ್‌-ಟಾಕ್ ವಿಡಿಯೋಗಳಿಂದಲೇ ಹಣ ಸಂಪಾದನೆ

  ಟಿಕ್‌-ಟಾಕ್ ವಿಡಿಯೋಗಳನ್ನು ಮಾಡಿಯೇ ಖ್ಯಾತಿ ಗಳಿಸಿದ್ದ ಜನ್ನತ್ ಮಿರ್ಜಾ ಟಿಕ್‌-ಟಾಕ್ ಖಾತೆಗೆ ಒಂದು ಕೋಟಿಗೂ ಹೆಚ್ಚು ಮಂದಿ ಫಾಲೋವರ್‌ಗಳಿದ್ದರು. ಟಿಕ್‌-ಟಾಕ್‌ ವಿಡಿಯೋಗಳಿಂದಲೇ ಕೋಟ್ಯಂತರ ಹಣ ಸಂಪಾದಿಸುತ್ತಿದ್ದರು ಜನ್ನತ್ ಮಿರ್ಜಾ.

  ದೇಶ ತೊರೆಯುವ ನಿರ್ಣಯ ಮಾಡಿರುವ ಜನ್ನತ್

  ದೇಶ ತೊರೆಯುವ ನಿರ್ಣಯ ಮಾಡಿರುವ ಜನ್ನತ್

  ಆದರೆ ಮಾಹಿತಿ ಭದ್ರತೆ ಕಾರಣ ನೀಡಿ ಪಾಕಿಸ್ತಾನವು ಟಿಕ್‌-ಟಾಕ್ ಅನ್ನು ನಿಷೇಧಿಸಿದ ನಂತರ ಜನ್ನತ್ ಮಿರ್ಜಾ ತೀವ್ರ ಬೇಸರಗೊಂಡಿದ್ದರು. ಅವರ ಸಂಪಾದನೆಗೆ ಕತ್ತರಿ ಬಿತ್ತು. ಹಾಗಾಗಿ ಅವರು ದೇಶ ತೊರೆಯುವ ನಿರ್ಣಯ ಮಾಡಿದ್ದಾರೆ.

  ಜಪಾನ್ ದೇಶಕ್ಕೆ ವಾಸ್ತವ್ಯ ಬದಲಾಯಿಸುತ್ತಾರಂತೆ ಜನ್ನತ್

  ಜಪಾನ್ ದೇಶಕ್ಕೆ ವಾಸ್ತವ್ಯ ಬದಲಾಯಿಸುತ್ತಾರಂತೆ ಜನ್ನತ್

  ಟಿಕ್‌-ಟಾಕ್ ನಿಷೇಧವಾಗಿರದ ಜಪಾನ್‌ ದೇಶಕ್ಕೆ ಹೋಗುವುದಾಗಿ ಜನ್ನತ್ ಮಿರ್ಜಾ ಹೇಳಿದ್ದಾರೆ. ಆದರೆ ಇದಕ್ಕೆ ಆಕೆಯ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ಆಪ್ ನಿಷೇಧಿಸಿದ್ದಕ್ಕೆ ದೇಶವನ್ನೇ ತೊರೆಯುವ ಮಾತನಾಡಿರುವ ಜನ್ನತ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  ಉಪಾಧ್ಯಕ್ಷನಿಗೆ ವಿಶ್ ಮಾಡಿದ ಅರ್ಜುನ್ ಜನ್ಯ | Arjun Janya | Chikkanna | Upadyaksha | Filmibeat Kannada
  ಹಲವು ದೇಶಗಳಲ್ಲಿ ಟಿಕ್‌-ಟಾಕ್ ಬ್ಯಾನ್

  ಹಲವು ದೇಶಗಳಲ್ಲಿ ಟಿಕ್‌-ಟಾಕ್ ಬ್ಯಾನ್

  ಭಾರತ, ಅಮೆರಿಕ, ಪಾಕಿಸ್ತಾನಗಳಲ್ಲಿ ಟಿಕ್‌-ಟಾಕ್ ಆಪ್ ಅನ್ನು ನಿಷೇಧಿಸಲಾಗಿದೆ. ಟಿಕ್‌-ಟಾಕ್ ಆಪ್ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದೆ ಎಂಬ ಕಾರಣಕ್ಕೆ ಆಪ್ ಅನ್ನು ನಿಷೇಧಿಸಲಾಗಿದೆ. ಟಿಕ್‌-ಟಾಕ್ ಬ್ಯಾನ್ ಆದ ನಂತರ ಅದೇ ಮಾದರಿಯ ಕೆಲವು ಆಪ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

  English summary
  After banning Tik Tok in Pakistan, famous Tik-Tok star Jannat Mirza said she will leave the country.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X