For Quick Alerts
  ALLOW NOTIFICATIONS  
  For Daily Alerts

  ಸದ್ಯದ ಬೆಳವಣಿಗೆ ಕುರಿತು ಜಗ್ಗೇಶ್ ಅಭಿಮಾನಿಗಳ ಬಹಿರಂಗ ವಿವರಣೆ

  |

  ನವರಸ ನಾಯಕ ಜಗ್ಗೇಶ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ನಟನ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ಹಿನ್ನೆಲೆ ಪ್ರೆಸ್ ಮೀಟ್ ಮಾತನಾಡಿದ ಜಗ್ಗೇಶ್ ಪ್ಯಾನ್ ಇಂಡಿಯಾ ಚಿತ್ರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

  ಇವ್ರೆಲ್ಲಾ ದುಡ್ಡು ಬಂದ್ರೆ ತಾಯಿನ ಬೇಕಾದ್ರೂ ಮಾರಿ ಬಿಡ್ತಾರೆ | Jaggesh about Pan india

  ''ಪ್ಯಾನ್ ಇಂಡಿಯಾ ನಮ್ಮನ್ನು ಉದ್ಧಾರ ಮಾಡಲ್ಲ, ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಮಾಡಲಾಗ್ತಿದೆ. ನಮ್ಮವರಿಗೆ ಕೆಲಸ ಸಿಕ್ಕಲ್ಲ'' ಎಂದು ಜಗ್ಗೇಶ್ ಹೇಳಿದ್ದರು. ಈ ಹೇಳಿಕೆ ವಿರುದ್ಧ ಸ್ಟಾರ್ ನಟನ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ಜಗ್ಗೇಶ್ ವಿರುದ್ಧ ಟ್ರೋಲ್ ಮಾಡ್ತಿದ್ದಾರೆ. ಅಸಭ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ಈ ಬೆಳವಣಿಗೆ ಬಗ್ಗೆ ಸ್ವತಃ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದರು. ಇದೀಗ, ಜಗ್ಗೇಶ್ ಅಭಿಮಾನಿಗಳು ಬಹಿರಂಗವಾಗಿ ವಿವರಣೆ ನೀಡಿದ್ದಾರೆ. ಮುಂದೆ ಓದಿ...

  ಜಗ್ಗೇಶ್ ಹೆಸರಿಗೆ ಮಸಿಬಳಿಯುವ ಪ್ರಯತ್ನ

  ಜಗ್ಗೇಶ್ ಹೆಸರಿಗೆ ಮಸಿಬಳಿಯುವ ಪ್ರಯತ್ನ

  ''ಆದರೆ ಕೆಲ ಕಿಡಿಗೇಡಿಗಳು ಅವರ ಹೆಸರಿಗೆ ಮಸಿಬಳಿಯುವ ಪ್ರಯತ್ನದಲ್ಲಿ ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಪ್ರಚಾರದ ಗೀಳಿಗೆ ವರ್ತಿಸುತ್ತಿರುವ ರೀತಿ ನೋಡಿದರೆ ಏನು ಹೇಳಬೇಕೆಂದು ತಿಳಿಯದಂತಾಗಿದೆ.''

  ಪ್ಯಾನ್ ಇಂಡಿಯಾ ವಿರೋಧಿಸಿದ್ದಕ್ಕೆ ನಟ ಜಗ್ಗೇಶ್ ವಿರುದ್ಧ ಟೀಕೆ

  ಜಗ್ಗೇಶ್ ಹೆಸರಿಗೆ ಮಸಿಬಳಿಯುವ ಪ್ರಯತ್ನ

  ಜಗ್ಗೇಶ್ ಹೆಸರಿಗೆ ಮಸಿಬಳಿಯುವ ಪ್ರಯತ್ನ

  ''ಆದರೆ ಕೆಲ ಕಿಡಿಗೇಡಿಗಳು ಅವರ ಹೆಸರಿಗೆ ಮಸಿಬಳಿಯುವ ಪ್ರಯತ್ನದಲ್ಲಿ ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಪ್ರಚಾರದ ಗೀಳಿಗೆ ವರ್ತಿಸುತ್ತಿರುವ ರೀತಿ ನೋಡಿದರೆ ಏನು ಹೇಳಬೇಕೆಂದು ತಿಳಿಯದಂತಾಗಿದೆ.''

  ಸಹೋದ್ಯೋಗಿಗಳನ್ನು ಗೌರವದಿಂದ ಕಾಣುವ ಸದ್ಗುಣ ವ್ಯಕ್ತಿ

  ಸಹೋದ್ಯೋಗಿಗಳನ್ನು ಗೌರವದಿಂದ ಕಾಣುವ ಸದ್ಗುಣ ವ್ಯಕ್ತಿ

  ''ಅವರು ತಮ್ಮ ಜೀವನದುದ್ದಕ್ಕೂ ಕನ್ನಡ, ಕನ್ನಡಿಗರ ಹಕ್ಕಿಗಾಗಿ ಹೋರಾಟ ನಡೆಸಿದ ಪ್ರಮುಖರಲ್ಲೊಬ್ಬರು... ಅವರು ತಮ್ಮ ಸಹೋದ್ಯೋಗಿಗಳನ್ನು ಅತ್ಯಂತ ಪ್ರೀತಿಯಿಂದ, ಅಗಾಧವಾದ ಗೌರವದಿಂದ ಕಾಣುವ ಸದ್ಗುಣ ವ್ಯಕ್ತಿ.. ಅಂಥಹವರ ಬಗ್ಗೆ ಎಷ್ಟೇ ಮಾತನಾಡಿದರು ಅವರಿಗೆ ಅದೇನೂ ಅಂಟದು.. ಅವರು ಯಾವ ನಾಯಕ ನಟನ ಬಗ್ಗೆ ಯಾವುದೇ ರೀತಿಯ ಅವಹೇಳನ ಮಾತನ್ನಾಡಿಲ್ಲ''

  ಪ್ಯಾನ್ ಇಂಡಿಯಾ ವಿವಾದ: 'ಎಷ್ಟೆ ಬೆಳೆದರು ತಂದೆ ಮುಂದೆ ಮಕ್ಕಳೇ ವಿನಃ ತಂದೆಯಾಗಲ್ಲಾ'

  ಅವರ ಅನುಭವದಷ್ಟೂ ವಯಸ್ಸು ನಿಮಗಾಗಿಲ್ಲ

  ಅವರ ಅನುಭವದಷ್ಟೂ ವಯಸ್ಸು ನಿಮಗಾಗಿಲ್ಲ

  ''ಹೀಗಿರುವಾಗ ಅವರ ಹೆಸರನ್ನು ಬಳಸಿ ಕುಚೇಷ್ಠೆ ಮಾಡಲು ಪ್ರಯತ್ನಿಸುತ್ತಿರುವ ಕೊಳಕು ಮನಸ್ಸಿನ ಕ್ರಿಮಿಗಳಿಗೆ ಹೇಳುವುದೇನೆಂದರೆ ಅವರ ಸಾಧನೆ, ಅವರ ಅನುಭವದಷ್ಟೂ ವಯಸ್ಸು ನಿಮಗಾಗಿಲ್ಲ.. ಅವರು ಉತ್ತರ ನೀಡುವುದು ಪ್ರೀತಿಸುವ ಮನಸ್ಸುಗಳಿಗೆ ಹೊರತು ಕೊಳೆತು ದುರ್ವಾಸನೆ ಬೀರಿ ಹರಿಯುವ ನೀರಿಗಲ್ಲ'' ಎಂದು ನಟನ ಪರವಾಗಿ ಸ್ಪಷ್ಟನೆ ನೀಡಿದ್ದಾರೆ.

  English summary
  Pan India Controversy: Jaggesh Fans Clarified About Current Development.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X