Don't Miss!
- News
ಕಂಡ ಕಂಡಲ್ಲಿ ಕಸಕ್ಕೆ ಬೆಂಕಿ: ಚಿಕ್ಕಬಳ್ಳಾಪುರ ಜನತೆಯನ್ನು ಉಸಿರುಗಟ್ಟಿಸಿದ ದಟ್ಟ ಹೊಗೆ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತದತ್ತ ಪ್ರಯಾಣ ಆರಂಭಿಸಿದ ಆಸಿಸ್ ಆಟಗಾರರು
- Automobiles
ಟೊಯೊಟಾ ಇನೋವಾ ಹೈಕ್ರಾಸ್ ವಿತರಣೆ ಪ್ರಾರಂಭ: ಹೈಬ್ರಿಡ್ ರೂಪಾಂತರಕ್ಕೆ 1 ವರ್ಷ ಕಾಯಬೇಕು
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Technology
ಪೊಕೊ X5 ಪ್ರೊ ಲಾಂಚ್ಗೆ ಡೇಸ್ ಫಿಕ್ಸ್; ಭಾರೀ ಕುತೂಹಲ ಮೂಡಿಸಿದ ಫೀಚರ್ಸ್!
- Finance
Budget 2023: ರಾಷ್ಟ್ರಪತಿ ಭಾಷಣದೊಂದಿಗೆ ಜ.31ರಿಂದ ಬಜೆಟ್ ಅಧಿವೇಶನ ಆರಂಭ, ಈ ಮಾಹಿತಿ ತಿಳಿದಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'KD' ಧ್ರುವ ಎದುರು ಗುದ್ದಾಡುವ ಅಣ್ಣಯ್ಯಪ್ಪ ಯಾರು? ಅಧೀರ ಮತ್ತೆ ಬರೋದು ಫಿಕ್ಸ್!
ಹೊಸ ವರ್ಷದ ಸಂಭ್ರಮದಲ್ಲಿ ನಿರ್ದೇಶಕ ಜೋಗಿ ಬ್ರೇಕಿಂಗ್ ನ್ಯೂಸ್ ಕೊಡೋಕೆ ರೆಡಿಯಾಗಿದ್ದಾರೆ. ಧ್ರುವ ಸರ್ಜಾ ನಟನೆಯ 'KD' ಸಿನಿಮಾ ಅಖಾಡಕ್ಕೆ ಪರಭಾಷೆಯ ಸೂಪರ್ ಸ್ಟಾರ್ ಎಂಟ್ರಿ ಕೊಡೋದು ಪಕ್ಕಾ ಆಗಿದೆ.
ಕೆಲ ದಿನಗಳ ಹಿಂದೆ ನಿರ್ದೇಶಕ ಜೋಗಿ ಅಕ್ಕಪಕ್ಕದ ಚಿತ್ರರಂಗದ ಸೂಪರ್ ಸ್ಟಾರ್‌ಗಳನ್ನು ಭೇಟಿ ಮಾಡಿ ಬಂದಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತುಉ. ಬಾಲಿವುಡ್‌ನ ಸಂಜಯ್ ದತ್, ಮಾಲಿವುಡ್‌ನ ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ತಮಿಳಿನ ವಿಜಯ್ ಸೇತುಪತಿ ಜೊತೆ ಚರ್ಚಿಸಿ ಬಂದಿದ್ದರು. ಈ ನಾಲ್ವರಲ್ಲಿ ಇಬ್ಬರು 'KD' ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಅದು ಯಾರು ಎಂದು ರಿವೀಲ್ ಮಾಡುವ ಸಮಯ ಹತ್ತಿರ ಬಂದಿದೆ.
ಹೊಸ ವರ್ಷದ ದಿನವೇ ಸ್ಪೆಷಲ್ ಅನೌನ್ಸ್‌ಮೆಂಟ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಧ್ರುವ ಸರ್ಜಾ ಕೂಡ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಣ್ಣಯ್ಯಪ್ಪ ಯಾರು?
ಹೌದು ಹೊಸ ವರ್ಷದ ಸಂಭ್ರಮದಲ್ಲಿ 'KD' ಸ್ಪೆಷಲ್ ಅನೌನ್‌ಮೆಂಟ್ ಏನು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 'KD' ಎದುರು ಗುದ್ದಾಡೋಕೆ ಅಣ್ಣಯ್ಯಪ್ಪ ಆಗಮನವಾಗಲಿದೆ. ಚಿತ್ರದಲ್ಲಿ ಖಡಕ್ ರೋಲ್‌ನಲ್ಲಿ ಪರಭಾಷೆಯ ಸೂಪರ್ ಸ್ಟಾರ್ ನಟಿಸುತ್ತಿದ್ದಾರೆ. ಅಣ್ಣಯ್ಯಪ್ಪ ಎನ್ನುವ ಸ್ಪೆಷಲ್ ರೋಲ್‌ನ ಚಿತ್ರದಲ್ಲಿ ಪ್ರೇಮ್ ಡಿಸೈನ್ ಮಾಡಿದ್ದಾರೆ. ಆ ಪಾತ್ರದಲ್ಲಿ ಯಾರು ನಟಿಸುತ್ತಾರೆ? ಎನ್ನುವ ಕುತುಹಲ ಸಹಜವಾಗಿಯೇ ಇದೆ.

ಸಂಜಯ್ ದತ್ ಎಂಟ್ರಿ ಫಿಕ್ಸಾ?
ಸದ್ಯ ಎಲ್ಲಾ ಚಿತ್ರರಂಗದಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳ ಕಾನ್ಸೆಪ್ಟ್ ಸದ್ದು ಮಾಡ್ತಿದೆ. ಬಾಲಿವುಡ್ ಸೂಪರ್ ಸ್ಟಾರ್‌ಗಳು ಸೌತ್ ಸಿನಿಮಾಗಳಲ್ಲಿ ನಟಿಸೋಕೆ ಸಿದ್ಧರಾಗಿದ್ದಾರೆ. ಈಗಾಗಲೇ KGF- 2 ಚಿತ್ರದಲ್ಲಿ ಸಂಜಯ್ ದತ್ ನಟಿಸಿ ಹೋಗಿದ್ದಾರೆ. ಪ್ರಭಾಸ್ ಜೊತೆ ತೆಲುಗು ಚಿತ್ರದಲ್ಲು ಸಂಜು ಬಾಬಾ ನಟಿಸುವ ಬಗ್ಗೆ ಗುಸುಗುಸು ಕೇಳಿಬರ್ತಿದೆ. ಪ್ರೇಮ್ ಕೂಡ ಸಂಜಯ್ ದತ್‌ನ ಮತ್ತೆ ಸ್ಯಾಂಡಲ್‌ವುಡ್‌ಗೆ ಕರ್ಕೊಂಡು ಬರೋದು ಪಕ್ಕಾ ಎನ್ನಲಾಗ್ತಿದೆ. ಅಧೀರ ಬಿಟ್ಟರೆ ತಮಿಳಿನ ವಿಜಯ್ ಸೇತುಪತಿ ಬರುವ ಸಾಧ್ಯತೆ ಇದೆ.

ಮಾಸ್ 'KD' ಆಗಿ ಧ್ರುವ
ಪ್ರೇಮ್ ಸಾರಥ್ಯದ 'KD' ಚಿತ್ರದಲ್ಲಿ ಧ್ರುವ ಸರ್ಜಾ ಮಾಸ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ ಟೈಟಲ್ ಟೀಸರ್ ಸೂಪರ್ ಹಿಟ್ ಆಗಿತ್ತು. ಕಾಳಿದಾಸನಾಗಿ ಆಕ್ಷನ್ ಪ್ರಿನ್ಸ್ ಅಬ್ಬರಿಸೋಕೆ ಬರ್ತಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮುಹೂರ್ತ ನೆರವೇರಿಸಿದ್ದ ಚಿತ್ರತಂಡ ಸೆಟ್‌ಗಳನ್ನು ನಿರ್ಮಿಸಿ ಸಿನಿಮಾ ಚಿತ್ರೀಕರಣ ನಡೆಸ್ತಿದೆ. ಧ್ರುವ ಸರ್ಜಾ ಜೊತೆಗೆ ಘಟಾನುಘಟಿ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಅದ್ಧೂರಿ ಸಿನಿಮಾ 'KD'
ಈಗಾಗಲೇ 'ಮಾರ್ಟಿನ್' ಆಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಧ್ರುವ ಅಬ್ಬರಿಸೋಕೆ ರೆಡಿಯಾಗಿದ್ದಾರೆ. 60 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗ್ತಿದೆ. ಅದಕ್ಕಿಂತ ದೊಡ್ಡಮಟ್ಟದಲ್ಲಿ 'KD' ದರ್ಬಾರ್ ನಡೆಯಲಿದೆ. ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಸಿನಿಮಾ ಸಿದ್ಧವಾಗ್ತಿದೆ. 1968ರಿಂದ 1978ರ ನಡುವೆ ನಡೆದ ನೈಝ ಘಟನೆ ಆಧರಿಸಿ ಈ ರೆಟ್ರೋ ಸಿನಿಮಾ ಕಟ್ಟಿಕೊಡುತ್ತಿದ್ದಾರೆ ಎನ್ನಲಾಗ್ತಿದೆ. ಸದ್ಯ ರಿಲೀಸ್ ಆಗಿರುವ ಟೈಟಲ್ ಟೀಸರ್ ಗಮನ ಸೆಳೆದಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಪ್ಯಾನ್ ಇಂಡಿಯಾಲ ಲೆವೆಲ್‌ನಲ್ಲಿ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಅದಕ್ಕೆ ತಕ್ಕಂತೆ ಸ್ಟಾರ್‌ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ.