For Quick Alerts
  ALLOW NOTIFICATIONS  
  For Daily Alerts

  ಮಂಗಳೂರಿನಲ್ಲಿ ಸಾಗಿದೆ 'ಪಂಚತಂತ್ರ' ಪ್ರಚಾರ

  By Kiran Sirsikar
  |

  ''ಪಂಚತಂತ್ರ' ಸಿನಿಮಾದಲ್ಲಿ ಆಮೆ ಮತ್ತು ಮೊಲದ ಕತೆ ಇದೆ. ಮೊಲವನ್ನು ಯುವಕರಿಗೆ ಹಾಗೂ ಆಮೆಯನ್ನು ಹಿರಿಯರಿಗೆ ಆಳವಡಿಸಿ, ಕಾರ್ ರೇಸ್ ಮೂಲಕ ಯುವಕರು ಗೆದ್ರಾ ಅಥವಾ ವಯಸ್ಸಾದವರು ಗೆದ್ರಾ ಅಂತ ಹೇಳುವ ಪ್ರಯತ್ನ ಮಾಡಲಾಗಿದೆ.'' ಎಂದು ನಿರ್ದೇಶಕ ಯೋಗರಾಜ್ ಭಟ್ ತಮ್ಮ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

  ಬಹು ನಿರೀಕ್ಷೆಯ 'ಪಂಚತಂತ್ರ' ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಇಂದು ಮಂಗಳೂರಿಗೆ ಆಗಮಿಸಿತು. ನರಗದ ಬಿಗ್ ಸಿನಿಮಾಸ್ ನಲ್ಲಿ ನಿರ್ದೇಶಕ ಯೋಗರಾಜ್ ಭಟ್, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಭಾರತೀಯ ಚಿತ್ರರಂಗದಲ್ಲಿ ಯಾರೂ ಕಾರ್ ರೇಸ್ ಹಿನ್ನೆಲೆ ಇಟ್ಟು ಸಿನಿಮಾ ಇದುವರೆಗೆ ಮಾಡಿಲ್ಲ. ರೇಸ್ ಕಥಾವಸ್ತುವನಿಟ್ಟು ನಮ್ಮ ತಂಡದ ಇದು ಮೊದಲ ಪ್ರಯತ್ನ ಎಂದರು.

  'ಪ' ಅಕ್ಷರದ ಮೇಲೆ ಯೋಗರಾಜ್ ಭಟ್ ರಿಗೆ ಲವ್ ಆಗಿದೆ

  ಎಲ್ಲಾ ವಯೋಮಿತಿಯವರಿಗೂ ಈ ಚಿತ್ರ ಇಷ್ಟ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇನ್ನೂ ಚಿತ್ರದ ನಾಯಕಿ ಸೋನಲ್ ಚಿತ್ರದಲ್ಲಿ ಬಜಾರಿ ಹುಡುಗಿ ಪಾತ್ರದಲ್ಲಿ, ಬಾಲಿವುಡ್‌ನ ಜೆನಿಲಿಯಾ ಡಿಸೋಜಾ ರೀತಿಯ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

  ಯೋಗರಾಜ್ ಭಟ್ ತುಂಬಾ ಇಷ್ಟಪಟ್ಟು ಈ ಪಂಚತಂತ್ರ ಸಿನೆಮಾವನ್ನು ನಿರ್ದೇಶನ ಮಾಡಿದ್ದಾರಂತೆ. ಹೊಸ ಕಲಾವಿದರನ್ನು ಇಟ್ಟುಕೊಂಡು ಹೊಸ ಪರಿಕಲ್ಪನೆಯೊಂದಿಗೆ ಹೊಸ ರೀತಿ ಮನರಂಜನೆ ನೀಡಲು ಭಟ್ಟರು ಮುಂದಾಗಿದ್ದಾರೆ. ಈಗಾಗಲೇ ಈ ಸಿನಿಮಾದ ಹಾಡುಗಳು ಹಿಟ್ ಆಗಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಜಾಸ್ತಿಯಾಗಿದೆ.

  English summary
  Panchathanthra film team visited Mangaluru for film Promotion on February 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X