twitter
    For Quick Alerts
    ALLOW NOTIFICATIONS  
    For Daily Alerts

    ಗೆಳೆಯನನ್ನು ನೆನೆದು ಪನ್ನಗ ಭರಣ ಭಾವುಕ: ಚಿರಂಜೀವಿ ಬಗ್ಗೆ ಹೃದಯಸ್ಪರ್ಶಿ ಪತ್ರ

    |

    ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ನಿಧನಹೊಂದಿ ತಿಂಗಳುಗಳೇ ಕಳೆದಿದೆ. ಆದರೂ ಚಿರು ಇಲ್ಲ ಎನ್ನುವ ಸತ್ಯವನ್ನು ಸ್ನೇಹಿತರಿಗೆ, ಕುಟುಂಬದವರಿಗೆ ಅರಗಿಸಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲ. ಚಿರು ಜೊತೆ ಕಳೆದ ಮಧುರ ಕ್ಷಣಗಳನ್ನು ನೆನೆದು ಸ್ನೇಹಿತರು ಕಣ್ಣೀರಾಕುತ್ತಿದ್ದಾರೆ.

    Recommended Video

    ಗೆಳೆಯ ಚಿರು ಸಾರ್ಜಾನನ್ನು ನೆನೆದು ಭಾವುಕರಾದ ಪನ್ನಗಾಭರಣ | Pannaga Bharana

    ಚಿರು ಎಂದರೆ ಅವರ ಗೆಳೆಯರ ಬಳಗದಲ್ಲಿ ಎಲ್ಲರಿಗೂ ಪ್ರೀತಿ. ಸದಾ ನಗುತ್ತಿರುವ ಚಿರು ಮುಖವನ್ನು ಮತ್ತೆ ನೋಡಲು ಎಂದಿಗೂ ಸಾಧ್ಯವಿಲ್ಲ ಎನ್ನುವ ವಾಸ್ತವವನ್ನು ಒಪ್ಪಿಕೊಳ್ಳಲು ಎಲ್ಲರೂ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಚಿರಂಜೀವಿ ಸರ್ಜಾ ಸ್ನೇಹ ಬಳಗದಲ್ಲಿ ಒಬ್ಬರಾಗಿರುವ ನಿರ್ದೇಶಕ ಪನ್ನಗ ಭರಣ ಗೆಳೆಯನನ್ನು ನೆನೆದು ಭಾವುಕರಾಗಿದ್ದಾರೆ.

    ಅಮ್ಮನ ತೋಳಲ್ಲಿ ಜೂನಿಯರ್ ಚಿರು: ಮುದ್ದುಕಂದನ ಮೊದಲ ಚಿತ್ರ ಇಲ್ಲಿದೆಅಮ್ಮನ ತೋಳಲ್ಲಿ ಜೂನಿಯರ್ ಚಿರು: ಮುದ್ದುಕಂದನ ಮೊದಲ ಚಿತ್ರ ಇಲ್ಲಿದೆ

    ಚಿರು ಜೊತೆ ಕಳೆದ ಸುಂದರ ಕ್ಷಣಗಳನ್ನು ನೆನೆದು ಪನ್ನಗ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ. ಪನ್ನಗ ದಿಢೀರ್ ಅಂತ ಭಾವುಕ ಪೋಸ್ಟ್ ಹಾಕಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಮುಂದೆ ಓದಿ...

    ಒಟ್ಟಿಗೆ ಕಳೆದ ರಾತ್ರಿಗಳು ನೆನೆಪಾಗುತ್ತಿದೆ

    ಒಟ್ಟಿಗೆ ಕಳೆದ ರಾತ್ರಿಗಳು ನೆನೆಪಾಗುತ್ತಿದೆ

    'ಒಟ್ಟಿಗೆ ಕಳೆದ ಅಹೋರಾತ್ರಿಗಳು ಮತ್ತು ನಮ್ಮ ಸಣ್ಣ ಪುಟ್ಟ ಜಗಳಗಳು. ಜೊತೆಗೆ ಸದಾ ನಗುತ್ತಿರುವ ನಿನ್ನ ಮುಖ, ನನಗೆ ಆದಿನಗಳು ನನೆಪಾಗುತ್ತಿವೆ. ನಾವು ಎಲ್ಲಿಂದ ಆರಂಭಿಸಿದ್ದೇವೊ ಅಲ್ಲಿಗೆ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗು. ನೀನು ಹೇಳಿದ ಎಲ್ಲಾ ವಿಚಾರಕ್ಕೂ ನಾನು ಗಮನ ಕೊಡುತ್ತೇನೆ' ಎಂದಿದ್ದಾರೆ.

    ಒಂದು ವಿದಾಯ ಹೇಳಬೇಕಿತ್ತು

    ಒಂದು ವಿದಾಯ ಹೇಳಬೇಕಿತ್ತು

    'ಮೊದಲಿಗಿಂತ ಜಾಸ್ತಿ ಈಗ ನಿನ್ನನ್ನು ಪ್ರಶಂಸಿಸುತ್ತೇನೆ. ಮತ್ತೆ ನಿನ್ನ ಮನೆ ಮುಂಭಾಗಿಲಲ್ಲಿ, ಅದೆ ಶಾರ್ಟ್ಸ್ ಮತ್ತು ಸ್ಲೀವ್ ಲೆಸ್ ಟೀ ಶರ್ಟ್ ನಲ್ಲಿ ನೋಡಬೇಕು. ಇಷ್ಟು ಬೇಗ ಹೋಗದಂತೆ ನಮ್ಮನ್ನು ಕೇಳುತ್ತಿದ್ದೆ. ನಿನ್ನ ಆಯ್ಕೆಗಳ ಬಗ್ಗೆ ಭಿನ್ನಾಭಿಪ್ರಾಯ ಇರುತ್ತಿತ್ತು. ಈಗಲೂ ಕೂಡ ನೀನು ಇರಬೇಕಿತ್ತು. ಒಂದು ವಿದಾಯ ಹೇಳಬೇಕಿತ್ತು, ಜೊತೆ ಒಂದು ಅಪ್ಪುಗೆಯ ನಗು ಬೇಕಿತ್ತು, ನೀನು ಬೇಗ ಒಬ್ಬನೆ ಹೊರಟೆ, ಮತ್ತೆ ಸಿಗುತ್ತೇವೆ ಎಂದು ಹೇಳದೆ ಹೇಗೆ ಹೋದೆ'

    ಅಪ್ಪನ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಜೂ. ಚಿರುಅಪ್ಪನ ಸಿನಿಮಾದ ಟ್ರೈಲರ್ ರಿಲೀಸ್ ಮಾಡಿದ ಜೂ. ಚಿರು

    ವಾಸ್ತವಕ್ಕೆ ಬರಲು ಪ್ರಯತ್ನಿಸುತ್ತಿದ್ದೇನೆ

    ವಾಸ್ತವಕ್ಕೆ ಬರಲು ಪ್ರಯತ್ನಿಸುತ್ತಿದ್ದೇನೆ

    ಈಗಲೂ ಅನಿಸುತ್ತೆ ಎಲ್ಲವೂ ಸುಳ್ಳಾಗಲಿ ಎಂದು. ನಾನು ನಕ್ಷತ್ರಗಳಿಂದ ಮಿನುಗುತ್ತಿರುವ ಆಕಾಶವನ್ನು ನೋಡಿದಾಗ, ಪ್ರತಿದಿನ ಎದ್ದಾಗ ನಾನು ವಾಸ್ತವಕ್ಕೆ ಬರಲು ಪ್ರಯತ್ನಿಸುತ್ತಿದ್ದೇನೆ. ಎಲ್ಲಾ ಮುಗಿಸಿ ಮನೆಗೆ ಬಾ ಎಂದು ಕರೆಯಲ್ಲ ಎನ್ನುವ ಸತ್ಯ ಅರ್ಥ ಮಾಡಿಕೊಳ್ಳುತ್ತೇನೆಟ

    ಸಾವು ಎನ್ನುವುದು ಸುಲಭ ಗೆಳೆಯ

    ಸಾವು ಎನ್ನುವುದು ಸುಲಭ ಗೆಳೆಯ

    'ಸಾವು ಎನ್ನುವುದು ಸುಲಭ ಗೆಳೆಯ. ನೋವನ್ನು ಬಿಟ್ಟ ಹೇಗಿದ್ದೀಯ. ಸಹೋದರರಿಗಿಂತ ಹೆಚ್ಚು ಪ್ರೀತಿಸುತ್ತಿದ್ದೆ. ನಮ್ಮ ನಡುವೆ ಕುಟುಂಬ ಹುಡುಕಿಕೊಂಡಿದ್ದೆವು. ಮತ್ತೆ ಹುಟ್ಟಿಬರುವ ಅವಕಾಶ ಇದ್ದರೆ ಎಲ್ಲಿಂದ ಶುರು ಮಾಡಿದ್ದೆವೋ ಅಲ್ಲಿಂದ ಪ್ರಾರಂಭಿಸೋಣ. ಆದರೆ ಈ ಸಾರಿ ನಿನಗಿಂತ ಮುಂಚೆ ನಾನೆ ಹೋಗುತ್ತೇನೆ. ಯಾಕೆಂದರೆ ನಿನಗೆ ಏನು ಆಯಿತು ಎಂದು ನಾನು ಅರ್ಥ ಮಾಡಿಕೊಳ್ಳಬೇಕು, ಮತ್ತೊಂದು ತುದಿಯಲ್ಲಿ ನೀನು ನಿಂತಿರಬೇಕು' ಎಂದು ದೀರ್ಘವಾಗಿ ಬರೆದುಕೊಂಡಿದ್ದಾರೆ.

    ಐಂದ್ರಿತಾ ರೇ ಪ್ರತಿಕ್ರಿಯೆ

    ಐಂದ್ರಿತಾ ರೇ ಪ್ರತಿಕ್ರಿಯೆ

    ನಟಿ ಐಂದ್ರಿತಾ ರೇ ಪ್ರತಿಕ್ರಿಯೆ ನೀಡಿದ್ದು, 'ಹೃದಯ ಸ್ಪರ್ಶಿಯಾಗಿದೆ. ಅವರ ನಗುವನ್ನು ಮರೆಯಲು ಸಾಧ್ಯವಿಲ್ಲ. ಅವರ ಮೊದಲು ನಟನೆ ಮಾಡಿದ್ದು ನನ್ನ ಮುಂದೆ ಎನ್ನುವ ನೆನಪು ಇನ್ನು ಇದೆ' ಎಂದಿದ್ದಾರೆ.

    English summary
    Director Pannagabharana Penned Heart Wrenching story about Chiranjeevi Sarja.
    Monday, March 8, 2021, 19:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X