For Quick Alerts
  ALLOW NOTIFICATIONS  
  For Daily Alerts

  ಪನ್ನಗಾಭರಣ ನಿರ್ದೇಶನದ 'ಹ್ಯಾಪಿ ನ್ಯೂ ಇಯರ್'ಗೆ ಸೆನ್ಸಾರ್ ಆಯ್ತು

  By Suneel
  |

  ಹಲವು ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಿರುವ ಬಿ.ಸಿ.ಪಾಟೀಲ್ ಅಭಿನಯಿಸಿರುವ 'ಹ್ಯಾಪಿ ನ್ಯೂ ಇಯರ್' ಚಿತ್ರಕ್ಕೆ ಸೆನ್ಸಾರ್ ಮಂಡಳಿಯು 'U' ಪ್ರಮಾಣ ಪತ್ರ ನೀಡಿದೆ.

  ಐದು ವಿಭಿನ್ನ ಕಥೆಗಳನ್ನು ಹೊಂದಿರುವ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಪುತ್ರ ಪನ್ನಗಾಭರಣ ಆಕ್ಷನ್ ಕಟ್ ಹೇಳಿದ್ದು, ಮೇ 5 ಕ್ಕೆ ಗಾಂಧಿನಗರದಲ್ಲಿ ಹೊಸ ವರ್ಷಾಚರಣೆ ಮಾಡಲು ಸಜ್ಜಾಗಿದೆ. ಬಹುದೊಡ್ಡ ತಾರಾಬಳಗವಿದ್ದು, ಮೇಕಿಂಗ್ ದೃಷ್ಟಿಯಿಂದಲೂ ಚಿತ್ರ ಹಲವು ಕುತೂಹಲಗಳನ್ನು ಹುಟ್ಟಿಹಾಕಿದೆ.

  ದೀರ್ಘಕಾಲಗಳ ನಂತರ ಸಿನಿಮಾ ರಂಗಕ್ಕೆ ಹಿಂದಿರಿಗಿರುವ ಬಿ.ಸಿ.ಪಾಟೀಲ್ 'ಹ್ಯಾಪಿ ನ್ಯೂ ಇಯರ್' ಚಿತ್ರದಲ್ಲಿ ಖಳನಟನಾಗಿ ಬಣ್ಣ ಹಚ್ಚಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್, ವಿಜಯ ರಾಘವೇಂದ್ರ, ದೂದ್ ಪೇಡಾ ದಿಂಗತ್, ಧನಂಜಯ್, ಸುಧಾರಾಣಿ, ಶ್ರುತಿ ಹರಿಹರನ್, ಸೋನುಗೌಡ, ಸೃಷ್ಟಿ ಪಾಟೀಲ್, ಮಾಳವಿಕಾ ಅವಿನಾಶ್, ಕಡ್ಡಿ ಪುಡಿ ಚಂದ್ರು, ತಬಲಾ ನಾಣಿ, ರಾಜು ತಾಳಿಕೋಟೆ, ರಾಜಶ್ರೀ ಪೊನ್ನಪ್ಪ ಮುಂತಾದವರು ಅಭಿನಯಿಸಿದ್ದಾರೆ.

  ಸೌಮ್ಯ ಫೀಲ್ಮ್ಸ್ ಲಾಂಛನದಲ್ಲಿ ಮೂಡಿ ಬಂದಿರುವ 'ಹ್ಯಾಪಿ ನ್ಯೂ ಇಯರ್' ಚಿತ್ರಕ್ಕೆ ವನಜ ಪಾಟೀಲ್ ಬಂಡವಾಳ ಹೂಡಿದ್ದಾರೆ. ರಘು ದೀಕ್ಷಿತ್ ಸಂಗೀತ ಸಂಯೋಜನೆ, ಶ್ರೀಶ ಕೂದುವಳ್ಳಿ ಛಾಯಾಗ್ರಹಣ ನಿರ್ವಹಣೆ ಮಾಡಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ, ಪ್ರತಿಭಾ ನಂದಕುಮಾರ್, ಸತ್ಯ ಪ್ರಕಾಶ್, ಆದಿ ಶಂಕರ್ ಹಾಗೂ ಅವಿನಾಶ್ ಬಲೆಕ್ಕಳ ಸಂಭಾಷಣೆ ಬರೆದಿದ್ದಾರೆ.

  English summary
  Pannagha Bharana's directorial debut 'Happy New Year' has been censored U and the movie will be releasing on May 5th. Happy new year stars BC Patil, Diganth, Dhananjay, Srusthi Patil, Sruthi Hariharn, Vijay Raghavendra in prominent role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X