»   » ಮಾಳವಿಕಾ ಜೊತೆಗಿನ ವಿಡಿಯೋ: 'ಬಿಗ್ ಬಾಸ್' ಡೈರೆಕ್ಟರ್ ಕೊಟ್ಟ ಸ್ಪಷ್ಟನೆ

ಮಾಳವಿಕಾ ಜೊತೆಗಿನ ವಿಡಿಯೋ: 'ಬಿಗ್ ಬಾಸ್' ಡೈರೆಕ್ಟರ್ ಕೊಟ್ಟ ಸ್ಪಷ್ಟನೆ

Posted By:
Subscribe to Filmibeat Kannada

'ಬಿಗ್ ಬಾಸ್' ನಿರ್ದೇಶಕ ಹಾಗೂ ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹಾಗೂ ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್ ನಡುವಿನ ವಿಡಿಯೋ ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳೆದ ವರ್ಷ ನಡೆದ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ನಟಿ ಮಾಳವಿಕಾ ಅವಿನಾಶ್ ಸೀಕ್ರೆಟ್ ರೂಮ್ ಪ್ರವೇಶಿಸುವ ಸಂದರ್ಭದ ವಿಡಿಯೋ ಅದಾಗಿದ್ದು, ಅದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿವಾದದ ಬಿರುಗಾಳಿಯೇ ಎದ್ದಿದೆ.

'ಬಿಗ್ ಬಾಸ್' ಮನೆಗೆ ಹೋಗಬೇಕಂದ್ರೆ ಈ ಅರ್ಹತೆ ಇರಲೇಬೇಕು.!

ಇದೇ ವಿವಾದದ ಬಗ್ಗೆ 'ಬಿಗ್ ಬಾಸ್ ಕನ್ನಡ-5' ಕುರಿತಾಗಿ ನಡೆದ ಪ್ರತಿಕಾಗೋಷ್ಠಿಯಲ್ಲಿ 'ಬಿಗ್ ಬಾಸ್' ಡೈರೆಕ್ಟರ್ ಪರಮೇಶ್ವರ್ ಗುಂಡ್ಕಲ್ ಸ್ಪಷ್ಟನೆ ನೀಡಿದರು. ಮುಂದೆ ಓದಿರಿ....

ವಿಡಿಯೋದಲ್ಲಿ ಅಂಥದ್ದು ಏನೂ ಇಲ್ಲ!

''ಆ ವಿಡಿಯೋದ ಹಿಂದೆ ಆಗಲಿ, ಮುಂದೆ ಆಗಲಿ.. ವಿಡಿಯೋದಲ್ಲಾಗಲಿ ಹೆಚ್ಚಿನದ್ದು ಏನೋ ಇದೆ ಅಂತ ನನಗೆ ಅನಿಸಲ್ಲ. ಏನೂ ಇಲ್ಲದೇ ಇರುವ ವಿಡಿಯೋವನ್ನ ಏನೋ ಇದೆ ಅಂತ ಹೇಳಿದಾಗ ನಿರಾಶೆ ಆಗುತ್ತೆ'' ಅಂತ ಪತ್ರಿಕಾಗೋಷ್ಠಿಯಲ್ಲಿ 'ಬಿಗ್ ಬಾಸ್' ನಿರ್ದೇಶಕ ಹಾಗೂ ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳಿದರು.

ಪರಮೇಶ್ವರ ಗುಂಡ್ಕಲ್ ಅವರ ಪ್ರಕಾರ 'BBK5'ನಲ್ಲಿ ಯಾವೆಲ್ಲಾ ಸ್ಪರ್ಧಿಗಳಿರುತ್ತಾರೆ.?

ಗುಸು ಗುಸು ಅಂತ ಮಾತನಾಡಿದ್ದು ಯಾಕೆ.?

''ಕ್ಯಾಮರಾ ಗಲ್ಲಿಯಲ್ಲಿ ನಡೆದುಕೊಂಡು ಹೋಗುವಾಗ ಜೋರಾಗಿ ಮಾತನಾಡುವ ಹಾಗಿಲ್ಲ. ಮೇಲಾಗಿ ನನ್ನ ಬಳಿ ಮೈಕ್ ಇರಲಿಲ್ಲ. ಹೀಗಾಗಿ ನನ್ನ ಮಾತು ಗುಸುಗುಸು ಆಗಿ ಕೇಳಿರುವ ಸಾಧ್ಯತೆ ಇದೆ'' - ಪರಮೇಶ್ವರ್ ಗುಂಡ್ಕಲ್

ಸುದೀಪ್ ಬಗ್ಗೆ 'ಬಿಗ್ ಬಾಸ್' ಹೇಳಿದ ಯಶಸ್ಸಿನ ಸತ್ಯಕಥೆ.!

ಸೀಕ್ರೆಟ್ ರೂಮ್ ಗೆ ಹೋಗುವಾಗ...

''ಸ್ಪರ್ಧಿಯನ್ನ ಸೀಕ್ರೆಟ್ ರೂಮ್ ಗೆ ಬಿಡುವಾಗ (ಬಿಗ್ ಬಾಸ್ ಕನ್ನಡ-3 ರಲ್ಲಿ ಪೂಜಾ ಗಾಂಧಿ, ಬಿಗ್ ಬಾಸ್ ಕನ್ನಡ-4 ರಲ್ಲಿ ಶೀತಲ್ ಶೆಟ್ಟಿ, ಶಾಲಿನಿ, ಮಾಳವಿಕಾ, ಪ್ರಥಮ್) ನಾನು ಇದ್ದೆ. 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದು ಸೀಕ್ರೆಟ್ ರೂಮ್ ಗೆ ಹೋಗುವ ಬಗ್ಗೆ ಸ್ಪರ್ಧಿಗಳಿಗೆ ಕಮ್ಯೂನಿಕೇಟ್ ಮಾಡಬೇಕು. ಅದನ್ನ ನಾನು ಮಾಡಿದ್ದೇನೆ'' - ಪರಮೇಶ್ವರ್ ಗುಂಡ್ಕಲ್

ಬೇರೆ ಯಾರೇ ಈ ಕೆಲಸ ಮಾಡಿದರೂ...

''ಶೋ ಡೈರೆಕ್ಟರ್ ಆಗಿ ಯಾವುದೇ ಸ್ಪರ್ಧಿ ಸೀಕ್ರೆಟ್ ರೂಮ್ ಗೆ ಹೋಗುವಾಗ ನಾನು ಇರಲೇಬೇಕು. ಬೇರೆ ಯಾರೇ ಈ ಕೆಲಸ ಮಾಡಿದರೂ, ಹೊರ ಜಗತ್ತಿನ ಬಗ್ಗೆ ಯಾವುದೇ ರೀತಿಯ ಗುಟ್ಟು ಬಿಟ್ಟುಕೊಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ನಾನು ಇದ್ದು, ಸೀಕ್ರೆಟ್ ರೂಮ್ ಒಳಗೆ ಸ್ಪರ್ಧಿಗಳನ್ನು ಕಳುಹಿಸುತ್ತೇನೆ'' - ಪರಮೇಶ್ವರ್ ಗುಂಡ್ಕಲ್

ಮಾಳವಿಕಾಗೆ ಸಪೋರ್ಟ್ ಇದ್ದದ್ದೇ ಆಗಿದ್ದರೆ...

''ಪ್ರತಿ ಸ್ಪರ್ಧಿಗೂ 'ನೀವು ನೀವಾಗಿರಿ' ಅಂತ ಚಿಯರ್ ಅಪ್ ಮಾಡಿ ಕಳುಹಿಸುತ್ತೇವೆ. ಒಂದು ವೇಳೆ ನಾನು ಅವರಿಗೆ ಸಪೋರ್ಟ್ ಮಾಡಿದ್ದೇ ಆಗಿದ್ದಲ್ಲಿ, ಅವರು ಆ ಸೀಸನ್ ಗೆಲ್ಲಬೇಕಿತ್ತು. ನಾಲ್ಕನೇ ಸ್ಥಾನ ಪಡೆದರು. ಎರಡನೇ ಸ್ಥಾನವೂ ಅವರಿಗೆ ಸಿಗಲಿಲ್ಲ. ಅವರಿಗೆ ಸಿಕ್ಕ ವೋಟ್ ಪ್ರಕಾರ ಅವರು ಎಲಿಮಿನೇಟ್ ಆದರು'' - ಪರಮೇಶ್ವರ್ ಗುಂಡ್ಕಲ್

English summary
Bigg Boss Director, Colors Kannada Channel Business Head Parameshwar Gundkal gives clarification regarding the leaked kissing video with Bigg Boss Kannada 4 Contestant Malavika Avinash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada