For Quick Alerts
  ALLOW NOTIFICATIONS  
  For Daily Alerts

  ಮಕ್ಕಳ ದಿನಾಚರಣೆಯಲ್ಲೂ ಅಪ್ಪು ಅಭಿಮಾನ ಮರೆದ ದಂಪತಿಗಳು

  By ರಾಮನಗರ ಪ್ರತಿನಿಧಿ
  |

  ಮಕ್ಕಳ‌ ದಿನಾಚರಣೆಯ ಹಿನ್ನಲೆಯಲ್ಲಿ ತಮ್ಮ ಒಂದು ತಿಂಗಳ ಪುಟ್ಟ ಮಗುವನ್ನು 'ಕರ್ನಾಟಕ ರತ್ನ' ಡಾ.ಪುನೀತ್ ರಾಜ್‌ಕುಮಾರ್ ಭಾವಚಿತ್ರದೊಂದಿಗೆ ಪೋಟೋಶೂಟ್ ಮಾಡಿಸುವ ಮೂಲಕ ತಮ್ಮ ನೆಚ್ಚಿನ ನಟ ಪುನೀತ್ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ ರಾಮನಗರ ಜಿಲ್ಲೆ ಚನ್ನಪಟ್ಟಣದ ದಂಪತಿಗಳು.

  ಇಂದು ಎಲ್ಲೆಡೆ ಮಕ್ಕಳ ದಿನಾಚರಣೆ ಸಂಭ್ರಮ, ಒಂದು ಕಾಲದಲ್ಲಿ ಚಿತ್ರರಂಗಕ್ಕೆ ಬಾಲ ನಟನಾಗಿ ಪ್ರವೇಶ ಮಾಡಿದ ಪುನಿತ್ ರಾಜ್ ಕುಮಾರ್ ನಟಿಸಿದ ಮಕ್ಕಳ ಪಾತ್ರಗಳು ಮಕ್ಕಳಿಂದ ಮುದುಕರವರೆಗೆ ಎಲ್ಲಾ ವಯಸ್ಸಿನ ಚಿತ್ರ ರಸಿಕರನ್ನು ಸೆಳೆದಿರುವ ಸಂಗತಿ ಗೊತ್ತಿರುವುದೇ. ಹಾಗಾಗಿ ಚನ್ನಪಟ್ಟಣದ ದಂಪತಿ ಅಪ್ಪು ಭಾವಚಿತ್ರದೊಂದಿಗೆ ಮಗುವಿನ ಪೋಟೋ ಶೂಟ್ ಮಾಡಿದ್ದಾರೆ.

  ನಟಿ ರಂಭಾ ಕಾರು ಭೀಕರ ಅಪಘಾತ; 3 ಮಕ್ಕಳ ಜತೆ ಅಪಘಾತಕ್ಕೀಡಾಗಿದ್ದ ನಟಿ ಸ್ಥಿತಿ ಈಗ ಹೇಗಿದೆ? ನಟಿ ರಂಭಾ ಕಾರು ಭೀಕರ ಅಪಘಾತ; 3 ಮಕ್ಕಳ ಜತೆ ಅಪಘಾತಕ್ಕೀಡಾಗಿದ್ದ ನಟಿ ಸ್ಥಿತಿ ಈಗ ಹೇಗಿದೆ?

  ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಕೊನೆಯ ಚಿತ್ರ 'ಗಂಧದ ಗುಡಿ'ಯ ಸಂದೇಶಕ್ಕೆ ಮನ ಸೋತ ಚನ್ನಪಟ್ಟಣ ಮನು-ಭಾನು ದಂಪತಿಗಳು ತಮ್ಮ ಒಂದು ತಿಂಗಳ ಮಗು ದಿಶಾಂತ್.ಎಂ ಗೌಡನಿಗೆ ಫೋಟೋ ಶೂಟ್ ನಲ್ಲಿ ಕಾಡಿನ ಸಂರಕ್ಷಣೆ ಸಂದೇಶದೊಂದಿಗೆ ಪುನೀತ್ ಭಾವಚಿತ್ರ ಪ್ರದರ್ಶನ ಮಾಡುವ ಮೂಲಕ ನೆಚ್ಚಿನ ನಟನ‌ ಮೇಲಿನ‌ ಅಭಿಮಾನ ಮೆರೆದಿದ್ದಾರೆ.

  ಅಪ್ಪು ಅಭಿನಯದ ಕೊನೆಯ ಸಾಕ್ಷ ಚಿತ್ರ ಗಂಧದಗುಡಿ ಈಗಾಗಲೇ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಪ್ರಮುಖವಾಗಿ ಕಾಡಿನ ರಕ್ಷಣೆ ಪ್ರಾಣಿ ಪಕ್ಷಿಗಳ ರಕ್ಷಣೆ ಮಾಡಬೇಕು‌ ಎಂಬ ಸಂದೇಶ‌ವನ್ನು ಗಂಧದಗುಡಿ ಚಿತ್ರದ ಮೂಲಕ ಪುನೀತ್ ಅಭಿಮಾನಿಗಳಿಗೆ ಸೇರಿದ್ದಾರೆ.

  ಕರುನಾಡಿನ ಪುತ್ರ ಪುನೀತ್ ರಾಜಕುಮಾರ್ ನಮ್ಮನ್ನ ಅಗಲಿ ಹೋಗಿದ್ದರೂ ಸಹ ಅವರ ಮೇಲಿನ‌ ಅಭಿಮಾನ‌ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ರಾಜ್ಯದ ಯಾವುದೇ ಮೂಲೆಮೂಲೆಯಲ್ಲೂ ಯಾವದೇ ಕಾರ್ಯಕ್ರಮವಿರಲಿ ಅದು ಊರಹಬ್ಬ, ಜಾತ್ರೆ, ಉತ್ಸವ ಸೇರಿದಂತೆ ಜನರ ತಮ್ಮ ಮನೆಯ ಖಾಸಗಿ ಕಾರ್ಯಕ್ರವೇ ಇರಲಿ ಅಲ್ಲಿ ಪುನೀತ ಭಾವಚಿತ್ರ ಇರಲೇಬೇಕು‌.

  ಪುನೀತ್ ಮೇಲಿನ ಅಧಮ್ಯ ಅಭಿಮಾನಕ್ಕೆ ಸಾಕ್ಷಿ ಚನ್ನಪಟ್ಟಣ ತಾಲೂಕಿನ ತಗಚಗೆರೆ ಗ್ರಾಮದ ಮನು-ಭಾನು ದಂಪತಿಗಳು. ಇಬ್ಬರೂ ಸಹ ನಟ ಪುನೀತ್ ರಾಜಕುಮಾರ್ ರವರ ಅಪಟ್ಟ ಅಭಿಮಾನಿಗಳು. ತಮ್ಮ ನೆಚ್ಚಿನ ನಟನ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿರುವ ವಿಶಿಷ್ಟ ರೀತಿ ಸಾಮಾಜಿಕ ತಾಣ ಸೇರಿದಂತೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

  English summary
  Parents in Chennapatna did photo shoot of their new born baby with Puneeth Rajkumar's photo. They are fan of late Puneeth Rajkumar.
  Monday, November 14, 2022, 20:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X