Don't Miss!
- Sports
PSL 2023: ಪಿಎಸ್ಎಲ್ ಸೌಹಾರ್ದ ಪಂದ್ಯದ ವೇಳೆ ಬಾಂಬ್ ಸ್ಫೋಟ ವರದಿ: ಕೆಲ ಕಾಲ ಪಂದ್ಯ ಸ್ಥಗಿತ
- News
ಶಿಕ್ಷಕರಾಗಿ ಆಯ್ಕೆಯಾದರೂ ನೇಮಕಾತಿಯಲ್ಲಿ ಕಾನೂನು ತೊಡಕು, ಭವಿಷ್ಯದ ಆತಂಕದಲ್ಲಿ 13,363 ಅಭ್ಯರ್ಥಿಗಳು
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಾಮುಂಡಿ ತಾಯಿಯ ನೆಲದಲ್ಲಿ ಹೇಯ ಕೃತ್ಯ: ಪ್ರಣಿತಾ ಸುಭಾಷ್ ಖಂಡನೆ
ಮೈಸೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಸ್ನೇಹಿತನ ಮೇಲೆ ಯುವಕರ ಗುಂಪು ನಡೆಸಿದ ಹಲ್ಲೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸಂತ್ರಸ್ತೆ ಮತ್ತು ಆಕೆಯ ಸ್ನೇಹಿತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದರೆ ಈ ಮೂಲಕ ಘಟನೆಯ ಕಾವು ದಿನೇ-ದಿನೇ ಹೆಚ್ಚುತ್ತಿದೆ.
ಇತ್ತೀಚೆಗೆ, ಕನ್ನಡ ನಟಿ ಪ್ರಣಿತಾ ಸುಭಾಷ್, ಬಹುಭಾಷಾ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್, ಕೂನಲ್ಲಿ ಈ ಭಯಾನಕ ಘಟನೆಯ ಬಗ್ಗೆ ತನ್ನ ವಿರೋಧವನ್ನು ವ್ಯಕ್ತಪಡಿಸಿದರು. ಅವರು ಕೂನಲ್ಲಿ "ನಾವು ಮಹಿಳೆಯರನ್ನು ದೇವತೆಯಾಗಿ ಪೂಜಿಸುವ ದೇಶಕ್ಕೆ ಸೇರಿದವರು. ರಾಕ್ಷಸರನ್ನು ಕೊಂದ ಚಾಮುಂಡಿ ದೇವಿಯ ತಾಯ್ನಾಡಿನಲ್ಲಿ ಇಂತಹ ಭಯಾನಕ ಘಟನೆಯನ್ನು ನೋಡುವುದು ಹೃದಯವನ್ನು ವಿದ್ರಾವಕ. ಶ್ರೀಮಂತ ಸಂಸ್ಕೃತಿಗೆ ಹೆಸರಾದ ಮೈಸೂರು ನಗರದಲ್ಲಿ ಇಂತಹ ಘಟನೆ ನಡೆದಿದೆ ಎಂದು ಊಹಿಸಲೂ ಸಾಧ್ಯವಿಲ್ಲ, ಎಂದು ಬರೆದುಕೊಂಡಿದ್ದಾರೆ.
"ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕಾದ ಸಮಯ ಬಂದಿದೆ, ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು -ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಮಹಿಳೆಯರ ಗೌರವವನ್ನು ಹೆಚ್ಚಿಸೋಣ - ಸಮಾಜದ ಗೌರವವನ್ನು ರಕ್ಷಿಸಲು ಆಕೆಯ ಘನತೆಯನ್ನು ರಕ್ಷಿಸೋಣ. ಎಂದಿದ್ದಾರೆ.

ಈತನ್ಮಧ್ಯೆ, ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಗಳಾದ, ಶ್ರೀ ಬಸವರಾಜ ಎಸ್ ಬೊಮ್ಮಾಯಿ ಅವರು ಮಾತನಾಡಿ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಪ್ರವೀಣ್ ಸೂದ್ ಅವರು ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ ಮತ್ತು ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ದೃಢಪಡಿಸಿದ್ದಾರೆ.
ನಿಖರವಾಗಿ ಆದದ್ದಾದರು ಏನು?
ಈ ವಾರದ ಶುರುವಾತಿನಲ್ಲಿ, ಮಂಗಳವಾರ ರಾತ್ರಿ 7:30 ರ ಸುಮಾರಿಗೆ ಚಾಮುಂಡಿ ಬೆಟ್ಟದಿಂದ ಹಿಂದಿರುಗುತ್ತಿದ್ದಾಗ ಯುವಕರ ಗುಂಪೊಂದು ಮೆಡಿಕಲ್ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನನ್ನು ಸುತ್ತುವರೆದು ಹಣವನ್ನು ಕೇಳಿದಾಗ, ಯುವತಿ ಮತ್ತು ಆಕೆಯ ಸ್ನೇಹಿತ ಹಣ ಕೊಡಲು ನಿರಾಕರಿಸಿದರು. ಆಗ ಆ ಯುವಕರು ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾರೆ, ಮತ್ತು ಆಕೆಯ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದಾರೆ.
ಯುವಕರ ಗ್ಯಾಂಗ್ ವಿಡಿಯೋ ಮಾಡಿ ಮೂರು ಲಕ್ಷ ಹಣ ಕೊಡುವಂತೆ ಒತ್ತಾಯಿಸಿ, ಹಣ ಕೊಡದೆ ಹೋದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಯುವತಿ ಮತ್ತು ಆಕೆಯ ಸ್ನೇಹಿತ ಹಣಕೊಡಲು ತಾವು ಅಶಕ್ತರೆಂದು ಹೇಳಿಕೊಂಡಾಗ ಯುವಕರು ಹಲ್ಲೆ ಮಾಡಿ, ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಪ್ರಕರಣದ ಐದೂ ಆರೋಪಿಗಳನ್ನು ಇಂದು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಎಲ್ಲ ಆರೋಪಿಗಳು ಕೂಲಿ ಕಾರ್ಮಿಕರಾಗಿದ್ದು ತಮಿಳುನಾಡಿನವರಾಗಿದ್ದಾರೆ. ಆರೋಪಿಗಳಲ್ಲಿ ಒಬ್ಬ ಬಾಲಾಪರಾಧಿಯೂ ಸೇರಿದ್ದಾನೆ. ಸಂತ್ರಸ್ತೆಯಿಂದ ಹೆಚ್ಚಿನ ಮಾಹಿತಿ ಸಿಗದೇ ಹೋದಲು ಆಕೆಯ ಸ್ನೇಹಿತನಿಂದ ಮಾಹಿತಿ ಸಂಗ್ರಹಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ತನಿಖಾ ತಂಡದ ಪೊಲೀಸರಿಗೆ ಐದು ಲಕ್ಷ ಇನಾಮು ಘೋಷಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಲವು ನಟ-ನಟಿಯರು ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ. ನಟಿ ಶ್ರುತಿ, ತಾರಾ, ಮಾಳವಿಕಾ, ನಟ ಜಗ್ಗೇಶ್, ಅದಿತಿ ಪ್ರಭುದೇವ್ ಹೀಗೆ ಹಲವು ನಟ-ನಟಿಯರು ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದಿದ್ದಾರೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ಪೊಲೀಸರು ಹಾಗೂ ರಾಜಕಾರಣಿಗಳ ಬೇಜವಾಬ್ದಾರಿತನದಿಂದಲೇ ಈ ದುರ್ಘಟನೆ ನಡೆದಿದೆ ಎಂದಿದ್ದಾರೆ. ಮಾಜಿ ಸಿಎಂ, ನಿರ್ಮಾಪಕ ಎಚ್.ಡಿ.ಕುಮಾರಸ್ವಾಮಿ ಅವರಂತೂ ಅಪರಾಧಿಗಳಿಗೆ 'ಆಂಧ್ರ ಮಾದರಿ' ಶಿಕ್ಷೆ ಆಗಬೇಕು ಎನ್ನುವ ಮೂಲಕ ಅವರನ್ನು ಎನ್‌ಕೌಂಟರ್ ಮಾಡಿ ಎಂದಿದ್ದಾರೆ. ರಾಜ್ಯದೆಲ್ಲೆಡೆ ಮೈಸೂರು ಪ್ರಕರಣಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.