»   » ನೆನಪಿಡಿ.. ಪಾರೂಲ್ ಸಿನಿಮಾ ಹೆಸರು 'ಪಾತರಗಿತ್ತಿ' ಅಲ್ಲ, ಅದು 'ಬಟರ್ ಫ್ಲೈ'

ನೆನಪಿಡಿ.. ಪಾರೂಲ್ ಸಿನಿಮಾ ಹೆಸರು 'ಪಾತರಗಿತ್ತಿ' ಅಲ್ಲ, ಅದು 'ಬಟರ್ ಫ್ಲೈ'

Posted By:
Subscribe to Filmibeat Kannada

ಪಾರೂಲ್ ಯಾದವ್ ಸದ್ಯ ಹಿಂದಿಯ 'ಕ್ವೀನ್' ಸಿನಿಮಾದ ರಿಮೇಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ 'ಬಟರ್ ಫ್ಲೈ' ಎಂಬ ಟೈಟಲ್ ಇಡಲಾಗಿದೆ.

'ಬಟರ್ ಫ್ಲೈ' ಜೊತೆ ರಮೇಶ್ ಅರವಿಂದ್, ಪಾರೂಲ್ ಹಾರಾಟ

ಆದರೆ ಈಗ ಪಾರೂಲ್ ಗೆ 'ಬಟರ್ ಫ್ಲೈ' ಸಿನಿಮಾದ ಟೈಟಲ್ ಹೇಳಿ ಹೇಳಿ ಸಾಕಾಗಿದೆ. ಯಾಕಂದ್ರೆ ಟ್ವಿಟ್ಟರ್ ನಲ್ಲಿ ಅವರ ಅನೇಕ ಅಭಿಮಾನಿಗಳು ಚಿತ್ರಕ್ಕೆ 'ಪಾತರಗಿತ್ತಿ' ಎಂಬ ಹೆಸರನ್ನು ಬಳಸಿದ್ದರು. ಮೊದಮೊದಲು ಪಾರೂಲ್ ಅದು 'ಪಾತರಗಿತ್ತಿ' ಅಲ್ಲ 'ಬಟರ್ ಫ್ಲೈ' ಎಂದು ಹೇಳಿದ್ದರು.

Parul Yadav clarified the confusion about 'Butterfly' movie title.

ಆದರೂ ಕೆಲ ಅಭಿಮಾನಿಗಳಂತು ಪಾರೂಲ್ ಎಷ್ಟು ಹೇಳಿದರೂ ಕೇಳುತ್ತಲೇ ಇಲ್ಲ. 'ಬಟರ್ ಫ್ಲೈ' ಮತ್ತು 'ಪಾತರಗಿತ್ತಿ' ಎರಡು ಒಂದೇ ಎಂದು ಹೇಳಿ ಟ್ವಿಟ್ಟರ್ ನಲ್ಲಿಯೇ ವಾದ ಮಾಡುತ್ತಿದ್ದಾರೆ. ಕೊನೆಗೆ ಪಾರೂಲ್ ತಮ್ಮ ಅಭಿಮಾನಿಗಳಿಗೆ ಅರ್ಥ ಆಗುವಂತೆ 'ಬಟರ್ ಫ್ಲೈ' ಎಂದರೆ ಕನ್ನಡದಲ್ಲಿ 'ಪಾತರಗಿತ್ತಿ' ಆದರೆ ನಮ್ಮ ಚಿತ್ರದ ಟೈಟಲ್ 'ಬಟರ್ ಫ್ಲೈ' ಎಂದು ಹೇಳಿ ಸಮಾಧಾನ ಮಾಡಿದರು.

Parul Yadav clarified the confusion about 'Butterfly' movie title.

ಅಂದಹಾಗೆ, ಹಿಂದಿಯ 'ಕ್ವೀನ್' ಸಿನಿಮಾ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಕನ್ನಡದಲ್ಲಿ ಪಾರೂಲ್ ಯಾದವ್ ಮತ್ತು ತಮಿಳಿನಲ್ಲಿ ಕಾಜಲ್ ಅಗರ್ವಾಲ್ ನಾಯಕಿಯರಾಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

English summary
Parul Yadav has taken her twitter account to clarify the confusion about 'Butterfly' movie title

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada