For Quick Alerts
  ALLOW NOTIFICATIONS  
  For Daily Alerts

  ಶಾಕಿಂಗ್: ರವಿಚಂದ್ರನ್ ಚಿತ್ರದಿಂದ ಪಾರುಲ್ ಔಟ್

  |

  ಪ್ಯಾರ್ಗೆ ಆಗ್ಬಿಟ್ಟೈತೆ ನಾಯಕಿಯ ಮೇಲೆ ಅದ್ಯಾಕೋ ರವಿಚಂದ್ರನ್ ಮುನಿಸಿಕೊಂಡಂತಿದೆ. ಕೊನೇ ಗಳಿಗೆಯಲ್ಲಿ ಪಾರುಲ್ ಯಾದವ್ ರವಿಚಂದ್ರನ್ ಮುಖ್ಯ ಭೂಮಿಕೆಯಲ್ಲಿರುವ 'ಅಪೂರ್ವ' ಚಿತ್ರದಿಂದ ಬಾಹರ್ ಆಗಿದ್ದಾರೆ.

  ಅಪೂರ್ವ ಚಿತ್ರಕ್ಕೆ ಪಾರುಲ್ ನಾಯಕಿಯಾಗಿ ಆಯ್ಕೆಯಾಗಿದ್ದರು ಮತ್ತು ಅದಕ್ಕಾಗಿ ಕಾಲ್ ಶೀಟ್ ಕೂಡಾ ನೀಡಿದ್ದರು. ರವಿಚಂದ್ರನ್ ಜೊತೆ ನಟಿಸುತ್ತಿರುವುದಕ್ಕೆ ಸಂತೋಷ ವ್ಯಕ್ತ ಪಡಿಸಿದ್ದರು. ಆದರೆ ಚಿತ್ರತಂಡ ಪಾರುಲ್ ಅವರನ್ನು ಚಿತ್ರದಿಂದ ಹೊರಕ್ಕೆ ಹಾಕಿದೆ.

  ಇದಕ್ಕೆ ಸ್ಪಷ್ಟ ಕಾರಣ ಲಭ್ಯವಾಗಿಲ್ಲದಿದ್ದರೂ ಗಾಂಧಿನಗರದ ಗಲ್ಲಿಗಳ ಪ್ರಕಾರ ರವಿಚಂದ್ರನ್ ಜೊತೆ ಬಿಸಿಬಿಸಿ ದೃಶ್ಯದಲ್ಲಿ ನಟಿಸಲು ಪಾರುಲ್ ಒಪ್ಪಲಿಲ್ಲ ಎನ್ನುವುದು ಒಂದು ಗಾಳಿಸುದ್ದಿ.

  ಇನ್ನೊಂದು ಗಾಳಿಸುದ್ದಿಯ ಪ್ರಕಾರ ಮಾಧ್ಯಮಗಳಿಗೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಕ್ಕಾಗಿ ಚಿತ್ರದಿಂದ ಪಾರುಲ್ ಅವರನ್ನು ಕೈಬಿಡಲಾಗಿದೆ ಎನ್ನಲಾಗುತ್ತಿದೆ.

  ಚಿತ್ರದ ನಿರ್ಮಾಪಕರಿಂದಾಗಲಿ, ಪಾರುಲ್ ಅವರಿಂದ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿಲ್ಲ.

  ಈ ಚಿತ್ರಕ್ಕೆ ರವಿಚಂದ್ರನ್ ನಿರ್ದೇಶಕ

  ಈ ಚಿತ್ರಕ್ಕೆ ರವಿಚಂದ್ರನ್ ನಿರ್ದೇಶಕ

  ಅಪೂರ್ವ ಚಿತ್ರಕ್ಕೆ ನಾಯಕನ ಪಾತ್ರದ ಜೊತೆಗೆ ರವಿಮಾಮ ನಿರ್ದೇಶಕನ ಜವಾಬ್ದಾರಿ ಕೂಡಾ ವಹಿಸಿಕೊಂಡಿದ್ದಾರೆ. ಪಾರುಲ್ ಈ ಚಿತ್ರದಲ್ಲಿ ಟೈಟಲ್ ರೋಲಿನಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು.

  ಅಪೂರ್ವ ಚಿತ್ರದ ಕಥೆ

  ಅಪೂರ್ವ ಚಿತ್ರದ ಕಥೆ

  ಈ ಚಿತ್ರ ವಿಶಿಷ್ಟ ಕಥಾನಕವನ್ನು ಹೊಂದಿದೆ. ಒಂದೇ ಅಪಾರ್ಟ್ಮೆಂಟಿನಲ್ಲಿ ವಾಸವಿರುವ ಅರವತ್ತು ವರ್ಷದವನ ಜೊತೆ 19 ವರ್ಷದ ಹುಡುಗಿಯ ಜೊತೆ ಸಂಬಂಧದ ಸುತ್ತ ಚಿತ್ರಕಥೆ ಹಣೆಯಲಾಗಿದೆ.

  ಪರೂಲ್ ಯಾದವ್

  ಪರೂಲ್ ಯಾದವ್

  ಚಿತ್ರದಲ್ಲಿ ಬರುವ ಪ್ರಣಯ ದೃಶ್ಯಗಳಲ್ಲಿ ನಟಿಸಲು ಪಾರುಲ್ ಓಕೆ ಅಂದಿದ್ದರು ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ.

  ರಿಮೇಕ್ ಚಿತ್ರವಲ್ಲ

  ರಿಮೇಕ್ ಚಿತ್ರವಲ್ಲ

  ಅಪೂರ್ವ ರಿಮೇಕ್ ಚಿತ್ರವಲ್ಲ. ಈ ಚಿತ್ರ ಬಾಲಿವುಡ್ ನಿಶ್ಯಬ್ದ್ ಚಿತ್ರದ ರಿಮೇಕ್ ಅನ್ನುವ ಸುದ್ದಿ ಹಬ್ಬಿತ್ತು. ನಿಶ್ಯಬ್ದ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಜಿಯಾ ಖಾನ್ ಪ್ರಮುಖ ಭೂಮಿಕೆಯಲ್ಲಿದ್ದರು.

  ಪಾರುಲ್ ಬೇರೆ ಚಿತ್ರದಲ್ಲಿ ಬ್ಯೂಸಿ

  ಪಾರುಲ್ ಬೇರೆ ಚಿತ್ರದಲ್ಲಿ ಬ್ಯೂಸಿ

  ನನ್ನ ಮುಂದಿನ ಚಿತ್ರಕ್ಕಾಗಿ ಬೆಂಗಳೂರಿಗೆ ಬಂದಿದ್ದೇನೆ. ದುನಿಯಾ ವಿಜಯ್ ಜೊತೆ ಶಿವಾಜಿನಗರ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಪಾರುಲ್ ಟ್ವೀಟ್ ಮಾಡಿದ್ದಾರೆ.

  English summary
  Parul Yadav has been thrown out of the Sandalwood flick 'Apoorva'. Crazy Star Ravichandran was in lead role and he is director too of this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X