Don't Miss!
- News
Breaking; ಸಹೋದರನ ವಿರುದ್ಧ ಅಭ್ಯರ್ಥಿ ಘೋಷಿಸಿದ ರೆಡ್ಡಿ!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪಾಕಿಸ್ತಾನಕ್ಕೆ ಪಂಚ್ ನೀಡಿದ ನಟಿ ಪಾರೂಲ್ ಯಾದವ್
Recommended Video
ಇಂಡಿಯಾ - ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ವಿಜಯೋತ್ಸವದಲ್ಲಿ ನಟಿ ಪಾರೂಲ್ ಯಾದವ್ ಪಾಕಿಸ್ತಾನಕ್ಕೆ ಪಂಚ್ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಪಾಕಿಸ್ತಾನ ಮಾಧ್ಯಮವೊಂದು ಭಾರತವನ್ನ ಹೀಯಾಳಿಸುವ ರೀತಿ ಜಾಹೀರಾತು ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಪುಲ್ವಾಮ ದಾಳಿ ಬಳಿಕ ಪಾಕ್ ಗಡಿಯೊಳಗೆ ನುಗ್ಗಿ ಬಾಲ್ ಕೋಟ್ ಮೇಲೆ ಏರ್ ಸ್ಟ್ರೈಕ್ ಮಾಡಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಂತೆ ಕಾಣುವ ವ್ಯಕ್ತಿಯನ್ನ ಬಳಸಿಕೊಂಡು ಭಾರತವನ್ನ ಅಣುಕಿಸುವಂತಹ ಜಾಹೀರಾತು ಮಾಡಿ ಟಿವಿಯಲ್ಲಿ ಪ್ರಸಾರ ಮಾಡಿದೆ.
ಪಾಕ್
ಜಾಹೀರಾತಿಗೆ
ಕಪಾಳ
ಮೋಕ್ಷ
ಮಾಡಿದಂತೆ
ತಿರುಗೇಟು
ಕೊಟ್ಟ
ಪೂನಂ
ಪಾಂಡೆ
ಇದಕ್ಕೆ ಈಗ ಪಾರೂಲ್ ಯಾದವ್ ಸರಿಯಾದ ಪ್ರತಿಕ್ರಿಯೆ ನೀಡಿದ್ದಾರೆ. ಅಭಿನಂದನ್ ಅವರ ರೀತಿಯ ಮೀಸೆ ಧರಿಸಿ ಅದೇ ಜಾಹಿರಾತಿನ ಮೂಲಕ ಪಾಕಿಸ್ತಾನಕ್ಕೆ ಪಂಚ್ ನೀಡಿದ್ದಾರೆ. ಟೀ ಕಪ್ ನೀವೆ ಇಟ್ಟುಕೊಳ್ಳಿ, ನಾವು ವರ್ಲ್ಡ್ ಗೆಲ್ಲುತ್ತೇವೆ ಎಂದು ಪಾರೂಲ್ ಉತ್ತರ ನೀಡಿದ್ದಾರೆ.
ಪಾರೂಲ್ ಸ್ನೇಹಿತರ ಜೊತೆ ಗೂಡಿ ಭಾರತ ಮತ್ತು ಪಾಕಿಸ್ತಾನದ ಪಂದ್ಯವನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾ ವೀಕ್ಷಿಸಿದ್ದಾರೆ. ಪಾಕಿಸ್ತಾನದ ವಿರುದ್ಧ ಇಂಡಿಯಾ ಗೆದ್ದಿದ್ದು ಅವರಿಗೆ ತುಂಬ ಖುಷಿ ನೀಡಿದೆ.
ಅಂದಹಾಗೆ, ಈ ಹಿಂದೆ ಬಾಲಿವುಡ್ ಪೂನಂ ಪಾಂಡೆ ಕೂಡ ತನ್ನ ಒಳ ಉಡುಪಿನ ಮೂಲಕ ತನ್ನದೆ ಸ್ಟೈಲ್ ನಲ್ಲಿ ಪಾಕ್ ಜಾಹಿರಾತಿಗೆ ತಿರುಗೇಟು ನೀಡಿದ್ದರು.
ಸದ್ಯ, ಪಾಕಿಸ್ತಾನದ ವಿರುದ್ಧ ಇಂಡಿಯಾ ವಿಜಯ ಸಾಧಿಸಿದ್ದು, ಮುಂದೆ ವಿಶ್ವಕಪ್ ಗೆಲ್ಲಬೇಕು ಎನ್ನುವ ಆಸೆ ಭಾರತೀಯರದ್ದಾಗಿದೆ.
ಪಾರೂಲ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ