For Quick Alerts
  ALLOW NOTIFICATIONS  
  For Daily Alerts

  'ಪೈಲ್ವಾನ್' ಸುದೀಪ್ ಅಬ್ಬರ ನೋಡಿ ಬೆರಗಾದ ಪಾರೂಲ್ ಯಾದವ್

  |

  Recommended Video

  Pailwaan movie : 'ಪೈಲ್ವಾನ್' ಅಬ್ಬರ ನೋಡಿ ಬೆರಗಾದ ಪಾರೂಲ್ ಯಾದವ್ | Oneindia Kannada

  'ಪೈಲ್ವಾನ್' ಸಿನಿಮಾದ ಬಿಡುಗಡೆಗೆ ಇನ್ನು 9 ದಿನಗಳು ಮಾತ್ರ ಬಾಕಿ ಇದೆ. ಈಗಾಗಲೇ ಬಾಲಿವುಡ್ ವರೆಗೆ ಸಿನಿಮಾದ ಪ್ರಭಾವ ಹಬ್ಬಿದೆ. ಚಿತ್ರದ ಕ್ರೇಜ್ ನೋಡಿ ನಟಿ ಪಾರೂಲ್ ಯಾದವ್ ಸಹ ಬೆರಗಾಗಿದ್ದಾರೆ.

  'ಪೈಲ್ವಾನ್' ಚಿತ್ರದ ಅಬ್ಬರ ಉತ್ತರ ಭಾರತದಲ್ಲಿಯೂ ಹೆಚ್ಚಾಗಿದೆ. ಮುಂಬೈ ಬೀದಿಗಳಲ್ಲಿ 'ಪೈಲ್ವಾನ್' ಚಿತ್ರದ ದೊಡ್ಡ ಪೋಸ್ಟರ್ ಹಾಕಲಾಗಿದೆ. ಈ ಪೋಸ್ಟರ್ ಗಳು ನಟಿ ಪಾರೂಲ್ ಯಾದವ್ ಕಣ್ಣಿಗೆ ಬಿದ್ದಿದೆ.

  ಎಲ್ಲಿಯವರೆಗೆ ನನ್ನ ನಂಬುವಿರೋ, ಅಲ್ಲಿಯವರೆಗೆ ಈ ಉಸಿರು ನಿಮಗಾಗಿ- ಸುದೀಪ್ಎಲ್ಲಿಯವರೆಗೆ ನನ್ನ ನಂಬುವಿರೋ, ಅಲ್ಲಿಯವರೆಗೆ ಈ ಉಸಿರು ನಿಮಗಾಗಿ- ಸುದೀಪ್

  ಪೋಸ್ಟರ್ ನೋಡಿ ಟ್ವೀಟ್ ಮಾಡಿರುವ ಪಾರೂಲ್ ''ಚಕ್ರವರ್ತಿ ಎಲ್ಲ ಕಡೆ ಇರುತ್ತಾರೆ. ಪೈಲ್ವಾನ್ ಪೋಸ್ಟರ್ ಅನ್ನು ಮುಂಬೈನಲ್ಲಿ ನೋಡಿ ತುಂಬ ಖುಷಿಯಾಯ್ತು. ನಿರಂತರವಾಗಿ ಜಗತ್ತಿನಾದ್ಯಂತ ಕನ್ನಡ ಸಿನಿಮಾವನ್ನು ತಲುಪಿಸುತ್ತಿರುವ ನಿಮಗೆ ಧನ್ಯವಾದ.'' ಎಂದು ಬರೆದುಕೊಂಡಿದ್ದಾರೆ.

  ಪರ ರಾಜ್ಯದಲ್ಲಿ 'ಪೈಲ್ವಾನ್' ಕ್ರೇಜ್ ಕಂಡು ಖುಷಿಯಾಗಿರುವ ಪಾರೂಲ್ ಸುದೀಪ್ ರನ್ನು ಮೆಚ್ಚಿಕೊಂಡಿದ್ದಾರೆ. ಅಂದಹಾಗೆ, ಈ ಹಿಂದೆ ಸುದೀಪ್ ಜೊತೆಗೆ 'ಬಚ್ಚನ್' ಸಿನಿಮಾದಲ್ಲಿ ಪಾರೂಲ್ ತೆರೆ ಹಂಚಿಕೊಂಡಿದ್ದರು.

  Parul Yadav Tweets About Pailwaan Movie

  ಕಪಿಲ್ ಶರ್ಮ ಶೋನಲ್ಲಿ 'ಪೈಲ್ವಾನ್' ತಂಡ ಕಪಿಲ್ ಶರ್ಮ ಶೋನಲ್ಲಿ 'ಪೈಲ್ವಾನ್' ತಂಡ

  'ಪೈಲ್ವಾನ್' ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕೃಷ್ಣ ಈ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಆಕಾಂಕ್ಷ ಸಿಂಗ್ ಚಿತ್ರದ ನಾಯಕಿಯಾಗಿದ್ದಾರೆ. ಸುದೀಪ್ ಹುಟ್ಟುಹಬ್ಬದ ವಿಶೇಷವಾಗಿ ನಿನ್ನೆ (ಸಪ್ಟೆಂಬರ್ 2) ಚಿತ್ರದ ಪ್ರಮೋಷನಲ್ ಹಾಡು ಬಿಡುಗಡೆಯಾಗಿದ್ದು, ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆದಿದೆ.

  English summary
  Actress Parul Yadav tweets about Sudeep's 'Pailwaan' kannada movie.
  Tuesday, September 3, 2019, 20:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X