For Quick Alerts
  ALLOW NOTIFICATIONS  
  For Daily Alerts

  ಶಿವರಾಜ್ ಕುಮಾರ್ ಚಿಕ್ಕಮ್ಮ, ದೊಡ್ಮನೆ ಸಂಭಂಧಿ ನಾಗಮ್ಮ ನಿಧನ

  |

  ದೊಡ್ಮನೆ ಕುಟುಂಬದ ಆಧಾರ ಸ್ತಂಭವಾಗಿದ್ದ ಪಾರ್ವತಮ್ಮ ರಾಜ್‌ಕುಮಾರ್‌ ಸಹೋದರಿ ಎಸ್.ಎ.ನಾಗಮ್ಮ ಇಂದು ನಿಧನರಾಗಿದ್ದಾರೆ.

  ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್, ನಿರ್ಮಾಪಕ ಚಿನ್ನಯ್ಯ ಅವರಿಗೂ ಸಹೋದರಿ ಆಗಿದ್ದ ನಾಗಮ್ಮ ಅವರಿಗೆ 81 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಕೆಲವು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ನಾಗಮ್ಮ ಇಂದು ಮಧ್ಯಾಹ್ನದ ವೇಳೆಗೆ ಕೊನೆ ಉಸಿರೆಳೆದಿದ್ದಾರೆ.

  ನಾಗಮ್ಮನವರ ಪುತ್ರ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ವಾಸವಿದ್ದರು. ಅದೇ ನಿವಾಸದಲ್ಲಿ ನಾಗಮ್ಮನವರು ಕೊನೆ ಉಸಿರೆಳೆದಿದ್ದಾರೆ. ಪಾರ್ವತಮ್ಮ ರಾಜ್‌ಕುಮಾರ್ ಅವರಿಗೆ ತಂಗಿಯಾಗಿದ್ದ ನಾಗಮ್ಮ, ನಿರ್ಮಾಪಕ ಚಿನ್ನಯ್ಯನವರಿಗೆ ಅಕ್ಕ. ಇವರಿಬ್ಬರು ಮಾತ್ರವಲ್ಲದೆ, ಗೋವಿಂದೇಗೌಡ, ಎಸ್.ಎ.ಶ್ರೀನಿವಾಸ್, ಜಯಮ್ಮ ಎಂಬ ಸಹೋದರ, ಸಹೋದರಿಯರು ನಾಗಮ್ಮನವರಿಗೆ ಇದ್ದರು.

  ನಾಗಮ್ಮನವರ ಅಂತ್ಯಕ್ರಿಯೆ ಇಂದು ಸಂಜೆ ಇಳಂದೂರಿನ ಕೆಸ್ತೂರಿನಲ್ಲಿ ನಡೆಯಲಿದೆ. ದೊಡ್ಮನೆ ಕುಟುಂಬದ ಕೆಲವರು ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

  ದೊಡ್ಮನೆ ಕುಟುಂಬವು ಒಂದರ ಹಿಂದೊಂದರಂತೆ ಕಹಿ ಸುದ್ದಿಗಳನ್ನು ಕೇಳುತ್ತಲೇ ಇದೆ. ಪುನೀತ್ ರಾಜ್‌ಕುಮಾರ್ ನಿಧನರಾಗಿ ವರ್ಷವಾಗುವ ಮುನ್ನವೇ ಪುನೀತ್‌ ರಾಜ್‌ಕುಮಾರ್‌ಗೆ ಚಿಕ್ಕಮ್ಮ ಆಗಬೇಕಿದ್ದ ನಾಗಮ್ಮನವರು ನಿಧನ ರಾಗಿದ್ದಾರೆ.

  English summary
  Parvathamma Rajkumar's sister SA Nagamma passed away in Bengaluru today. She is sister of Parvathamma Rajkumar and producer Chinnaiah.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion