»   » ಅಣ್ಣಾವ್ರ ಮನೆಯಿಂದ ಚಿತ್ರರಂಗಕ್ಕೆ ಆರಡಿ ಕಟೌಟ್ ಎಂಟ್ರಿ

ಅಣ್ಣಾವ್ರ ಮನೆಯಿಂದ ಚಿತ್ರರಂಗಕ್ಕೆ ಆರಡಿ ಕಟೌಟ್ ಎಂಟ್ರಿ

Posted By:
Subscribe to Filmibeat Kannada
ಅಣ್ಣಾವ್ರ ಮನೆಯಿಂದ ಚಿತ್ರರಂಗಕ್ಕೆ ಆರಡಿ ಕಟೌಟ್ ಎಂಟ್ರಿ | Filmibeat Kannada

ಶಿವರಾಜ್ ಕುಮಾರ್ , ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮೂವರು ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಸ್ಟಾರ್ ನಟರು. ಅಭಿನಯ ಮಾತ್ರವಲ್ಲದೆ ಸಿನಿಮಾ ನಿರ್ಮಾಣ ಹಾಗೂ ಸಮಾಜ ಸೇವೆಯಲ್ಲಿಯೂ ಗುರುತಿಸಿಕೊಂಡಿರುವ ಕಲಾವಿದರು.

ಈ ಮೂವರು ಆದ ನಂತರ ವಿನಯ್ ರಾಜ್ ಕುಮಾರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು. ಈಗ ರಾಮ್ ಕುಮಾರ್ ಮಗ ಧೀರೇನ್ ರಾಮ್ ಕುಮಾರ್ ಸಿನಿಮಾರಂಗಕ್ಕೆ ಎಂಟ್ರಿಕೊಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಈಗಾಗಲೇ ಕಥೆಗಳನ್ನೂ ಕೇಳುತ್ತಿದ್ದಾರೆ ಚಿತ್ರರಂಗದ ಸ್ಟಾರ್ ನಿರ್ಮಾಪಕರು ರಾಜ್ ಮೊಮ್ಮಗನನ್ನ ಪರಿಚಯಿಸಲು ಮುಂದಾಗಿದ್ದಾರೆ.

ತಮನ್ನಾ ಮೊದಲ ಕನ್ನಡ ಸಿನಿಮಾಗೆ ಪುನೀತ್ ನಾಯಕ !

ಇನ್ನು ಇಷ್ಟೇ ರಾಜ್ ಫ್ಯಾಮಿಲಿಯಿಂದ ಯಾರೂ ಕೂಡ ಸಿನಿಮಾರಂಗಕ್ಕೆ ಬರುವವರಿಲ್ಲ. ಇವರಿಬ್ಬರಲ್ಲೇ ಯಾರಾದರೂ ಸ್ಟಾರ್ ಆಗಬೇಕು ಎನ್ನುತ್ತಿದ್ದ ಅಭಿಮಾನಿಗಳ ಮುಂದೆ ದೊಡ್ಮನೆಯಿಂದ ಆರಡಿ ಕಟೌಟ್ ಎಂಟ್ರಿಕೊಡುತ್ತಿದ್ದಾನೆ. ಕಮರ್ಷಿಯಲ್ ಹೀರೋಗೆ ಹೇಳಿ ಮಾಡಿಸಿದ ಫಿಟ್ ನೆಸ್, ಮಾಸ್ ಹೀರೋಗೆ ಬೇಕಿರುವ ಹೈಟು, ನೋಡೋದಕ್ಕೂ ಸ್ಮಾರ್ಟ್, ಈ ಎಲ್ಲಾ ಕ್ವಾಲಿಟಿ ಇರುವ ರಾಜ್ ಕುಮಾರ್ ಅವರ ಸೋದರ ಅಳಿಯ ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದಾನೆ. ಯಾರವನು? ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ದೊಡ್ಮನೆಯಿಂದ ಹೊಸ ನಾಯಕನ ಎಂಟ್ರಿ

ಡಾ ರಾಜ್ ಕುಮಾರ್ ಫ್ಯಾಮಿಲಿಯಿಂದ ಹೊಸ ನಾಯಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಕೊಡುತ್ತಿದ್ದಾರೆ. ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರ ಎಸ್ ಎ ಶ್ರೀನಿವಾಸ್ ಅವರ ಪುತ್ರ ಸೂರಜ್ ಕುಮಾರ್ ಹೀರೋ ಆಗಿ ಚಿತ್ರರಂಗಕ್ಕೆ ಬರುತ್ತಿದ್ದಾರೆ.

ನವ ನಾಯಕ ಸೂರಜ್ ಕುಮಾರ್

ಸೂರಜ್ ಕುಮಾರ್ ಮೈಸೂರಿನಲ್ಲಿ ಡಿಗ್ರಿ ಮುಗಿಸಿ ಚಿತ್ರರಂಗಕ್ಕೆ ಬರುವ ತಯಾರಿಯನ್ನ ಮಾಡಿಕೊಂಡಿದ್ದಾರೆ. ನಿನಾಸಂ ನಲ್ಲಿ ಅಭಿನಯದ ತರಬೇತಿ ಪಡೆದುಕೊಂಡಿದ್ದು ಚೆನೈ ನಲ್ಲಿ ಡ್ಯಾನ್ಸ್ ಮತ್ತು ಫೈಟಿಂಗ್ ಟ್ರೈನಿಂಗ್ ಪಡೆದುಕೊಂಡಿದ್ದಾರೆ.

ಸಕಲ ತಯಾರಿ ಮಾಡಿಕೊಂಡಿರುವ ಸೂರಜ್

ಸೂರಜ್ ತೆರೆ ಮೇಲೆ ಮಿಂಚುವ ಮೊದಲು ತೆರೆ ಹಿಂದಿನ ಕೆಲಸವನ್ನು ಕಲಿತುಕೊಂಡು ಬಂದಿದ್ದಾರೆ. ದರ್ಶನ್ ಅಭಿನಯದ ಐರಾವತ ಹಾಗೂ ತಾರಕ್ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಆಗಿ ಕೆಲಸ ಮಾಡಿದ್ದಾರೆ.

ಫೋಟೋ ಶೂಟ್ ಮಾಡಿಸಿರುವ ಸೂರಜ್

ಚಿತ್ರರಂಗಕ್ಕೂ ಬರುವ ಮುನ್ನ ಲುಕ್ ಟೆಸ್ಟ್ ಮಾಡಿಸಿದ್ದಾರೆ ಸೂರಜ್. ಬೇರೆ ಬೇರೆ ಕಾಸ್ಟ್ಯೂಮ್ಸ್ ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಆರಡಿ ಹೈಟು ಮತ್ತು ಫಿಟ್ ಆಗಿರುವ ಸೂರಜ್ ಕನ್ನಡ ಸಿನಿಮಾರಂಗಕ್ಕೆ ಹೇಳಿ ಮಾಡಿಸಿದ ಮಾಸ್ ಹೀರೋ ನಂತೆ ಇದ್ದಾರೆ.

ಉತ್ತಮ ಕಥೆಗೆ ಆದ್ಯತೆ

ಸೂರಜ್ ಫೋಟೋಸ್ ನೋಡಿದ ತಕ್ಷಣ ಮಾಸ್ ಹೀರೋ ಆಗುವ ಎಲ್ಲಾ ಲಕ್ಷಣಗಳು ಇವೆ ಎನ್ನುವುದು ತಿಳಿಯುತ್ತೆ. ಮೊದಲ ಚಿತ್ರಕ್ಕಾಗಿ ಕಥೆಯ ಆಯ್ಕೆ ಮಾಡುತ್ತಿರುವ ಸೂರಜ್ ಉತ್ತಮ ಕಂಟೆಂಟ್ ಇರುವ ಸಿನಿಮಾವನ್ನ ಆಯ್ಕೆ ಮಾಡಿಕೊಳ್ಳುತ್ತಾರಂತೆ.

English summary
Parvathamma Rajkumar's brother S A Srinivas son Sooraj Kumar to make his sandalwood debut soon. Suraj Kumar has made all the preparation for the film industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada