»   » ಕಿಸ್ಸಿಂಗ್ ದೃಶ್ಯಕ್ಕಾಗಿ 'ಅರ್ಜುನ್ ರೆಡ್ಡಿ' ಬಿಟ್ಟಿದ್ದ ನಟಿ ಒಂದು ತಿಂಗಳು ಕೊರಗಿದರು

ಕಿಸ್ಸಿಂಗ್ ದೃಶ್ಯಕ್ಕಾಗಿ 'ಅರ್ಜುನ್ ರೆಡ್ಡಿ' ಬಿಟ್ಟಿದ್ದ ನಟಿ ಒಂದು ತಿಂಗಳು ಕೊರಗಿದರು

Posted By:
Subscribe to Filmibeat Kannada
ಕಿಸ್ಸಿಂಗ್ ದೃಶ್ಯಕ್ಕಾಗಿ 'ಅರ್ಜುನ್ ರೆಡ್ಡಿ' ರಿಜೆಕ್ಟ್ ಮಾಡಿದ ನಟಿ | Filmibeat Kannada

ಕಳೆದ ವರ್ಷ ಇಡೀ ಸೌತ್ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿ ಮಾಡಿದ ಸಿನಿಮಾ 'ಅರ್ಜುನ್ ರೆಡ್ಡಿ'. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೆ ದೊಡ್ಡ ದೊಡ್ಡ ನಿರ್ದೇಶಕರು, ನಟರು ಈ ಸಿನಿಮಾ ನೋಡಿ ಎಂತಹ ಬ್ಯೂಟಿಫುಲ್ ಸಿನಿಮಾ ಇದು ಅಂತ ಕೊಂಡಾಡಿದ್ದರು. ಹೊಸ ಟೀಂ ಆದರು ಈ ತಂಡ ಒಂದು ಮ್ಯಾಜಿಕ್ ಸೃಷ್ಟಿ ಮಾಡಿತ್ತು.

'ಅರ್ಜುನ್ ರೆಡ್ಡಿ' ಸಿನಿಮಾ ಅಂದ ತಕ್ಷಣ ಮೊದಲು ಎಲ್ಲರಿಗೂ ನೆನಪಾಗುವುದು ಸಿನಿಮಾದ ಕಿಸ್ಸಿಂಗ್ ದೃಶ್ಯಗಳು. ಸಿನಿಮಾದಲ್ಲಿ ನಟಿ ಶಾಲಿನಿ ಪಾಂಡೆ ಅವರ ಬೋಲ್ಡ್ ನಟನೆಗೆ ಎಲ್ಲರೂ ಫಿಧಾ ಆಗಿದ್ದರು. ಈ ಸಿನಿಮಾದ ಮೂಲಕ ಇದ್ದಕ್ಕಿದ್ದ ಹಾಗೆ ಶಾಲಿನಿ ಪಾಂಡೆ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದರು. ಆದರೆ ವಾಸ್ತವವಾಗಿ ಮೊದಲು ಈ ಪಾತ್ರ ಇನ್ನೊಬ್ಬ ನಟಿಗೆ ಹೋಗಿತ್ತು. ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿರುವ ಪಾರ್ವತಿ ನಾಯರ್ ಅವರಿಗೆ ಮೊದಲು 'ಅರ್ಜುನ್ ರೆಡ್ಡಿ' ಆಫರ್ ಬಂದಿತಂತೆ. ಆದರೆ ಸಿನಿಮಾದಲ್ಲಿ ಇರುವ ಕಿಸ್ಸಿಂಗ್ ದೃಶ್ಯಗಳಿಂದ ಅವರು ಈ ಸಿನಿಮಾವನ್ನು ಬಿಟ್ಟರು.

ಕಿರುಕುಳದ ಸುದ್ದಿ ಸುಳ್ಳು : ನಟಿ ಪಾರ್ವತಿ ನಾಯರ್‌ ಸ್ಪಷ್ಟನೆ

ಆದರೆ, 'ಅರ್ಜುನ್ ರೆಡ್ಡಿ' ರಿಲೀಸ್ ಆದ ಮೇಲೆ ತೆರೆಯ ಮೇಲೆ ನೋಡಿದ ಅವರು ಒಂದು ತಿಂಗಳು ನೋವಿನಲ್ಲಿ ಇದ್ದರಂತೆ. ಅರ್ಜುನ್ ರೆಡ್ಡಿ ಸಿನಿಮಾದ ಬಗ್ಗೆ ನಟಿ ಪಾರ್ವತಿ ನಾಯರ್ ಇತ್ತೀಚಿಗಷ್ಟೆ ಒಂದು ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಕೈ ತಪ್ಪಿ ಹೊದ 'ಅರ್ಜುನ್ ರೆಡ್ಡಿ' ಬಗ್ಗೆ ಹೇಳಿಕೊಂಡಿದ್ದಾರೆ. ಮುಂಚೆ ಓದಿ..

ಲಿಪ್ ಲಾಕ್ ಸೀನ್ ನಿಂದ ಸಿನಿಮಾ ಬಿಟ್ಟೆ

''ನನಗೆ 'ಅರ್ಜುನ್ ರೆಡ್ಡಿ' ಸಿನಿಮಾ ಆಫರ್ ಬಂದಿತ್ತು. ಆದರೆ ನಾನು ಅದನ್ನು ಮಿಸ್ ಮಾಡಿಕೊಂಡೆ. ಅವರು ಹೊಸ ಡೈರೆಕ್ಟರ್ ಮತ್ತು ಹೊಸ ಹೀರೋ ಆಗಿದ್ದರು. ಜೊತೆಗೆ ಸಿನಿಮಾದ ದೃಶ್ಯಗಳಲ್ಲಿ ಸಾಕಷ್ಟು ಲಿಪ್ ಲಾಕ್ ಸೀನ್ ಇತ್ತು. ನಮ್ಮ ಫ್ಯಾಮಿಲಿಯಲ್ಲಿ ಅದಕ್ಕೆಲ್ಲ ಒಪ್ಪಿಗೆ ನೀಡುವುದಿಲ್ಲ. ಆದ್ದರಿಂದ ನಾನು ಕೆಲವು ಮುಖ್ಯ ಸಿನಿಮಾಗಳನ್ನು ಮಾಡಲು ಆಗಿಲ್ಲ. ನಾನು ನಮಗೆ ಗೊತ್ತಿಲ್ಲದೆ ಕೆಲವು ಬಾರಿ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತೇವೆ.'' ಎಂದು 'ಅರ್ಜುನ್ ರೆಡ್ಡಿ' ಬಗ್ಗೆ ಮಾತನಾಡಿದ್ದಾರೆ.

ತುಂಬ ಸಿಂಪಲ್ ಕಥೆ ಆಗಿ ಇತ್ತು

''ಈ ಸಿನಿಮಾದ ಗೆಲುವಿಗೆ ಡೈರೆಕ್ಟರ್ ಮುಖ್ಯ ಕಾರಣ. ಅವರು ನನಗೆ ಕಥೆ ಹೇಳಿದಾಗ ಅದು ತುಂಬ ಸಿಂಪಲ್ ಆಗಿ ಇತ್ತು. ಒಂದು ಸರಳ ಕಥೆಯನ್ನು ಅದ್ಬುತವಾಗಿ ತೋರಿಸಿದ್ದಾರೆ. ಕಥೆ ಹೇಳಿದಾಗ ಈ ಸಿನಿಮಾವನ್ನು ಇಷ್ಟು ಚೆನ್ನಾಗಿ ತೋರಿಸುತ್ತಾರೆ ಅಂತ ಗೊತ್ತಿರಲಿಲ್ಲ. ಕೆಲವು ಸಲ ಹೊಸ ನಿರ್ದೇಶಕರ ಪ್ರತಿಭೆಯನ್ನು ಗುರುತಿಸುವುದಕ್ಕೆ ಆಗಲ್ಲ. ಯಾವ ಕಥೆ ಕ್ಲಿಕ್ ಆಗುತ್ತದೆ ಎಂದು ಹೇಳುವುದಕ್ಕೆ ಆಗಲ್ಲ.''

ಸಿನಿಮಾ ನೋಡಿದಾಗ ತುಂಬ ಡಿಫರೆಂಟ್ ಆಗಿತ್ತು.

''ಕಥೆ ಕೇಳಿದಾಗ ಇದು ನರ್ಮಲ್ ಕಥೆ ಆಗಿತ್ತು. ಇದರಲ್ಲಿ ಏನು ಸ್ಪೆಷಲ್ ಇಲ್ಲ ಅನಿಸಿತು. ಆದರೆ ಹೋಗಿ ಸಿನಿಮಾ ನೋಡಿದ ಮೇಲೆ ತುಂಬ ಡಿಫರೆಂಟ್ ಆಗಿತ್ತು. ನನಗೆ ಸಿನಿಮಾ ತುಂಬ ಇಷ್ಟ ಆಯ್ತು. ಡೈರೆಕ್ಟರ್ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ರೀತಿ ಕೆಲವು ಸಿನಿಮಾ ನನಗೆ ಮಿಸ್ ಆಗಿದೆ.''

ಒಂದು ತಿಂಗಳು ತುಂಬ ನೋವಿನಲ್ಲಿ ಇದ್ದೇ

''ಅರ್ಜುನ್ ರೆಡ್ಡಿ ರಿಲೀಸ್ ಆದ ಮೇಲೆ ಒಂದು ತಿಂಗಳು ನಾನು ತುಂಬ ನೋವಿನಲ್ಲಿ ಇದ್ದೇ. ನಾನು ಸಿನಿಮಾ ನೋಡಿ ಈ ರೀತಿಯ ಸಿನಿಮಾ ಮಾಡಬೇಕು ಅಂದುಕೊಂಡೆ. ನಾನು ಇದುವರೆಗೆ ದೊಡ್ಡ ದೊಡ್ಡ ನಟರ ಜೊತೆಗೆ ಸಿನಿಮಾಗಳನ್ನೇ ಮಾಡಿದ್ದೇನೆ. ಆದರೆ ಈ ರೀತಿ ಸಣ್ಣ ಸಿನಿಮಾಗಳು ಕೆಲವೊಮ್ಮೆ ದೊಡ್ಡ ಸಂಚಲನ ಸೃಷ್ಟಿ ಮಾಡುತ್ತೆ.''

'ಅರುವಿ' ಸಿನಿಮಾ ಕೂಡ ರಿಜೆಕ್ಟ್ ಮಾಡಿದ್ದೆ

''ಅರ್ಜುನ್ ರೆಡ್ಡಿ ಜೊತೆಗೆ 'ಅರುವಿ' ಸಿನಿಮಾ ಕೂಡ ನನ್ನಿಂದ ಮಿಸ್ ಆಯ್ತು. ಆ ಸಿನಿಮಾಗೆ 2015 ರಲ್ಲಿ ನನಗೆ ಆಫರ್ ಬಂದಿತ್ತು. ಆ ಟೈಂ ನಲ್ಲಿ ಕೂಡ ಈ ಸಿನಿಮಾ ಇಷ್ಟು ಚೆನ್ನಾಗಿ ಇರುತ್ತದೆ ಎಂದು ಉಹಿಸಿರಲಿಲ್ಲ. ಈ ಚಿತ್ರಕ್ಕಾಗಿ ಕೂದಲು ಕಟ್ ಮಾಡಬೇಕು ಅಂತ ಹೇಳಿದ್ದರು. ನನಗೆ ಕಥೆ ಕೇಳಿದಾಗ ಇದು ಫಿಲ್ಮ್ಸ್ ಫೆಸ್ಟಿವಲ್ ಹೋಗುವ ಮಾದರಿಯ ಸಿನಿಮಾ ಅನಿಸಿತು. ಆ ಸಿನಿಮಾ ಕೂಡ ನೋಡಿ ತುಂಬ ಇಷ್ಟ ಆಯ್ತು. ಅದನ್ನು ನಾನು ಮಿಸ್ ಮಾಡಿಕೊಂಡೆ.''

'ಅರ್ಜುನ್ ರೆಡ್ಡಿ' ರಿಮೇಕ್

ಟಾಲಿವುಡ್ ನಲ್ಲಿ ಸೂಪರ್ ಹಿಟ್ ಆದ 'ಅರ್ಜುನ್ ರೆಡ್ಡಿ' ಸಿನಿಮಾದ ರಿಮೇಕ್ ರೈಟ್ಸ್ ಸಿಕ್ಕಾಪಟ್ಟೆ ಡಿಮ್ಯಾಂಡ್ ನಲ್ಲಿ ಇತ್ತು. ಈ ಸಿನಿಮಾ ಕನ್ನಡಕ್ಕೆ ಬರುತ್ತದೆ. ಯಶ್ ಈ ಚಿತ್ರವನ್ನು ಮಾಡುತ್ತಾರೆ ಎನ್ನುವ ಸುದ್ದಿ ಕೂಡ ಇತ್ತು. ಆದರೆ ಕನ್ನಡಕ್ಕೆ 'ಅರ್ಜುನ್ ರೆಡ್ಡಿ' ಸಿನಿಮಾ ಬರುವ ಬಗ್ಗೆ ಇದುವರೆಗೆ ಪಕ್ಕಾ ಆಗಿಲ್ಲ.

ಕನ್ನಡ ಸಿನಿಮಾದಲ್ಲಿ ನಟನೆ

ಅಂದಹಾಗೆ, ಪಾರ್ವತಿ ನಾಯರ್ ನಟ ಕಿಶೋರ್ ಅವರ 'ವಾಸ್ಕೋಡಿಗಾಮ' ಸಿನಿಮಾದಲ್ಲಿ ನಟಿಸಿದ್ದಾರೆ. 'ಸ್ಟೋರಿಕಥೆ' ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾರ್ವತಿ ಪ್ರವೇಶ ಮಾಡಿದ್ದರು. ಉಳಿದಂತೆ, ಮಲೆಯಾಳಂ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಸಹ ಅಭಿನಯಿಸಿದ್ದಾರೆ. ಕಮಲ್ ಹಾಸನ್ ನಟನೆ ರಮೇಶ್ ಅರವಿಂದ್ ನಿರ್ದೇಶನದ 'ಉತ್ತಮ ವಿಲನ್' ಸಿನಿಮಾದಲ್ಲಿ ಸಹ ಪಾರ್ವತಿ ಕಾಣಿಸಿಕೊಂಡಿದ್ದರು.

English summary
Actress Parvathi Nair rejected 'Arjun Reddy' telugu movie for Kissing scenes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada