'ಪತಿಬೇಕು.ಕಾಂ'ಗೆ ಚಿತ್ರರಸಿಕರು ಫುಲ್ ಫಿದಾ
ಸ್ಟಾರ್ ನಟರ ಮಾಸ್ ಚಿತ್ರಗಳು, ಹೊಸಬರ ಹೊಸಕಥೆಗಳು...ಅಲ್ಲೊಂದು ಇಲ್ಲೊಂದು ಪ್ರಯೋಗಾತ್ಮಕ ಸಿನಿಮಾ. ಹೀಗೆ, ಇದೆಲ್ಲದರ ಮಧ್ಯೆ ವಿಶೇಷವಾಗಿ ಗಮನ ಸೆಳೆಯುತ್ತಿರುವ ಸಿನಿಮಾ 'ಪತಿಬೇಕು.ಕಾಂ'.
ಟಿವಿ ನಿರೂಪಕಿ, ಬಿಗ್ ಬಾಸ್ ಖ್ಯಾತಿ ನಟಿ ಶೀತಲ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಪತಿಬೇಕು.ಕಾಂ' ಚಿತ್ರದ ಟ್ರೈಲರ್ ಕಳೆದ ವಾರ ರಿಲೀಸ್ ಆಗಿತ್ತು. ಕಿಚ್ಚ ಸುದೀಪ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ರು. ಕಿಚ್ಚ ಸುದೀಪ್ ಹಾಗೂ ಜೋಗಿ ಪ್ರೇಮ್ ಟ್ರೈಲರ್ ನೋಡಿ ಫುಲ್ ಮಾರ್ಕ್ಸ್ ಕೊಟ್ಟಿದ್ದರು.
ಇಲ್ಲಿಯವರೆಗೂ ಸುಮಾರು 3 ಲಕ್ಷ ಮಂದಿ ಜನ 'ಪತಿಬೇಕು.ಕಾಂ' ಟ್ರೈಲರ್ ನೋಡಿದ್ದು, ಮೆಚ್ಚಿಕೊಂಡಿರುವವರ ಸಂಖ್ಯೆಯೇ ಹೆಚ್ಚಿದೆ. ಮಧ್ಯಮ ಕುಟುಂಬದ ಹೆಣ್ಣು ಮಗಳಿಗೆ, ಈ ಮದುವೆ ಎಷ್ಟು ಕಷ್ಟ ಅನ್ನೋದನ್ನ ತುಂಬಾ ಸರಳವಾಗಿ, ಇಂಟ್ರೆಸ್ಟಿಂಗ್ ಆಗಿ ತೋರಿಸುವ ಪ್ರಯತ್ನ ಇದಾಗಿದೆ.
ಮಿಡಲ್ ಕ್ಲಾಸ್ ಫ್ಯಾಮಿಲಿಯ ಬೋಲ್ಡ್ ಹುಡುಗಿ ಪಾತ್ರದಲ್ಲಿ ಶೀತಲ್ ಶೆಟ್ಟಿ ಕಾಣಿಸಿಕೊಂಡಿದ್ದು, ಒಂದು ಕಡೆ ಕ್ಲಾಸ್ ಆಗಿ ಮತ್ತೊಂದೆಡೆ ಮಾಸ್ ಆಗಿ ಮಿಂಚಿದ್ದಾರೆ. ಶೀತಲ್ ಜೊತೆಯಾಗಿ ಹರಿಣಿ ಮತ್ತು ಕೃಷ್ಣ ಅಡಿಗ ಕೂಡ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ.

'ತರ್ಲೆ ನನ್ ಮಕ್ಳು' ಚಿತ್ರ ಮಾಡಿದ್ದ ರಾಕೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶಕ ರಾಕೇಶ್, ಶ್ರೀನಿವಾಸ್ ಹಾಗೂ ಮಂಜುನಾಥ್ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶೀತಲ್ ಶೆಟ್ಟಿ, ಕೃಷ್ಣ ಅಡಿಗ ಅಭಿನಯಿಸಿದ್ದಾರೆ. ಕೌಷಿಕ್ ಹರ್ಷ ಸಂಗೀತ ಸಂಯೋಜನೆ ಮಾಡಿದ್ದಾರೆ.


Click it and Unblock the Notifications











