For Quick Alerts
  ALLOW NOTIFICATIONS  
  For Daily Alerts

  ಹರ್ಷಿಕಾ ಪೂಣಚ್ಚ ಹಾರ್ಟ್ ಬೀಟ್; ಪಟ್ರೆ ಅಜಿತ್ ಬೌಲ್ಡ್

  |

  'ಶ್ರೀರಾಂಪುರಂ ಹುಡ್ಗ, ಮಲ್ಲೇಶ್ವರಂ ಹುಡ್ಗಿ' ಅಡಿಬರಹದ ಚಿತ್ರ 'ಬೀಟ್' ಬಿಡುಗಡೆಗೆ ಸಿದ್ಧವಾಗುತ್ತಿದೆ ಇತ್ತೀಚಿಗಷ್ಟೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಫಸ್ಟ್ ಕಾಪಿ ಕೈ ಸೇರುವುದನ್ನೇ ಕಾಯುತ್ತಿದೆ. ಅದು ಸಿಕ್ಕ ತಕ್ಷಣ ಸೆನ್ಸಾರ್ ಟೇಬಲ್ ಮೇಲೆ ಕುಳಿತು ನೋಡಿಸಿಕೊಂಡು ಚಿತ್ರ ಈಚೆ ಬಂದುಬಿಟ್ಟರೆ, ನಂತರ ಪ್ರೇಕ್ಷಕರ ಮುಂದೆ ಬೀಟ್ ಹೊಡೆಯಲಿದೆ.

  ಪಟ್ರೆ ಖ್ಯಾತಿಯ ಅಜಿತ್ ಈ ಚಿತ್ರಕ್ಕೆ ನಾಯಕರು. ನಾಯಕಿ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ. ಚಿತ್ರದ ನಿರ್ದೇಶಕರು ಘನಶ್ಯಾಮ್. ಇನ್ನು ಚಿತ್ರದ ಬೆನ್ನೆಲುಬು, ಅಂದರೆ ನಿರ್ಮಾಪಕರು ರಾಜು. ಇತ್ತೀಚಿಗೆ ಚಿತ್ರತಂಡ ಬೌರಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಆಡಿಯೋ ಬಿಡುಗಡೆ ಮುಗಿಸಿಕೊಂಡು ತೆರೆಗೆ ಬರಲು ರೆಡಿಯಾಗಿದೆ.

  ಪಟ್ರೆ ಅಜಿತ್ ಪ್ರಕಾರ, ಈ ಚಿತ್ರದ ಕಥೆ ಯುವಜನತೆಗೆ ಸಖತ್ ಇಷ್ಟವಾಗಲಿದ್ದು ಚಿತ್ರ ಯಶಸ್ವಿಯಾಗುವುದು ಖಂಡಿತ. ಅಷ್ಟೇ ಅಲ್ಲ, ಈ ಚಿತ್ರದ ಬಿಡುಗಡೆ ನಂತರ ಅವರನ್ನು 'ಬೀಟ್ ಅಜಿತ್' ಎಂದು ಕರೆಯುವ ದಿನಗಳು ಬರಲಿವೆ. 'ಬೀಟ್' ಅನ್ನುವುದನ್ನು ಇಂಗ್ಲಿಷ್ ನಲ್ಲಿನ ಇನ್ನೊಂದು ಶಬ್ಧ 'Beat' ಎಂದು ಅರ್ಥೈಸಿಕೊಂಡು ತಮಾಷೆ ತೆಗೆದುಕೊಳ್ಳಬೇಡಿ, ಅಜಿತ್ ಬೇಸರಿಸಿಕೊಂಡಾರು!

  ನಾಯಕಿ ಹರ್ಷಿಕಾ ಪೂಣಚ್ಚ ಅವರಿಗೂ ಬೀಟ್ ಚಿತ್ರದ ಅವರ ಪಾತ್ರ ತುಂಬಾ ಖುಷಿ ನೀಡಿದೆಯಂತೆ. ಅಷ್ಟೇ ಅಲ್ಲ, ಡಬ್ಬಿಂಗ್ ಸಮಯದಲ್ಲಿ ಅಲ್ಲಿದ್ದವರೊಬ್ಬರು ಹರ್ಷಿಕಾ ಪೂಣಚ್ಚ ಅವರ ಅಭಿನಯವನ್ನು ನೋಡಿ ಮೆಚ್ಚಿಕೊಂಡು ತಮ್ಮ ಮುಂದಿನ ಚಿತ್ರಕ್ಕೆ ಅವರನ್ನೇ ನಾಯಕಿಯನ್ನಾಗಿ ಆಯ್ಕೆಮಾಡಿಕೊಂಡಿದ್ದಾರೆ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಘನಶ್ಯಾಮ್.

  ಈ ಚಿತ್ರಕ್ಕೆ ಸಂಗೀತ ನೀಡಿರವವರು ಶಕ್ತಿಪ್ರಸಾದ್. ಆಡಿಯೋ ಬಿಡುಗಡೆ ಈಗಾಗಲೇ ಆಗಿರುವುದರಿಂದ ಈಗಾಗಲೇ ಅವರ ಸಂಗೀತದ ಶಕ್ತಿಯ ಪ್ರದರ್ಶನ ಆಗಿದೆ. ಹಾಡುಗಳು ಚೆನ್ನಾಗಿವೆ ಎಂಬ ಮತುಗಳು ಎಲ್ಲಕಡೆಯಿಂದ ಕೇಳಿಬರುತ್ತಿದೆ. ಸಿನಿಟೆಕ್ ಸೂರಿ ಛಾಯಾಗ್ರಹಣದಲ್ಲಿ ದೃಶ್ಯವೈಭವ ತುಂಬಿಕೊಂಡು ಬಂದಿರುವ ಹಾಡುಗಳು ಸೂಪರ್ ಆಗಿರುವುದಷ್ಟೇ ಅಲ್ಲ, ಚಿತ್ರಕ್ಕೆ ಪೂರಕವಾಗಿದೆ ಎಂಬ ಮಾಹಿತಿ ಈಗಾಗಲೇ ದೊರೆತಿದೆ.

  'ಪೊಲೀಸ್ ಬೀಟ್' ಎಲ್ಲರಿಗೂ ಗೊತ್ತಿದೆ. ಈ ಬೀಟ್ ಯಾವುದು ಎಂಬ ಜನರ ಕುತೂಹಲಕ್ಕೆ ಉತ್ತರ- ಇದು ನಾಯಕ ಪಟ್ರೆ ಅಜಿತ್ ಹಾರ್ಟ್ ಬೀಟ್ ಅಥವಾ ನಾಯಕಿ ಹರ್ಷಿಕಾ ಪೂಣಚ್ಚ ಹಾರ್ಟ್ ಬೀಟ್. ಅಲ್ಲಾರೀ, ಇಬ್ಬರದೂ ಇದ್ದಿರಬಹುದು ಅಲ್ವಾ ಎನ್ನುವ ಮತ್ತೊಂದು ಪ್ರಶ್ನೆಯೇ ಇದಕ್ಕೆ ಸದ್ಯಕ್ಕೆ ಉತ್ತರ. ಬಿಡಗಡೆ ನಂತರ ಸಿನಿಮಾ ನೋಡಿದರೆ ಸ್ಪಷ್ಟ ಉತ್ತರ ಸಿಗಲಿದೆ. (ಒನ್ ಇಂಡಿಯಾ ಕನ್ನಡ)

  English summary
  Kannada Actor Patre Ajith's more expected upcoming movie 'Beet' is waiting for its first copy. Harshika Poonachcha is Heroine for this and the upcoming director, Ghanashyam directs this. Raju produced this movie Beet. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X