»   » ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಮಾತನಾಡಿದ ಟಾಲಿವುಡ್ ನಟ ಪವನ್ ಕಲ್ಯಾಣ್

ಗೌರಿ ಲಂಕೇಶ್ ಹತ್ಯೆಯ ಬಗ್ಗೆ ಮಾತನಾಡಿದ ಟಾಲಿವುಡ್ ನಟ ಪವನ್ ಕಲ್ಯಾಣ್

Posted By:
Subscribe to Filmibeat Kannada

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನ ಅನೇಕ ಗಣ್ಯರು ಖಂಡಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆಯ ವಿರುದ್ಧ ನಟ ಕಮಲ್ ಹಾಸನ್ ಸೇರಿದಂತೆ ಅನೇಕ ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ತೆಲುಗು ನಟ ಹಾಗೂ ಜನ ಸೇನಾ ಪಕ್ಷದ ಮುಖ್ಯಸ್ಥರಾದ ಪವನ್ ಕಲ್ಯಾಣ್ ಕೂಡ ಈ ಹೀನ ಕೃತ್ಯವನ್ನು ಖಂಡಿಸಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ನಟ ಪವನ್ ಕಲ್ಯಾಣ್ ಸತತ 8 ಟ್ವೀಟ್ ಗಳನ್ನು ಮಾಡಿ ಗೌರಿ ಲಂಕೇಶ್ ಹತ್ಯೆಯ ವಿರುದ್ದ ಧ್ವನಿ ಎತ್ತಿದ್ದಾರೆ. ಮುಂದೆ ಓದಿ..

ಘೋರ ಅಪರಾಧ

ಗೌರಿ ಲಂಕೇಶ್ ಅವರ ಹತ್ಯೆ ವಿರುದ್ಧ ನಟ ಪವನ್ ಕಲ್ಯಾಣ್ ಸರಣಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಇದೊಂದು 'ಘೋರ ಅಪರಾಧ' ಅಂತ ಅವರು ಹೇಳಿದ್ದಾರೆ.

ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ

''ಒಂದು ಗುಂಡು... ಸಾಮಾಜಿಕ ಬದ್ಧತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ ಎತ್ತುವ ಒಬ್ಬ ಬದ್ಧ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ'' - ಪವನ್ ಕಲ್ಯಾಣ್, ನಟ

ವೈವಿಧ್ಯತೆಯ ದೇಶ

''ನಮ್ಮ ದೇಶ ಬಹು ಜನಾಂಗೀಯ, ಬಹು ಧಾರ್ಮಿಕ, ಬಹು ಭಾಷೆಯ, ಬಹು ಸಂಸೃತಿಯ ಶ್ರೇಷ್ಠ ಭೌಗೋಳಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ದೇಶ. ಇಲ್ಲಿ ರಾಜಕೀಯ ದೃಷ್ಟಿ ಕೋನಗಳನ್ನು ಎದುರಿಸಲು ನಾವು ಬದ್ಧವಾಗಿದ್ದೇವೆ'' - ಪವನ್ ಕಲ್ಯಾಣ್, ನಟ

ಗೌರಿ ಲಂಕೇಶ್ ಹತ್ಯೆಯ ಬಗ್ಗೆ ನಟ ಕಮಲ್ ಹಾಸನ್ ಹೇಳಿದ್ದೇನು?

ದೂಷಿಸುವುದು ಬೇಡ

''ಪೆನ್ ಹಿಡಿದುಕೊಳ್ಳುವ ಓರ್ವ ಹಿರಿಯ ಪತ್ರಕರ್ತರ ಮೇಲೆ ಹಲ್ಲೆ ನಡೆದಿದೆ. ಇದಕ್ಕೆ 'ಹಿಂದುತ್ವ' ಎಂಬ ಒಂದು ಶಕ್ತಿಗಳನ್ನು ದೂಷಿಸುವುದು ನನ್ನ ಪ್ರಕಾರ ಸರಿ ಎನಿಸುವುದಿಲ್ಲ. ಈ ಘೋರ ಅಪರಾಧದ ಹಿಂದಿನ ಅಪರಾಧಿಗಳಿಗೆ ಶಿಕ್ಷೆ ಆಗುತ್ತದೆ'' - ಪವನ್ ಕಲ್ಯಾಣ್, ನಟ

ಗೌರಿ ಲಂಕೇಶ್ ಹತ್ಯೆ: ಶೋಕ ಸಾಗರದಲ್ಲಿ ಮುಳುಗಿದ ಚಿತ್ರರಂಗ

ಕೋಟ್ಯಾಂತರ ಗೌರಿ ಹುಟ್ಟುತ್ತಾರೆ

''ನಾನು ಒಂದು ವಿಷಯ ಹೇಳುತ್ತೇನೆ. ಈ ರೀತಿಯ ಘಟನೆಯಿಂದ ಒಬ್ಬ ಗೌರಿಯನ್ನು ಕೊಂದಿರಬಹುದು. ಆದರೆ ಇದರಿಂದ ಕೋಟ್ಯಾಂತರ ಗೌರಿ ಹುಟ್ಟುತ್ತಾರೆ... ಗೌರಿ ಅವರ ಆತ್ಮಕ್ಕೆ ಶಾಂತಿ ಸಿಗಲಿ.'' - ಪವನ್ ಕಲ್ಯಾಣ್, ನಟ

English summary
Tollywood actor Pavan Kalyan spoke against the murder of Kannada journalist and writer, social activist Gauri Lankesh(55) in her Rajarajeshwari Nagar home, in Bengaluru on 5th September.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada