»   » ದರ್ಶನ್ ನಂತರ 'ಲಂಡನ್'ನಲ್ಲಿ ಮತ್ತೊಬ್ಬ ನಟನಿಗೆ ಪ್ರಶಸ್ತಿ

ದರ್ಶನ್ ನಂತರ 'ಲಂಡನ್'ನಲ್ಲಿ ಮತ್ತೊಬ್ಬ ನಟನಿಗೆ ಪ್ರಶಸ್ತಿ

Posted By:
Subscribe to Filmibeat Kannada
ಪವನ್ ಕಲ್ಯಾಣ್, ತೆಲುಗು ನಟನಿಗೆ ಹೌಸ್ ಆಫ್ ಲಾರ್ಡ್ಸ್, ಲಂಡನ್ ನಲ್ಲಿ ಪ್ರಶಸ್ತಿ | Filmibeat Kannada

ಕಳೆದ ತಿಂಗಳು ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಲಂಡನ್ ನಲ್ಲಿ 'ಗ್ಲೋಬಲ್ ಇಂಟೆಗ್ರಿಟಿ ಅವಾರ್ಡ್' ನೀಡಿ ಗೌರವಿಸಲಾಗಿತ್ತು.

ಅದಕ್ಕು ಮುಂಚೆ ಬಾಲಿವುಡ್ ನ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಐಶ್ವರ್ಯ ರೈ ಅವರು ಕೂಡ ಲಂಡನ್ ನಲ್ಲಿ ಪ್ರಶಸ್ತಿ ಪಡೆದಿದ್ದರು.

'ಲಂಡನ್'ನಲ್ಲಿ ನಟ ದರ್ಶನ್ ಗೆ ಮಹೋನ್ನತ ಪ್ರಶಸ್ತಿ.!

ಇದೀಗ, ಚಾಲೆಂಜಿಂಗ್ ಸ್ಟಾರ್ ನಂತರ ಮತ್ತೊಬ್ಬ ಸ್ಟಾರ್ ನಟ ಲಂಡನ್ ನಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಈ ನಟನ ಕೊಡುಗೆಯನ್ನ ಗೌರವಿಸಿ 'ಹೌಸ್ ಆಫ್ ಲಾರ್ಡ್ಸ್'ನಲ್ಲಿ ಸನ್ಮಾಸಿಲಾಗಿದೆ. ಯಾರು ಆ ನಟ? ಈ ನಟನಿಗೆ ಸಿಕ್ಕ ಪ್ರಶಸ್ತಿ ಯಾವುದು? ಎಂದು ತಿಳಿಯಲು ಮುಂದೆ ಓದಿ....

ಪವರ್ ಸ್ಟಾರ್ ಗೆ ಲಂಡನ್ ನಲ್ಲಿ ಪ್ರಶಸ್ತಿ

ತೆಲುಗಿನ ಖ್ಯಾತ ನಟ ಹಾಗೂ ಜನಸೇನಾ ಪಕ್ಷದ ಸಂಸ್ಥಾಪಕ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರಿಗೆ ಇತ್ತೀಚೆಗಷ್ಟೇ ಲಂಡನ್ ಪಾರ್ಲಿಮೆಂಟ್ ನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪವನ್ ಗೆ ಸಿಕ್ಕಿದ್ದು ಯಾವ ಪ್ರಶಸ್ತಿ?

ಅಂದ್ಹಾಗೆ, ಪವನ್ ಕಲ್ಯಾಣ್ ಸಿಕ್ಕಿರುವ ಪ್ರಶಸ್ತಿ ಐಇಬಿಎಫ್ ಎಕ್ಸಲೆನ್ಸ್ ಅವಾರ್ಡ್ 2017. (IEBF - Indo European Business Forum - ಇಂಡೋ ಯೂರೋಪನ್ ಬಿಸ್ ನೆಸ್ ಫೋರಂ) 'ಗ್ಲೋಬಲ್ ಬಿಸ್ ನೆಸ್' ಸಮಿತಿ ಈ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ.

ಪ್ರಶಸ್ತಿ ನೀಡಿದ್ದು ಯಾಕೆ?

ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದವರನ್ನ ಗುರುತಿಸಿ ಗೌರವಿಸುವ IEBF ಸಂಸ್ಥೆ ಈ ವರ್ಷ ಪವನ್ ಕಲ್ಯಾಣ್ ಅವರನ್ನ ಆಯ್ಕೆ ಮಾಡಿಕೊಂಡಿದೆ. ನವೆಂಬರ್ 17 ರಂದು ಲಂಡನ್ ಪಾರ್ಲಿಮೆಂಟ್ ನಲ್ಲಿ 'ಐಇಬಿಎಫ್ ಎಕ್ಸಲೆನ್ಸ್ ಅವಾರ್ಡ್' ನೀಡಿ ಗೌರವಿಸಿದೆ.

ತೆಲುಗಿನ ಮೊದಲ ನಟ

ಅಂದ್ಹಾಗೆ, ಈ ಪ್ರಶಸ್ತಿ ಪಡೆದು ತೆಲುಗಿನ ಮೊದಲ ನಟ ಹಾಗೂ ಮೊದಲ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪವನ್ ಕಲ್ಯಾಣ್ ಪಾತ್ರರಾಗಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

'ಲಂಡನ್'ನಲ್ಲಿ ದರ್ಶನ್ ಪಡೆದ ಪ್ರಶಸ್ತಿ ಬಗ್ಗೆ ಇದ್ದ ಗೊಂದಲಕ್ಕೆ ಉತ್ತರ.!

ದರ್ಶನ್ ಪ್ರಶಸ್ತಿಗೂ ಪವನ್ ಗೂ ಪ್ರಶಸ್ತಿಗೂ ಸಂಬಂಧವಿಲ್ಲ

ಅಂದ್ಹಾಗೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನೀಡಿರುವ 'ಗ್ಲೋಬಲ್ ಇಂಟೆಗ್ರಿಟಿ ಅವಾರ್ಡ್'ಗೂ ಈಗ ಪವನ್ ಕಲ್ಯಾಣ್ ಕೊಟ್ಟಿರುವ 'ಐಇಬಿಎಫ್ ಎಕ್ಸಲೆನ್ಸ್ ಅವಾರ್ಡ್'ಗೂ ಸಂಬಂಧವಿಲ್ಲ. ಆದ್ರೆ, ಲಂಡನ್ ಪಾರ್ಲಿಮೆಂಟ್ ನಲ್ಲಿ ಈ ನಟರಿಗೆ ಗೌರವಿಸಿರುವುದು ಖುಷಿಯ ವಿಚಾರ.

'ಲಂಡನ್'ನಲ್ಲಿ ದಾಸನಿಗೆ ಪ್ರಶಸ್ತಿ: ಗೊಂದಲದ ಬಗ್ಗೆ ದರ್ಶನ್ ಮ್ಯಾನೇಜರ್ ಸ್ಪಷ್ಟನೆ.!

English summary
Actor and Janasena Party chief Pawan Kalyan received IEBF Excellence Award at House of Lords. ತೆಲುಗು ನಟ, ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರಿಗೆ ಲಂಡನ್ ನಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada