»   » ಗುಡ್ ನ್ಯೂಸ್: ಇನ್ನು ಮುಂದೆ 'NETFLIX'ನಲ್ಲಿ 'ಯು-ಟರ್ನ್' ಕಲರವ

ಗುಡ್ ನ್ಯೂಸ್: ಇನ್ನು ಮುಂದೆ 'NETFLIX'ನಲ್ಲಿ 'ಯು-ಟರ್ನ್' ಕಲರವ

Posted By:
Subscribe to Filmibeat Kannada

ಪ್ರೇಕ್ಷಕರಿಗೆ 'ಲೂಸಿಯಾ' ಎಂಬ ಮಾಯೆ ಮಾಡಿ, ಮತ್ತೆ 'ಯು-ಟರ್ನ್' ಮೂಲಕ ಭದ್ರವಾಗಿ ಗಾಂಧಿನಗರದಲ್ಲಿ ನೆಲೆನಿಂತ ನಿರ್ದೇಶಕ ಪವನ್ ಕುಮಾರ್ ಅವರ ವಿಭಿನ್ನ ಪ್ರಯತ್ನಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದರು.

ನಮ್ಮ ಸುತ್ತ-ಮುತ್ತಲಿರುವ ಚಿಕ್ಕ-ಚಿಕ್ಕ ವಿಷಯಗಳನ್ನು ಇಟ್ಟುಕೊಂಡು, ಅದನ್ನೇ ಒಂದು ಅದ್ಭುತ ಸಿನಿಮಾವನ್ನಾಗಿ ಮಾಡಿ ಎಲ್ಲರಿಂದ ಭೇಷ್ ಎನಿಸಿಕೊಂಡ ಪವನ್ ಕುಮಾರ್ ಅವರ 'ಯು-ಟರ್ನ್' ಸಿನಿಮಾದ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಮೂಡಿದೆ.[ಇದೆಂತಹ ವಿಪರ್ಯಾಸ: ಕನ್ನಡ ಚಿತ್ರಗಳಿಗೆ ರಾಜಧಾನಿಯಲ್ಲೇ ಚಿತ್ರಮಂದಿರ ಇಲ್ಲ]


Pawan Kumar's 'U-Turn' first Kannada film to go on NETFLIX

ರಹಸ್ಯ ಕಥಾನಕ ಹೊಂದಿರುವ 'ಯು-ಟರ್ನ್' ಸಿನಿಮಾ ಇದೀಗ ನೆಟ್ ಫ್ಲಿಕ್ಸ್ ನಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಲಿರುವ ಮೊಟ್ಟ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.


ಇನ್ನೇನು ಸದ್ಯದಲ್ಲೇ ನೆಟ್ ಫ್ಲಿಕ್ಸ್ ಮೂಲಕ 'ಯು-ಟರ್ನ್' ಚಿತ್ರವನ್ನು ವೀಕ್ಷಿಸಬಹುದು ಎಂಬ ವಿಚಾರವನ್ನು ಖುದ್ದು ಪವನ್ ಕುಮಾರ್ ಅವರೇ ತಮ್ಮ ಫೇಸ್ ಬುಕ್ಕಿನಲ್ಲಿ ಕೂಡ ಹಂಚಿಕೊಂಡಿದ್ದಾರೆ.[ಯು ಟರ್ನ್: ಸಂದೇಶ ಸಾರುವ ತಿರುವಿನಲ್ಲಿ ಥ್ರಿಲ್ಲಿಂಗ್ ಪ್ರಯಾಣ]ಈಗಾಗಲೇ ನೆಟ್ ಫ್ಲಿಕ್ಸ್ ಗೆ ಸುಮಾರು 8.3 ಕೋಟಿ ಜನ ಚಂದಾದಾರಾಗಿದ್ದು, ಭರ್ತಿ 27 ಭಾಷೆಯಲ್ಲಿ ಸಬ್ ಟೈಟಲ್ ಹೊಂದಿರುವ 'ಯು-ಟರ್ನ್' ಚಿತ್ರ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ನೆಟ್ ಫ್ಲಿಕ್ಸ್ ನಲ್ಲಿ ಪ್ರದರ್ಶನ ಕಾಣಲಿದೆ. ಒಟ್ನಲ್ಲಿ ಸುಮಾರು 70 ಮಿಲಿಯನ್ ಮನೆಗಳಲ್ಲಿ 'ಯು-ಟರ್ನ್' ವೀಕ್ಷಣೆಗೆ ಲಭ್ಯವಾಗಲಿದೆ.


ನೆಟ್ ಫ್ಲಿಕ್ಸ್ ಅನ್ನೋದು ಸಿನಿಮಾ ನಿರ್ಮಾಣ ಮಾಡುವವರಿಗೆ ಹೊಸ ಮಾರ್ಗವಾಗಿದ್ದು, ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್ ಗಿಂತ ಚಿತ್ರದ ಗುಣಮಟ್ಟ ಹಾಗೂ ಅಲ್ಲಿ ಅವರದ್ದೇ ಆದ ಆಯ್ಕೆ ಇರುತ್ತದೆ. ಅದ್ರಲ್ಲೂ ವಿಶೇಷವಾಗಿ 'ಯು-ಟರ್ನ್' ಸಿನಿಮಾ ನೋಡಿದ ಕೂಡಲೇ ನೆಟ್ ಫ್ಲಿಕ್ಸ್ ನವರು ಆಯ್ಕೆ ಮಾಡಿಕೊಂಡಿದ್ದು, ವಿಶೇಷ ಎಂದು ನಿರ್ದೇಶಕ ಪವನ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.[ಟ್ವಿಟ್ಟರ್ ನಲ್ಲಿ ಸುದೀಪ್ ಮತ್ತು ಪವನ್ ಪ್ರಶ್ನೋತ್ತರ ಕಲರವ]


Pawan Kumar's 'U-Turn' first Kannada film to go on NETFLIX

ಅಂತೂ ಕನ್ನಡ ಚಿತ್ರರಂಗಕ್ಕೆ ಅದೃಷ್ಟ ಖುಲಾಯಿಸಿರುವ ಪರಿಣಾಮ, ಎಲ್ಲಿ ಹೋದರೂ ಒಂದಲ್ಲಾ ಒಂದು ವಿಚಾರದಲ್ಲಿ ಕನ್ನಡ ಚಿತ್ರಗಳು ಸಖತ್ ಸದ್ದು ಮಾಡುತ್ತಿವೆ ಅನ್ನೋದು ಕನ್ನಡಿಗರಿಗೆ ಸಂತಸದ ಸಂಗತಿ.


Pawan Kumar's 'U-Turn' first Kannada film to go on NETFLIX

ನೆಟ್ ಫ್ಲಿಕ್ಸ್ ಎಂದರೇನು?


ಇದೊಂದು ಅಮೆರಿಕನ್ ಕಂಪನಿಯಾಗಿದ್ದು, ಈ ಕಂಪೆನಿಯು ತಮ್ಮ ಸೈಟ್ ಗೆ ಚಂದಾದಾರರಾದವರಿಗೆ ಯಾವುದೇ ಭಾಷೆಯ ಹೊಸ-ಹೊಸ ಸಿನಿಮಾಗಳ ವಿಡಿಯೋವನ್ನು ಕಲ್ಪಿಸುತ್ತಾರೆ. ಬರೀ ಸಿನಿಮಾ ಮಾತ್ರ ಅಲ್ಲದೇ ಟಿವಿ ಸೀರಿಯಲ್ ಕೂಡ ಒದಗಿಸುತ್ತಾರೆ. ಈ ವಿಡಿಯೋಗಳನ್ನು ಚಂದಾದಾರರು ಮೊಬೈಲ್, ಟಿವಿ, ಲ್ಯಾಪ್ ಟಾಪ್, ಟ್ಯಾಬ್, ಕಂಪ್ಯೂಟರ್ ಯಾವುದರಲ್ಲಿ ಬೇಕಾದ್ರೂ ನೋಡಬಹುದು.

English summary
Kannada Movie 'U-Turn' first Kannada film to go on NETFLIX. Coming September Kannada Movie 'U TURN' will be available in 70 million homes across the world. Currently the film is being subtitled in 27 international languages.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada