For Quick Alerts
  ALLOW NOTIFICATIONS  
  For Daily Alerts

  ಆಶಿಕಾ ಅವರನ್ನು ಎಳೆದಾಡಿದ ವ್ಯಕ್ತಿ: ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ಪವನ್ ಒಡೆಯರ್

  |

  ಕಳೆದ ಎರಡ್ಮೂರು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ನಟಿ ಆಶಿಕಾ ರಂಗನಾಥ್ ಅವರನ್ನು ವ್ಯಕ್ತಿಯೊಬ್ಬ ಎಳೆದಾಡಿರುವುದು ಕಂಡು ಬಂದಿದೆ.

  ಈ ವಿಡಿಯೋ ನೋಡಿದ ಜನರು ಇದು ಶೂಟಿಂಗ್ ಅಥವಾ ಕಾರ್ಯಕ್ರಮದಲ್ಲಿ ಎಲ್ಲಾದರೂ ಈ ರೀತಿ ಆಗಿದ್ಯಾ ಎಂಬ ಗೊಂದಲಕ್ಕೆ ಉಂಟಾಗಿದ್ದರು. ಇನ್ನು ಕೆಲವರು ಆ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಗುರುತಿಸಿ ಬೆದರಿಕೆ ಹಾಕುತ್ತಿದ್ದಾರಂತೆ.

  'ರೇಮೊ'ನಲ್ಲಿ ಶರತ್ ಕುಮಾರ್ ಅವರದು ಪ್ರಧಾನ ಪಾತ್ರ: ಪವನ್ ಒಡೆಯರ್'ರೇಮೊ'ನಲ್ಲಿ ಶರತ್ ಕುಮಾರ್ ಅವರದು ಪ್ರಧಾನ ಪಾತ್ರ: ಪವನ್ ಒಡೆಯರ್

  ಇದೀಗ, ಈ ವಿಡಿಯೋ ಕುರಿತು ನಿರ್ದೇಶಕ ಪವನ್ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಒಡೆಯರ್ ''ಇದು ರೆಮೋ ಸಿನಿಮಾ ಶೂಟಿಂಗ್, ತಪ್ಪಾಗಿ ಪ್ರಚಾರ ಆಗುತ್ತಿದೆ. ದಯವಿಟ್ಟು ತಪ್ಪು ಪ್ರಚಾರ ಮಾಡಬೇಡಿ'' ಎಂದು ವಿಡಿಯೋ ಬಗ್ಗೆ ವಿವರಿಸಿದ್ದಾರೆ.

  ಅನಂತ್ ನಾಗ್, ಶಿವಣ್ಣರಿಗೆ ಪದ್ಮ ಪ್ರಶಸ್ತಿ ಯಾಕಿಲ್ಲ?, ನಿರ್ದೇಶಕರ ಪ್ರಶ್ನೆಅನಂತ್ ನಾಗ್, ಶಿವಣ್ಣರಿಗೆ ಪದ್ಮ ಪ್ರಶಸ್ತಿ ಯಾಕಿಲ್ಲ?, ನಿರ್ದೇಶಕರ ಪ್ರಶ್ನೆ

  ಈ ಕುರಿತು ನಟಿ ಆಶಿಕಾ ರಂಗನಾಥ್ ಕೂಡ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ರೆಮೋ ಚಿತ್ರದಲ್ಲಿ ಆಶಿಕಾ ಮತ್ತು ಇಶಾನ್ ನಟಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ತಮಿಳು ನಟ ಶರತ್ ಕುಮಾರ್ ಕಾಣಿಸಿಕೊಂಡಿದ್ದಾರೆ.

  'ರೇಮೊ' ಟೈಟಲ್ ಡಿಸೈನ್ : ಇದು ರೇವಂತ್ - ಮೋಹನಾ ಲವ್ ಸ್ಟೋರಿ'ರೇಮೊ' ಟೈಟಲ್ ಡಿಸೈನ್ : ಇದು ರೇವಂತ್ - ಮೋಹನಾ ಲವ್ ಸ್ಟೋರಿ

  ರೆಮೋ ಶೂಟಿಂಗ್ ನಡೆಯುತ್ತಿದ್ದ ವೇಳೆ ಜೂನಿಯರ್ ಕಲಾವಿದರೊಬ್ಬರು ಈ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ವೈರಲ್ ಮಾಡಿದ್ದಾರೆ. ಇದು ತಪ್ಪಾಗಿ ಪ್ರಚಾರ ಆಗಿದೆ. ಇದು ನಿರ್ದೇಶಕ ಹಾಗೂ ಚಿತ್ರತಂಡದ ಗಮನಕ್ಕೆ ಬಂದಿದ್ದು, ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

  ಅಂದ್ಹಾಗೆ, 'ಗೂಗ್ಲಿ' ಸಿನಿಮಾದ ಬಳಿಕ ಪವನ್ ಒಡೆಯರ್ ಪಕ್ಕಾ ಲವ್ ಸ್ಟೋರಿ ಸಿನಿಮಾ ಮಾಡ್ತಿದ್ದು, ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ನಿರೀಕ್ಷೆ ಹೆಚ್ಚಿದೆ. ರೆಮೋ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ರಿಲೀಸ್ ಗೆ ಸಜ್ಜಾಗುತ್ತಿದೆ.

  English summary
  Director Pawan Wadeyar has clarified about raymo movie shooting video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X