»   » ಒಡೆಯರ್ 'ಜೆಸ್ಸಿ'ಗೆ 'ವಿನ್ನೈತಾಂಡಿ ವರುವಾಯ' ಸ್ಫೂರ್ತಿ ಕೊಟ್ಟಿತೆ?

ಒಡೆಯರ್ 'ಜೆಸ್ಸಿ'ಗೆ 'ವಿನ್ನೈತಾಂಡಿ ವರುವಾಯ' ಸ್ಫೂರ್ತಿ ಕೊಟ್ಟಿತೆ?

Written By:
Subscribe to Filmibeat Kannada

'ಗೋವಿಂದಾಯ ನಮಃ', 'ರಣವಿಕ್ರಮ', 'ಗೂಗ್ಲಿ' ಮುಂತಾದ ರೊಮ್ಯಾಂಟಿಕ್ ಕಮ್ ಕಮರ್ಷಿಯಲ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಪವನ್ ಒಡೆಯರ್ ಅವರು ತಮ್ಮ 4ನೇ ಸಿನಿಮಾ 'ಜೆಸ್ಸಿ' ಯಲ್ಲಿ ಮಾತ್ರ ಧರ್ಮ ಹಾಗೂ ಪ್ರೀತಿಯ ಹಿಂದೆ ಬಿದ್ದಿದ್ದಾರೆ.

'ಜೆಸ್ಸಿ' ಸಿನಿಮಾ ಒಂದು ಸುಂದರ ಅಚ್ಚರಿಗೆ ಕಾರಣವಾಗಲಿದೆ. ಹಾಗು ನಮ್ಮ ಜೀವನ ಶೈಲಿ ಬದಲಾದರೂ ನಮ್ಮ ಸಾಂಪ್ರದಾಯಿಕ ಮನಸ್ಸುಗಳು ಬದಲಾಗದೇ ಇರುವುದನ್ನು ಸಿನಿಮಾ ಚರ್ಚಿಸುತ್ತದೆ. ಮತ ಹಾಗೂ ಧರ್ಮದಲ್ಲಿ ನಂಬಿಕೆ ಇಟ್ಟು, ಪ್ರೀತಿಯಲ್ಲಿ ಬಿದ್ದು ಕೆರಳುವ ಹಲವಾರು ಭಾವನೆಗಳನ್ನು ಸಿನಿಮಾ ಹಿಡಿದಿಡಲಿದೆ' ಎಂದು ಪವನ್ ಒಡೆಯರ್ ಹೇಳುತ್ತಾರೆ.['ಜೆಸ್ಸಿ' ನಮ್ಮಲ್ಲಿ ಮಾತ್ರವಲ್ಲ, ತಮಿಳು-ತೆಲುಗಲ್ಲೂ ಕಮಾಲ್ ಮಾಡ್ತಾಳೆ]


Pawan Wadeyar's 'Jessie' Movie on Religion and love

ಅಂದಹಾಗೆ ಪವನ್ ಅವರಿಗೆ 'ಜೆಸ್ಸಿ' ಸಿನಿಮಾದ ಕಥೆ ಬರೆಯಲು ಸಿಂಬು ಹಾಗೂ ತ್ರಿಷಾ ಅವರು ಕಾಣಿಸಿಕೊಂಡಿದ್ದ ನಿರ್ದೇಶಕ ಗೌತಮ್ ಮೆನನ್ ಅವರ ತಮಿಳಿನ ರೊಮ್ಯಾಂಟಿಕ್ ಚಿತ್ರ 'ವಿನ್ನೈತಾಂಡಿ ವರುವಾಯ' ಸಿನಿಮಾ ಸ್ಫೂರ್ತಿ ಎಂದು 'ಗೂಗ್ಲಿ' ನಿರ್ದೇಶಕ ಪವನ್ ನುಡಿಯುತ್ತಾರೆ.


Pawan Wadeyar's 'Jessie' Movie on Religion and love

'ಗೋವಿಂದಾಯ ನಮಃ' ಚಿತ್ರೀಕರಣದ ಸಮಯದಲ್ಲಿ ಒಂದು ಚರ್ಚ್ ಬಳಿಯಿಂದ ಸಾಗಿದೆ. ಅಲ್ಲಿ ಜೀಸಸ್ ನ ಸುಂದರ ವಿಗ್ರಹ ನೋಡಿದೆ. ಅದೇ ಸಂದರ್ಭದಲ್ಲಿ ತಮಿಳು ಚಿತ್ರ 'ವಿನ್ನೈತಾಂಡಿ ವರುವಾಯ' ಬಿಡುಗಡೆ ಆಗಿತ್ತು. ಆ ವಿಗ್ರಹ ಮತ್ತು ಆ ತಮಿಳು ಚಿತ್ರದ ಕಥಾಹಂದರ ನನಗೆ 'ಜೆಸ್ಸಿ' ಎಂಬ ವಿಶಿಷ್ಟ ಸ್ಕ್ರಿಪ್ಟ್ ಬರೆಯಲು ಸಹಾಯವಾಯಿತು' ಎಂದು ಪವನ್ ಹೇಳಿಕೊಂಡಿದ್ದಾರೆ.[ಪ್ರೇಮಿಗಳ ದಿನಕ್ಕೆ ಪುನೀತ್ ಅವರಿಂದ ವಿಶೇಷ ಉಡುಗೊರೆ]


Pawan Wadeyar's 'Jessie' Movie on Religion and love

ಸಿನಿಮಾದ ಪಾತ್ರವರ್ಗ ಕೂಡ ತುಂಬಾ ಚೆನ್ನಾಗಿದ್ದು, ಕಥೆಗೆ ಪೂರಕವಾಗಿದೆ, ಧನಂಜಯ್, ಪಾರುಲ್ ಯಾದವ್ ಮತ್ತು ರಘು ಮುಖರ್ಜಿ ಅವರು ನನ್ನ ಕನಸಿನ ತಂಡ. ಇವರ ಕೆಮಿಸ್ಟ್ರಿ ಕೂಡ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಎನ್ನುತ್ತಾರೆ ಪವನ್.


Pawan Wadeyar's 'Jessie' Movie on Religion and love

ಇನ್ನು ಊಟಿ, ಚಿಕ್ಕಮಗಳೂರು ಮತ್ತು ಮೂಡಿಗೆರೆ ಸುತ್ತಮುತ್ತಲ ಹಸಿರು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ನಂತರ ಕಥೆ ಬೆಂಗಳೂರಿಗೆ ಬದಲಾಗುತ್ತದೆ. ಚಿತ್ರದ ಹಾಡುಗಳನ್ನು ಸಿಗಂದೂರಿನ ಹಿನ್ನೀರು ಮತ್ತು ಸಾಥೋಡಿ ಜಲಪಾತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.[ಹೆಲ್ಮೆಟ್ ಧರಿಸುವ ಎಲ್ಲರೂ ಈ ಹಾಡನ್ನ ಕೇಳಲೇಬೇಕು.!]


Pawan Wadeyar's 'Jessie' Movie on Religion and love

ಈಗಾಗಲೇ ಚಿತ್ರದ ಕೆಲಸಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಸೆನ್ಸಾರ್ ಮಂಡಳಿಗೆ ಹೋಗಲು ತಯಾರಾಗಿ ನಿಂತಿದೆ. ಮಾರ್ಚ್ 24 ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ದೇಶಕ ಪವನ್ ಒಡೆಯರ್ ಯೋಜನೆ ಹಾಕಿಕೊಂಡಿದ್ದಾರೆ.


ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಮ್ಯೂಸಿಕ್ ಕಂಪೋಸ್ ಮಾಡಿರುವ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದ್ದು, ಪಕ್ಕಾ ರೋಮ್ಯಾಂಟಿಕ್ ಲವ್ ಸ್ಟೋರಿಗೆ ಪ್ರೇಕ್ಷಕರು ಕುತೂಹಲದಿಂದ ಕಾದಿದ್ದಾರೆ.

English summary
Director Pawan Wadeyar's Kannada Movie 'Jessie' Seems to have found love in religion. Kannada Actress Parul Yadav, Kannada Actor Dhananjay in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada