For Quick Alerts
  ALLOW NOTIFICATIONS  
  For Daily Alerts

  'ಮುಕುಂದ ಮುರಾರಿ'ಯಿಂದ 'ನಟರಾಜ'ನಿಗೆ ಕಷ್ಟ-ಕಷ್ಟ

  By Suneetha
  |

  ಕಾಮಿಡಿ ಕಿಂಗ್ ಶರಣ್ ಮತ್ತು ಮಯೂರಿ ನಟನೆಯ 'ನಟರಾಜ ಸರ್ವಿಸ್' ಟ್ರೈಲರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿದೆ. ಚಿತ್ರದ ಹಾಡುಗಳು ಕೂಡ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.

  ಟ್ರೈಲರ್-ಹಾಡುಗಳಲ್ಲಿ ಪವನ್ ಒಡೆಯರ್ ಮ್ಯಾಜಿಕ್ ನೋಡಿದ ಅಭಿಮಾನಿಗಳು ಸಿನಿಮಾ ಯಾವಾಗ ಬರುತ್ತೆ ಅಂತ ಕಾತರದಿಂದ ಕಾಯುತ್ತಾ ಕುಳಿತಿದ್ದರು. ಅದಕ್ಕೆ ತಕ್ಕಂತೆ ಪವನ್ ಅವರು ಕೂಡ, ಅಕ್ಟೋಬರ್ 20ಕ್ಕೆ ಸಿನಿಮಾ ಬಿಡುಗಡೆ ಅಂತ ಘೋಷಣೆ ಮಾಡಿದರು.

  ಇನ್ನೇನು ಇದೇ ವಾರ ಸಿನಿಮಾ ತೆರೆಗೆ ಬರುತ್ತೆ ಅನ್ನುವಷ್ಟರಲ್ಲಿ, ಖುದ್ದು ಪವನ್ ಒಡೆಯರ್ ಅವರೇ ಸಿನಿಮಾ ಬಿಡುಗಡೆ ಕಾರ್ಯಕ್ರಮ ಮುಂದಕ್ಕೆ ಹೋಗಿದೆ ಎಂದಿದ್ದಾರೆ.[ಸೆನ್ಸಾರ್ ಪಾಸ್‌ ಆದ ನಟರಾಜ' ಅಕ್ಟೋಬರ್‌ 20ಕ್ಕೆ ಬರ್ತಾವ್ನೆ !]

  ಕಾರಣ ಕೇಳಿದರೆ ಥಿಯೇಟರ್ ಸಮಸ್ಯೆ. ಅಷ್ಟಕ್ಕೂ ಥಿಯೇಟರ್ ಸಮಸ್ಯೆ ಎದುರಾಗಲು ಕಾರಣ ಬಿಗ್ ಸ್ಟಾರ್ ಗಳ ಸಿನಿಮಾ ಇದೇ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗಿದ್ದು. ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮುಂದೆ ಓದಿ...

  ನವೆಂಬರ್ ತಿಂಗಳಿಗೆ ಪೋಸ್ಟ್ ಪೋನ್

  ನವೆಂಬರ್ ತಿಂಗಳಿಗೆ ಪೋಸ್ಟ್ ಪೋನ್

  ಅಕ್ಟೋಬರ್ 21ರಂದು ತೆರೆ ಕಾಣಬೇಕಿದ್ದ 'ನಟರಾಜ ಸರ್ವಿಸ್' ಥಿಯೇಟರ್ ಸಮಸ್ಯೆಯಿಂದ ನವೆಂಬರ್ ತಿಂಗಳಿಗೆ ಪೋಸ್ಟ್ ಪೋನ್ ಆಗಿದೆ. ಬಹುಶಃ ನವೆಂವರ್ ಎರಡನೇ ವಾರದಲ್ಲಿ ಈ ಸಿನಿಮಾ ತೆರೆಗೆ ಅಪ್ಪಳಿಸಬಹುದು.[ಸ್ಟಾರ್ ಗಳಾಗಿದ್ದರೂ ಗಾಡಿ ಬಿಟ್ಟು ಕಾಲ್ನಡಿಗೆಯಲ್ಲಿ ಸಾಗಿದ 'ಆ' ಘಟನೆಗಳಿವು.!]

  'ನಾಗರಹಾವು' ಯಶಸ್ವಿ ಪ್ರದರ್ಶನ

  'ನಾಗರಹಾವು' ಯಶಸ್ವಿ ಪ್ರದರ್ಶನ

  ಕಳೆದ ವಾರ ತೆರೆಕಂಡ ಬಿಗ್ ಬಜೆಟ್ ಸಿನಿಮಾ 'ನಾಗರಹಾವು' ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದ್ದರಿಂದ ಹೆಚ್ಚಿನ ಚಿತ್ರಮಂದಿರಗಳಲ್ಲಿ 'ನಾಗರಹಾವು' ಪ್ರದರ್ಶನಗೊಳ್ಳುತ್ತಿರುವುದರಿಂದ ಅಲ್ಲಿಗೆ 'ನಟರಾಜ' ಸರ್ವಿಸ್ ರಿಪ್ಲೇಸ್ ಮಾಡುವಂತಿಲ್ಲ.

  ಮುಂದಿನ ಶುಕ್ರವಾರ 2 ಬಿಗ್ ಬಜೆಟ್ ಸಿನಿಮಾಗಳು

  ಮುಂದಿನ ಶುಕ್ರವಾರ 2 ಬಿಗ್ ಬಜೆಟ್ ಸಿನಿಮಾಗಳು

  ಇನ್ನು ಮುಂದಿನ ವಾರ ಎರಡು ಬಿಗ್ ಬಜೆಟ್ ಮತ್ತು ಸ್ಟಾರ್ ನಟರ ಸಿನಿಮಾಗಳಾದ 'ಮುಕುಂದ ಮುರಾರಿ' ಮತ್ತು ಯಶ್-ರಾಧಿಕಾ ಜೋಡಿಯ 'ಸಂತು Straight Forward' ತೆರೆ ಕಾಣಲು ಸಜ್ಜಾಗಿದೆ. ಆದ್ದರಿಂದ ಈ ವಾರ ತರಾ-ತುರಿಯಲ್ಲಿ 'ನಟರಾಜ ಸರ್ವಿಸ್' ಬಿಡುಗಡೆ ಮಾಡಿದರೆ, ಮುಂದಿನ ವಾರ ತೆಗೆಯಬೇಕಾಗುತ್ತದೆ. ಹಾಗಾಗಿ ಅರ್ಜೆಂಟ್ ನಲ್ಲಿ ಯಾವುದು ಬೇಡ, ಸಾವಕಾಶವಾಗಿ ಬಿಡುಗಡೆ ಮಾಡಲು ಪವನ್ ಒಡೆಯರ್ ನಿರ್ಧರಿಸಿದ್ದಾರೆ.

  ಖಚಿತಪಡಿಸಿದ ನಿರ್ದೇಶಕರು

  ಖಚಿತಪಡಿಸಿದ ನಿರ್ದೇಶಕರು

  ಬಹು ನಿರೀಕ್ಷಿತ 'ನಟರಾಜ ಸರ್ವಿಸ್' ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿಲ್ಲ ಅಂತ ಖುದ್ದು ನಿರ್ದೇಶಕ ಪವನ್ ಒಡೆಯರ್ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಮೇನಕ ಚಿತ್ರಮಂದಿರದಲ್ಲಿ 'ನಟರಾಜ ಸರ್ವಿಸ್' ಬಿಡುಗಡೆ ಮಾಡಲು ಪವನ್ ಪ್ಲ್ಯಾನ್ ಮಾಡಿದ್ದರು. ಆದ್ರೆ ಅದೇ ಚಿತ್ರಮಂದಿರದಲ್ಲಿ ಮುಂದಿನ ವಾರ 'ಮುಕುಂದ ಮುರಾರಿ' ತೆರೆ ಕಾಣಲಿದೆ.

  English summary
  Actor Sharan and Actress Mayuri starrer Kannada Movie 'Nataraja Service' directed by Pawan Wadeyar has been postponed. Wadeyar has announced that there is a shortage of theatres and the film cannot be released this month as announced earlier due to this.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X