»   » 'ಜೆಸ್ಸಿ' ಮುಗೀತು, 'ನಟರಾಜ ಸರ್ವಿಸ್' ಸ್ಟೇಷನ್ ಓಪನ್ ಆಯ್ತು!

'ಜೆಸ್ಸಿ' ಮುಗೀತು, 'ನಟರಾಜ ಸರ್ವಿಸ್' ಸ್ಟೇಷನ್ ಓಪನ್ ಆಯ್ತು!

Posted By:
Subscribe to Filmibeat Kannada

'ಗ್ಲೂಗಿ' ಸಿನಿಮಾ ಖ್ಯಾತಿಯ ಹಿಟ್ ನಿರ್ದೇಶಕ ಪವನ್ ಒಡೆಯರ್ ಅವರ ರೊಮ್ಯಾಂಟಿಕ್ ಸಿನಿಮಾ 'ಜೆಸ್ಸಿ' ಬಹುತೇಕ ಕೊನೆಯ ಹಂತದಲ್ಲಿರುವಾಗಲೇ, ತಮ್ಮ ಮುಂಬರುವ ಹೊಸ ಚಿತ್ರ 'ನಟರಾಜ ಸರ್ವಿಸ್' ಕಡೆ ಗಮನ ಹರಿಸಿದ್ದಾರೆ.

ಕಾಮಿಡಿ ಕಿಂಗ್ ಶರಣ್ ಹಾಗೂ 'ಅಶ್ವಿನಿ ನಕ್ಷತ್ರ' ದಾರಾವಾಹಿ ಖ್ಯಾತಿಯ ನಟಿ ಮಯೂರಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿರುವ 'ನಟರಾಜ ಸರ್ವಿಸ್' ಚಿತ್ರ ಹಬ್ಬದ ದಿನವಾದ ಆಯುಧ ಪೂಜೆಯ ದಿನದಂದು (ಅಕ್ಟೋಬರ್ 22) ಸೆಟ್ಟೇರಲಿದೆ.['ನಟರಾಜ ಸರ್ವೀಸ್' ಸ್ಟೇಷನ್ ನಲ್ಲಿ ಶರಣ್ ಜೊತೆ ಮಯೂರಿ]

Pawan Wadeyar's Nataraja Service to be launched on October 22nd

ನಿರ್ದೇಶಕ ಪವನ್ ಒಡೆಯರ್ ಅವರೇ ರಚಿಸಿ ನಿರ್ದೇಶಿಸುತ್ತಿರುವ 'ನಟರಾಜ ಸರ್ವಿಸ್' ಚಿತ್ರಕ್ಕೆ ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಜೊತೆಗೆ ಅರುಲ್ ಕೆ ಸೋಮಸುಂದರಮ್ ಸಿನಿಮಾಟೋಗ್ರಫಿ ಈ ಚಿತ್ರಕ್ಕಿದೆ.[ಶರಣ್ ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ನಿರ್ಮಾಪಕ..!]

ಈ ಮೊದಲು ಪವರ್‌ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 'ನಟರಾಜ ಸರ್ವಿಸ್' ಗೆ ಹೊಸ ಬ್ಯಾನರ್ ಲಾಂಚ್ ಮಾಡುವ ಮೂಲಕ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಅನ್ನೋ ಸುದ್ದಿ ಇತ್ತು. ಆದರೆ ಇದೀಗ ಮಾಹಿತಿ ಪ್ರಕಾರ ಹಿಟ್ ಚಿತ್ರ 'ಮೈನಾ' ಹಾಗೂ 'ಜಟ್ಟಾ' ಚಿತ್ರಕ್ಕೆ ಬಂಡವಾಳ ಹಾಕಿದ್ದ ಪುನೀತ್ ರಾಜ್ ಕುಮಾರ್ ಅವರ ಸಹಾಯಕ ಎನ್.ಎಸ್ ರಾಜ್ ಕುಮಾರ್ ಅವರು 'ನಟರಾಜ ಸರ್ವಿಸ್' ಚಿತ್ರದ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದಾರೆ.[ನಿರ್ದೇಶಕ ಪವನ್ ಒಡೆಯರ್ ಮುಂದಿನ ಚಿತ್ರ 'ನಟರಾಜ ಸರ್ವೀಸ್']

Pawan Wadeyar's Nataraja Service to be launched on October 22nd

ನಿರ್ದೇಶಕ ಪವನ್ ಒಡೆಯರ್ ಆಕ್ಷನ್-ಕಟ್ ಹೇಳಿರುವ, ನಿರ್ಮಾಪಕ ಕನಕಪುರ ಶ್ರೀನಿವಾಸ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಲವ್-ರೊಮ್ಯಾಂಟಿಕ್ ಚಿತ್ರ 'ಜೆಸ್ಸಿ' ಪೂರ್ತಿಯಾಗಿದ್ದು, ಇನ್ನೇನು ಸದ್ಯದಲ್ಲೇ ತೆರೆ ಮೇಲೆ ಅಪ್ಪಳಿಸಲಿದೆ. ಚಿತ್ರದಲ್ಲಿ ಪಾರುಲ್ ಯಾದವ್, ಧನಂಜಯ್ ಹಾಗೂ ರಘು ಮುಖರ್ಜಿ ಲೀಡ್ ರೋಲ್ ನಲ್ಲಿ ಮಿಂಚಿದ್ದಾರೆ.

English summary
Pavan Wodeyar is almost thorough with 'Jessie' being produced by Kanakapura Srinivas. Meanwhile, Pavan is all set to launch his new film 'Nataraja Service' on the festival day of Ayudha Pooja (October 22nd).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada