For Quick Alerts
  ALLOW NOTIFICATIONS  
  For Daily Alerts

  ಡಾರ್ಲಿಂಗ್ ಕೃಷ್ಣ ಜೊತೆ ಹೊಸ ಪ್ರಾಜೆಕ್ಟ್ ಘೋಷಿಸಿದ ಪಿಸಿ ಶೇಖರ್

  |

  ಲವ್ ಮಾಕ್ಟೈಲ್ ಚಿತ್ರದ ಯಶಸ್ಸಿನ ನಂತರ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ನಟ ಡಾರ್ಲಿಂಗ್ ಕೃಷ್ಣ ಮತ್ತೊಂದು ಹೊಸ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಕಲಾತ್ಮಕ ನಿರ್ದೇಶಕ ಪಿಸಿ ಶೇಖರ್ ನಿರ್ದೇಶನದಲ್ಲಿ ಹೊಸ ಪ್ರಾಜೆಕ್ಟ್ ಮಾಡುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ಕುರಿತು ಸ್ವತಃ ಪಿಸಿ ಶೇಖರ್ ಫಿಲ್ಮಿಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

  ಶಿವರಾಜ್ ಕುಮಾರ್ ನಟಿಸಿದ್ದ ಕಡ್ಡಿಪುಡಿ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಚಂದ್ರು ಅವರು ಡಾರ್ಲಿಂಗ್ ಕೃಷ್ಣ ಮತ್ತು ಪಿಸಿ ಶೇಖರ್ ಕಾಂಬಿನೇಷನ್ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಇದು ಶೇಖರ್ ಅವರ ಹತ್ತನೇ ಚಿತ್ರ ಆಗಲಿದೆ.

  ಅಂದ್ಹಾಗೆ, ಈ ಸಿನಿಮಾ ಟೇಕ್ ಆನ್ ಆಗಿದ್ದು ಸಹ ಇಂದು ಇಂಟರೆಸ್ಟಿಂಗ್ ಸಂಗತಿ. ಯಾವುದೇ ಕಾರಣಕ್ಕೆ ನಟ-ನಿರ್ಮಾಪಕ ಚಂದ್ರು ಅವರನ್ನು ಶೇಖರ್ ಭೇಟಿ ಮಾಡಿದ್ದರು. ಆ ವೇಳೆ ಮಾತಿಗೆ ಮಾತು ಮುಂದುವರಿದು ಯಾವುದಾದರೂ ಸಿನಿಮಾ ಪ್ಲಾನ್ ಇದ್ಯಾ ಎಂದು ಕೇಳಿದ ಚಂದ್ರುಗೆ ಪಿಸಿ ಶೇಖರ್ ಸುಮ್ಮನೆ ಕಥೆ ವಿವರಿಸಿದ್ದರು. ಈ ಕಥೆ ಕೇಳಿ ಸುಮ್ಮನೆ ಹೋದ ಕಡ್ಡಿಪುಡಿ ಚಂದ್ರು ಈ ಚಿತ್ರವನ್ನು ನಾನೇ ನಿರ್ಮಾಣ ಮಾಡ್ತೇನೆ ಎಂದು ನಿರ್ಧರಿಸಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಮುಂದೆ ಓದಿ...

  ಡಾರ್ಲಿಂಗ್ ಕೃಷ್ಣ ಅಂತಾನೇ ಫಿಕ್ಸ್ ಆಗಿದ್ರು

  ಡಾರ್ಲಿಂಗ್ ಕೃಷ್ಣ ಅಂತಾನೇ ಫಿಕ್ಸ್ ಆಗಿದ್ರು

  ಪಿಸಿ ಶೇಖರ್ ಅವರ ಸ್ಕ್ರಿಪ್ಟ್ ಕೇಳಿದ ಕಡ್ಡಿಪುಡಿ ಚಂದ್ರು ಈ ಚಿತ್ರ ತಾವೇ ನಿರ್ಮಾಣ ಮಾಡಲು ನಿರ್ಧರಿಸಿದರು. ಮೊದಲೇ ಲವ್ ಮಾಕ್ಟೈಲ್ ನೋಡಿ ಇಷ್ಟಪಟ್ಟಿದ್ದ ಪಿಸಿ ಶೇಖರ್, ಡಾರ್ಲಿಂಗ್ ಕೃಷ್ಣ ಇದಕ್ಕು ಸೂಕ್ತ ನಟ ಆಗಬಹುದು ಎಂದು ಅಂದುಕೊಂಡಿದ್ದರು. ಈ ವಿಷಯವನ್ನು ಚಂದ್ರು ಅವರ ಬಳಿಯೂ ಹೇಳಿದರು. ಮರುದಿನ ಚಂದ್ರು ಅವರು ಡಾರ್ಲಿಂಗ್ ಕೃಷ್ಣ ಅವರ ಬಳಿ ಸಮಯ ನಿಗದಿ ಮಾಡಿ ಸ್ಕ್ರಿಪ್ಟ್ ಹೇಳಲು ಕರೆದರು. ನಿರ್ದೇಶಕ ಶೇಖರ್ ಸಹ ಕಥೆ ಹೇಳಿದರು. ಕೃಷ್ಣಗೂ ಈ ಚಿತ್ರ ಇಷ್ಟವಾಗಿದ್ದು, ಓಕೆ ಎಂದಿದ್ದಾರೆ.

  ರೊಮ್ಯಾಂಟಿಕ್ ಥ್ರಿಲ್ಲರ್

  ರೊಮ್ಯಾಂಟಿಕ್ ಥ್ರಿಲ್ಲರ್

  ''ರೋಮಿಯೋ ಸಿನಿಮಾ ಆದ್ಮೇಲೆ ಅಂತಹದೊಂದು ಜಾನರ್‌ನಲ್ಲಿ ಮಾಡುತ್ತಿರುವ ಚಿತ್ರ ಇದು. ಲವ್, ಕಾಮಿಡಿ, ಭಾವನೆ, ಫ್ಯಾಮಿಲಿ ಅಂಶಗಳೊಂದಿಗೆ ಮೂಡಿ ಬರಲಿದೆ. ಈಗಿನ ಕಾರ್ಪೋರೇಟ್ ವಾತಾವರಣದ ಕುಟುಂಬ ಹಿನ್ನೆಲೆ ಹೊಂದಿರುವ ಕಥಾನಾಯಕ. ಕೆಲವು ಹಳ್ಳಿಯಲ್ಲಿ ನಡೆಯುವ ದೃಶ್ಯಗಳು ಇದೆ. ದೊಡ್ಡ ತಂತ್ರಜ್ಞರು, ನಾಯಕಿ ಈ ಚಿತ್ರಕ್ಕೆ ಬರುವ ಸಾಧ್ಯತೆ ಇದೆ. ಬೆಂಗಳೂರು, ಮಂಡ್ಯ ಚಿತ್ರೀಕರಣ ಅಂತ ಅಂದುಕೊಂಡಿದ್ದೀವಿ. ಇನ್ನುಳಿದ ಮಾಹಿತಿಯನ್ನು ಮುಂದಿನ ದಿನದಲ್ಲಿ ಹೇಳುತ್ತೇವೆ'' ಎಂದು ಪಿಸಿ ಶೇಖರ್ ತಿಳಿಸಿದ್ದಾರೆ.

  ಮಾನ್ವಿತಾ ಜೊತೆ ಮತ್ತೊಂದು ಸಿನಿಮಾ

  ಮಾನ್ವಿತಾ ಜೊತೆ ಮತ್ತೊಂದು ಸಿನಿಮಾ

  ಇದಕ್ಕೂ ಮುಂಚೆ ಪಿಸಿ ಶೇಖರ್ ನಟಿ ಮಾನ್ವಿತಾ ಕಾಮತ್ ಜೊತೆ ಸಿನಿಮಾವೊಂದು ಮಾಡ್ತಿದ್ದಾರೆ. ಈ ಚಿತ್ರ ಪೂರ್ವ ತಯಾರಿ ಎಲ್ಲವೂ ನಡೆದಿದ್ದು, ಶೂಟಿಂಗ್ ಸಹ ಆರಂಭಿಸುತ್ತಿದ್ದಾರೆ. ಇದು ಪಿಸಿ ಶೇಖರ್ ಅವರ 9ನೇ ಚಿತ್ರ. ಆಗಸ್ಟ್ ಅಂತ್ಯದಲ್ಲಿ ಚಿತ್ರೀಕರಣ ಪ್ರಾರಂಭಿಸುವುದಾಗಿ ಈ ಹಿಂದೆ ಹೇಳಿದ್ದರು.

  ಪಿಸಿ ಶೇಖರ್ ಹೊಸ ಚಿತ್ರಕ್ಕೆ 'ಟಗರು' ಪೋರಿ ಮಾನ್ವಿತಾ ಕಾಮತ್ ನಾಯಕಿಪಿಸಿ ಶೇಖರ್ ಹೊಸ ಚಿತ್ರಕ್ಕೆ 'ಟಗರು' ಪೋರಿ ಮಾನ್ವಿತಾ ಕಾಮತ್ ನಾಯಕಿ

  ಡಾರ್ಲಿಂಗ್ ಕೃಷ್ಣ ಚಿತ್ರಗಳು

  ಡಾರ್ಲಿಂಗ್ ಕೃಷ್ಣ ಚಿತ್ರಗಳು

  ಲವ್ ಮಾಕ್ಟೈಲ್ ಹಿಟ್ ಆದ್ಮೇಲೆ ಡಾರ್ಲಿಂಗ್ ಕೃಷ್ಣ ಸಖತ್ ಬ್ಯುಸಿಯಾದರು. ತಮ್ಮದೇ ನಿರ್ದೇಶನದಲ್ಲಿ ಲವ್ ಮಾಕ್ಟೈಲ್ 2 ಚಿತ್ರೀಕರಣ ಮಾಡುತ್ತಿದ್ದಾರೆ. ಈ ನಡುವೆ ಹಲವು ಪ್ರಾಜೆಕ್ಟ್‌ಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಲೋಕಲ್ ಟ್ರೈನ್, ಶುಗರ್ ಫ್ಯಾಕ್ಟರಿ, ವರ್ಜಿನ್, ರಚಿತಾ ರಾಮ್ ಜೊತೆ ಲವ್ ಮಿ ಔರ್ ಹೇಟ್ ಮೀ, ಶ್ರೀಕೃಷ್ಣ@ಜಿ-ಮೇಲ್.ಕಾಮ್ ಅಂತಹ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

  ಚಿತ್ರೀಕರಣ ಮುಗಿಸಿದ 'ಲವ್ ಮಾಕ್ಟೆಲ್ 2' ಖುಷಿಯಲ್ಲಿ ಆದಿ-ನಿಧಿಮಾಚಿತ್ರೀಕರಣ ಮುಗಿಸಿದ 'ಲವ್ ಮಾಕ್ಟೆಲ್ 2' ಖುಷಿಯಲ್ಲಿ ಆದಿ-ನಿಧಿಮಾ

  ಪಿಸಿ ಶೇಖರ್ ಸಿನಿಮಾಗಳು

  ಪಿಸಿ ಶೇಖರ್ ಸಿನಿಮಾಗಳು

  ಅದ್ಹಾಗೆ, ಪಿಸಿ ಶೇಖರ್ ಇದುವರೆಗೂ ಎಂಟು ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. 2006ರಲ್ಲಿ 'ಕಾದಲೇ ಎನ್ ಕಾದಲೇ' ಎಂಬ ತಮಿಳು ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನ ಶುರು ಮಾಡಿದ ಪಿಸಿ ಶೇಖರ್ ನಂತರ ಕನ್ನಡ ಇಂಡ್ಟ್ರಿಯಲ್ಲಿ ನೆಲೆ ಕಂಡರು. 2010ರಲ್ಲಿ 'ನಾಯಕ್', 2012ರಲ್ಲಿ 'ರೊಮಿಯೋ', 2013ರಲ್ಲಿ 'ಚಡ್ಡಿ ದೋಸ್ತ್', 2015ರಲ್ಲಿ 'ಅರ್ಜುನ್', 2016ರಲ್ಲಿ 'ಸ್ಟೈಲ್ ಕಿಂಗ್', 2017ರಲ್ಲಿ 'ರಾಗ' ಹಾಗೂ 2018ರಲ್ಲಿ 'ದಿ ಟೆರರಿಸ್ಟ್' ಎಂಬ ಚಿತ್ರಗಳನ್ನು ನಿರ್ದೇಶಿಸಿದರು.

  ಎರಡು ವರ್ಷದ ನಂತರ ಕಂಬ್ಯಾಕ್

  ಎರಡು ವರ್ಷದ ನಂತರ ಕಂಬ್ಯಾಕ್

  ಅದಾದ ಮೇಲೆ ಸಿನಿಮಾಗೆ ಸಣ್ಣ ಬ್ರೇಕ್ ಕೊಟ್ಟ ಪಿಸಿ ಶೇಖರ್, ಜಾಹೀರಾತುಗಳಲ್ಲಿ ತೊಡಗಿಕೊಂಡಿದ್ದರು. ಚೆನ್ನೈನ ಪ್ರತಿಷ್ಠಿತ ಕಂಪನಿಗಳಿಗೆ ಜಾಹೀರಾತು ನಿರ್ದೇಶನ ಮಾಡುವ ಅವಕಾಶ ಗಿಟ್ಟಿಸಿಕೊಂಡು, ಅದರಲ್ಲಿ ಕೆಲಸ ಮಾಡಿದ್ದರು. ಈಗ ಮತ್ತೆ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಮಾಡಿರುವ ಪಿಸಿ ಶೇಖರ್ ಒಳ್ಳೊಳ್ಳೆ ಚಿತ್ರಗಳೊಂದಿಗೆ ಬರುವ ವಿಶ್ವಾಸದಲ್ಲಿದ್ದಾರೆ.

  English summary
  Kannada Actor Darling Krishna to star in PC Shankar's next romantic RomCom. its 10th film of PC Shekar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X