twitter
    For Quick Alerts
    ALLOW NOTIFICATIONS  
    For Daily Alerts

    ಮೊದಲ ಬಾರಿ ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ವೀಕ್ಷಿಸಿದ ಪೇಜಾವರ ಶ್ರೀ: ಯಾವುದಾ ಸಿನಿಮಾ?

    By ಮಂಗಳೂರು ಪ್ರತಿನಿಧಿ
    |

    ಮೊದಲ ಬಾರಿಗೆ ಪೇಜಾವರ ಶ್ರೀಗಳುಗಳು ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ಒಂದನ್ನು ವೀಕ್ಷಿಸಿದ್ದಾರೆ. ಅದುವೇ 'ದಿ ಕಾಶ್ಮೀರ್ ಫೈಲ್ಸ್'.

    Recommended Video

    ಕನ್ನಡಿಗರ ಪವರ್ ಎಂಥದ್ದು ಎಂದು ತೋರಿಸಿಕೊಟ್ಟ ಪುನೀತ್ ರಾಜ್‌ಕುಮಾರ್

    ದೇಶದಲ್ಲಿ ಸಂಚಲನ ಮೂಡಿಸಿರುವ 'ದಿ ಕಾಶ್ಮೀರಿ ಫೈಲ್ಸ್' ಚಿತ್ರಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.ಕಾಶ್ಮೀರಿ ಫೈಲ್ಸ್ ಸಿನಿಮಾ ಕೇವಲ ಸಾಮಾನ್ಯ ಪ್ರೇಕ್ಷಕರನ್ನು ಮಾತ್ರವಲ್ಲ ಗಣ್ಯರು ಮತ್ತು ಸಂತರನ್ನು ಕೂಡಾ ಈ ಸಿನಿಮಾ ಆಕರ್ಷಿಸಿದೆ. ಸಿನಿಮಾ ಥಿಯೇಟರ್ ಗೆ ಯಾವತ್ತೂ ಕಾಲಿರಿಸಿದ ಮಠಾಧೀಶರನ್ನು ಕೂಡ ಈ ಸಿನಿಮಾ ಥಿಯೇಟರ್ ನತ್ತ ಸೆಳೆಯುತ್ತಿದೆ. ಉಡುಪಿ ಪೇಜಾವರ ‌ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಕಾಣಿಯೂರು ಮಠದ ವಿದ್ಯಾವಲ್ಲಭ ಶ್ರೀ ಕಾಶ್ಮೀರ ಫೈಲ್ಸ್ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

    ಸಿನಿಮಾ ವೀಕ್ಷಣೆ ಬಳಿಕ ಪ್ರತಿಕ್ರಿಯೆ ನೀಡಿದ ಪೇಜಾವರ ಶ್ರೀ, ''ಚಿತ್ರವನ್ನು ನೋಡಿ ಬಂದಿದ್ದೇವೆ. ಇತಿಹಾಸದ ಪುಟದಲ್ಲಿ ಮೆರೆಯಾದ ಸತ್ಯವನ್ನು ಈ ಚಿತ್ರ ಸ್ಫುಟವಾಗಿ ಕಣ್ಣ ಮುಂದೆ ತೆರೆದಿಟ್ಟಿದೆ. ಈ ಚಲನಚಿತ್ರ ಸತ್ಯವನ್ನು ಎತ್ತಿ ಹಿಡಿದಿದೆ. ಜೊತೆಗೆ ನಮ್ಮ ಸಮಾಜ ನಮ್ಮ ಭಾರತೀಯತೆಯನ್ನು, ನೆಲದ ಸನಾತನ ಸಂಸ್ಕೃತಿಯನ್ನು ಹಿಂದೂ ಸಂಸ್ಕೃತಿಯನ್ನು ರಕ್ಷಣೆ ಮಾಡಬೇಕಾದರೆ, ನಾಳೆಯ ದಿನವೂ ನಾವು ಉತ್ತಮ ದಿನಗಳನ್ನು ಕಾಣಬೇಕು ಅಂತಾ ಇದ್ರೆ ನಮ್ಮ ತನವನ್ನು ಉಳಿಸಬೇಕೆಂದು ಎಚ್ಚರಿಕೆಯನ್ನು ನೀಡಿದೆ'' ಎಂದಿದ್ದಾರೆ.

    The Kashmir Files: 'ದಿ ಕಾಶ್ಮೀರ್ ಫೈಲ್ಸ್' ನೋಡಲು ಎದೆಗಾರಿಕೆ ಬೇಕು: ಸಂಸದ ಪ್ರತಾಪ ಸಿಂಹ ಟಾಂಗ್The Kashmir Files: 'ದಿ ಕಾಶ್ಮೀರ್ ಫೈಲ್ಸ್' ನೋಡಲು ಎದೆಗಾರಿಕೆ ಬೇಕು: ಸಂಸದ ಪ್ರತಾಪ ಸಿಂಹ ಟಾಂಗ್

    ''ಬಾಕಿ ಆಕ್ರಮಣ ಒಂದೆಡೆಯಾದರೆ, ನಮ್ಮ ಮಕ್ಕಳಿಗೆ ತಪ್ಪು ತಿಳುವಳಿಕೆಯ ಮೂಲಕ ನಮ್ಮ ಮಕ್ಕಳನ್ನೇ ನಮ್ಮ ಸಮಾಜದ ವಿರುದ್ದ ಎತ್ತಿ ಕಟ್ಟುವ ಷಡ್ಯಂತ್ರ ನಡೆಯುತ್ತಿದೆ. ಹಾಗಾಗಿ ನಮ್ಮ ಮುಂದಿನ ಯುವ ಜನಾಂಗವನ್ನು ಯಾವ ದಾರಿಯಲ್ಲಿ ಕೊಂಡು ಹೋಗಬೇಕು ಯಾವ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು ಎಂಬುವುದರ ಬಗ್ಗೆ ಈ ಚಲನಚಿತ್ರದಲ್ಲಿ ಕಟ್ಟಿಕೊಡಲಾಗಿದೆ'' ಎಂದರು.

    ವಸ್ತು ಸ್ಥಿತಿಯನ್ನು ನೋಡಬೇಕು: ಪೇಜಾವರ ಶ್ರೀ

    ವಸ್ತು ಸ್ಥಿತಿಯನ್ನು ನೋಡಬೇಕು: ಪೇಜಾವರ ಶ್ರೀ

    ''ಈ ಚಲನಚಿತ್ರದಲ್ಲಿ ಕೇವಲ ಕಥೆಯನ್ನು ನೋಡದೆ ವಸ್ತು ಸ್ಥಿತಿಯನ್ನು ಗಮನಿಸಬೇಕು ಇದೊಂದು ದೊಡ್ಡ ಎಚ್ಚರಿಕೆಯನ್ನು ನೀಡಿದೆ. ಸಮಾಜವನ್ನು ಸದಾ ಕಾಲ ಜಾಗೃತವಾಗುವಂತೆ ಈ ಚಲನ ಚಿತ್ರ ಎಚ್ಚರಿಸಿದೆ..ಕಾಶ್ಮೀರ ದಲ್ಲಿ ಪರಿಸ್ಥಿತಿ ಇನ್ನೂ ತಿಳಿಯಾಗಬೇಕಾಗಿದೆ.ಕಾಶ್ಮೀರ ಪಂಡಿತರು ತಮ್ಮ ತಮ್ಮ ಸ್ವಸ್ಥಾನಗಳಿಗೆ ಹಿಂದುರುಗಬೇಕಾಗಿದೆ. ಕಾಶ್ಮೀರ ದಲ್ಲಿ ಮತ್ತೆ ಮರಳಿ ಅ ವೈಭವವನ್ನು ಕಾಣಬೇಕು. ಈ ಚಿತ್ರ ಎಲ್ಲಾ ಭಾಷೆಗಳಲ್ಲಿ‌ ಬಂದರೆ ಇನ್ನೂ ಉತ್ತಮವಾಗುತ್ತದೆ. ಆಕಾಲದ ಪತ್ರಿಕೆಗಳೂ ಇನ್ನು ಇವೆ. ಆ ಪತ್ರಿಕೆಗಳು ಈಗ ನಿಜ ನುಡಿದರೆ ಇನ್ನೂ ಸತ್ಯದ ಅನಾವರಣ ಆಗುತ್ತದೆ'' ಎಂದಿದ್ದಾರೆ.

    James IMDB Rating: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಹಿಂದಿಕ್ಕಿದ ಕನ್ನಡದ 'ಜೇಮ್ಸ್'James IMDB Rating: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಹಿಂದಿಕ್ಕಿದ ಕನ್ನಡದ 'ಜೇಮ್ಸ್'

    ಸಿನಿಮಾ ನೋಡಿ ತುಂಬಾ ದುಃಖವಾಗಿದೆ: ಪೇಜಾವರ ಶ್ರೀ

    ಸಿನಿಮಾ ನೋಡಿ ತುಂಬಾ ದುಃಖವಾಗಿದೆ: ಪೇಜಾವರ ಶ್ರೀ

    ''ಸಿನಿಮಾ ನೋಡಿ ತುಂಬಾ ದುಃಖವಾಗಿದೆ. ಔರಂಗಜೇಬ್, ಬಾಬರ್, ಘಜ್ನಿ, ಗೋರಿಯ ಕಾಲದಲ್ಲಿ ಹಿಂಸೆ ಕೇಳಿದ್ದೆವು. ಆದರೆ ಕಾಶ್ಮೀರದಲ್ಲೂ ನಿನ್ನೆ ಮೊನ್ನೆ ದಿನದವರೆಗೆ ಈ ಭಯಾನಕ ಕ್ರೌರ್ಯ ನಡೆದಿರುವುದು ಅರಿಗಿಸಿಕೊಳ್ಳಲಾಗುತ್ತಿಲ್ಲ. ಈ‌ ಸಿನಿಮಾವನ್ನ ಕೇವಲ ಕಥೆಯನ್ನ ನೋಡದೆ ವಸ್ತುಸ್ಥಿತಿಯನ್ನ ಗಮನಿಸಬೇಕು. ಈ ಸಿನಿಮಾ ಸಮಾಜಕ್ಕೆ‌ ದೊಡ್ಡ ಎಚ್ಚರಿಕೆ ಕೊಟ್ಟಿದೆ. ಸಮಾಜ ಸದಾಕಾಲ‌ ಜಾಗೃತರಾಗಿರುವಂತೆ ಎಚ್ಚರಿಸಿದೆ. ಈ‌ ಸಿನಿಮಾ ‌ಕಾಲ್ಪನಿಕ ಎನ್ನುವವರು ಆ ಕಾಲದ ಪತ್ರಿಕೆಗಳನ್ನ ಮತ್ತೆ ನೋಡಿದಲ್ಲಿ ಸತ್ಯ ಅರಿವಾಗುತ್ತದೆ.

    ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಪರಿಸ್ಥಿತಿ ಕರ್ನಾಟಕ, ಕೇರಳ‌ ಹೀಗೆ ಪಕ್ಕದ ರಾಜ್ಯದ್ದೂ ಆಗಬಹುದು. ಹಾಗಾಗದ ಹಾಗೆ ನಾವೆಲ್ಲ ಎಚ್ಚರ ವಹಿಸಬೇಕು'' ಎಂದು ಪೇಜಾವರ ಶ್ರೀ ಹೇಳಿದ್ದಾರೆ.

    ಹಿಂದುಪರ ಸಂಘಟನೆಗಳಿಗೆ ಸಿನಿಮಾಕ್ಕೆ ಪ್ರಚಾರ

    ಹಿಂದುಪರ ಸಂಘಟನೆಗಳಿಗೆ ಸಿನಿಮಾಕ್ಕೆ ಪ್ರಚಾರ

    ಬಿಜೆಪಿ, ಆರ್‌ಎಸ್‌ಎಸ್‌ ಹಾಗೂ ಹಿಂದುಪರ ಸಂಘಟನೆಗಳಿಂದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ವತಃ ಮೋದಿ ಸಹ ಈ ಸಿನಿಮಾದ ಪರವಾಗಿ ಮಾತನಾಡಿರುವುದು ಸಿನಿಮಾಕ್ಕೆ ಇನ್ನಷ್ಟು ಪ್ರಚಾರ ನೀಡಿದೆ. ಬಿಜೆಪಿಯ ಹಲವು ಶಾಸಕರು, ಸಚಿವರುಗಳು ಈ ಸಿನಿಮಾದ ಉಚಿತ ಪ್ರದರ್ಶನಗಳನ್ನು ಆಯೋಜನೆ ಮಾಡಿದ್ದಾರೆ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸದವರು ದೇಶದ್ರೋಹಿಗಳು ಎಂದು ಸಹ ಕೆಲವು ಬಿಜೆಪಿ ಶಾಸಕರು, ಸಚಿವರು ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

    ವಿವೇಕ್ ಅಗ್ನಿಹೋತ್ರಿ ನಿರ್ದೇಶನ

    ವಿವೇಕ್ ಅಗ್ನಿಹೋತ್ರಿ ನಿರ್ದೇಶನ

    'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವು 1990 ರ ಸಮಯದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯದ ಕತೆಯನ್ನು ಒಳಗೊಂಡಿದೆ. ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಅನುಪಮ್ ಖೇರ್, ದರ್ಶನ್ ಕುಮಾರ್, ಪ್ರಕಾಶ್ ಬೆಳವಾಡಿ, ಪಲ್ಲವಿ ಜೋಶಿ ಇನ್ನೂ ಹಲವರು ನಟಿಸಿದ್ದಾರೆ.

    English summary
    Pejawar Seer watched The Kashmir Files movie in theater. This is first time Pejawar Seer coming to theater to watch a movie.
    Monday, March 21, 2022, 14:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X