twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರತಂಡವಲ್ಲ, ಜನರೇ ನೀಡುತ್ತಿದ್ದಾರೆ 'ಹೆಡ್ ಬುಷ್' ಸಿನಿಮಾಕ್ಕೆ ಉಚಿತ ಟಿಕೆಟ್!

    |

    ಧನಂಜಯ್ ನಟಿಸಿ, ನಿರ್ಮಾಣ ಮಾಡಿರುವ 'ಹೆಡ್ ಬುಷ್' ಸಿನಿಮಾ ವಿವಾದಕ್ಕೆ ಈಡಾಗಿದೆ. ವೀರಗಾಸೆಗೆ ಅಪಮಾನ ಮಾಡಲಾಗಿದೆ ಎಂದು ಕೆಲವು ಹಿಂದುಪರ ಸಂಘಟನೆಗಳು ಧನಂಜಯ್ ವಿರುದ್ಧ ದೂರು ನೀಡಿವೆ. ತಿಪಟೂರಿನಲ್ಲಿ ಧನಂಜಯ್ ಕಟೌಟ್‌ಗೆ ಮಸಿ ಸಹ ಬಳಿಯಲಾಗಿದೆ.

    ಆದರೆ ಧನಂಜಯ್ ಅನ್ನು ಟಾರ್ಗೆಟ್ ಮಾಡಿಕೊಂಡು ಹೀಗೆ ಮಾಡಲಾಗುತ್ತಿದೆ ಎಂಬ ಆರೋಪವೂ ಇದೆ. ಈ ಹಿಂದೆ ನಟ ಧನಂಜಯ್, ಹಿಂದಿ ಹೇರಿಕೆ ವಿರೋಧಿಸಿ, ಕೋಮುಗಲಭೆ ವಿರೋಧಿಸಿ ಮಾಡಿದ್ದ ಟ್ವೀಟ್‌ಗಳನ್ನು ವಿರೋಧಿಸಿದ್ದ ವರ್ಗವೇ ಈಗ ಧನಂಜಯ್‌ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

    ಆ ನಟರು ಮಾಡಿದರೆ ತಪ್ಪಲ್ಲ, ಧನಂಜಯ್ ಮಾಡಿದರೆ ತಪ್ಪೆ? ನೆಟ್ಟಿಗರ ಪ್ರಶ್ನೆಆ ನಟರು ಮಾಡಿದರೆ ತಪ್ಪಲ್ಲ, ಧನಂಜಯ್ ಮಾಡಿದರೆ ತಪ್ಪೆ? ನೆಟ್ಟಿಗರ ಪ್ರಶ್ನೆ

    ಇದೇ ಕಾರಣಕ್ಕೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಧನಂಜಯ್ ಪರವಾಗಿ ನಿಂತಿದ್ದು, 'ಐ ಸ್ಟ್ಯಾಂಡ್ ವಿತ್ ಧನಂಜಯ್' ಎಂಬ ಅಭಿಯಾನ ಸಹ ಆರಂಭಿಸಿದ್ದಾರೆ. ಇದರ ನಡುವೆ ಒಂದು ವಿಭಿನ್ನ ಅಭಿಯಾನವೂ ನಡೆಯುತ್ತಿದೆ. 'ಹೆಡ್ ಬುಷ್' ಸಿನಿಮಾವನ್ನು ಬೆಂಬಲಿಸುವ ಸಲುವಾಗಿ ಜನರೇ ಉಚಿತವಾಗಿ ಟಿಕೆಟ್‌ಗಳನ್ನು ಹಂಚುತ್ತಿದ್ದಾರೆ.

    ಉಚಿತವಾಗಿ ಸಿನಿಮಾ ನೋಡಬಹುದು!

    ಉಚಿತವಾಗಿ ಸಿನಿಮಾ ನೋಡಬಹುದು!

    ಬುಕ್‌ಮೈ ಶೋನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿ ಅದರ ಕ್ಯುಆರ್ ಕೋಡ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆ ಕ್ಯುಆರ್ ಕೋಡ್ ಅನ್ನು ನಿಗದಿತ ಚಿತ್ರಮಂದಿರದಲ್ಲಿ ತೋರಿಸಿದರೆ ಎಷ್ಟು ಟಿಕೆಟ್ ಬುಕ್ ಆಗಿವೆಯೋ ಅಷ್ಟು ಮಂದಿ ಉಚಿತವಾಗಿ ಸಿನಿಮಾ ನೋಡಬಹುದಾಗಿದೆ. 'ಹೆಡ್ ಬುಷ್' ಸಿನಿಮಾವನ್ನು ಬೆಂಬಲಿಸಲು ಹೀಗೆ ಮಾಡುತ್ತಿರುವುದಾಗಿ ಟಿಕೆಟ್ ಬುಕ್ ಮಾಡಿರುವವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಒಬ್ಬೊಬ್ಬರು ಹತ್ತು ಟಿಕೆಟ್ ಬುಕ್ ಮಾಡಿದ್ದಾರೆ

    ಒಬ್ಬೊಬ್ಬರು ಹತ್ತು ಟಿಕೆಟ್ ಬುಕ್ ಮಾಡಿದ್ದಾರೆ

    ಕರ್ನಾಟಕದ ಜನ ಮಾತ್ರವಲ್ಲ, ವಿದೇಶದಲ್ಲಿ ನೆಲೆಸಿರುವ ಕೆಲವು ಕನ್ನಡಿಗರೂ ಸಹ ಬೆಂಗಳೂರಿನ ಚಿತ್ರಮಂದಿರಗಳಲ್ಲಿ 5-10 ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿ ಅದರ ಕ್ಯುಆರ್ ಕೋಡ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಯಾರು ಕ್ಯುಆರ್ ಕೋಡ್‌ಗಳನ್ನು ತೆಗೆದುಕೊಂಡು ಚಿತ್ರಮಂದಿರ ಅಥವಾ ಮಲ್ಟಿಪ್ಲೆಕ್ಸ್‌ಗೆ ಹೋಗುತ್ತಾರೊ ಅವರು ಉಚಿತವಾಗಿ ಸಿನಿಮಾ ನೋಡಬಹುದಾಗಿರುತ್ತದೆ.

    ಅಮೆರಿಕದ ವ್ಯಕ್ತಿಯೂ ಬೆಂಗಳೂರಿನಲ್ಲಿ ಟಿಕೆಟ್ ಬುಕ್ ಮಾಡಿದ್ದಾನೆ!

    ಅಮೆರಿಕದ ವ್ಯಕ್ತಿಯೂ ಬೆಂಗಳೂರಿನಲ್ಲಿ ಟಿಕೆಟ್ ಬುಕ್ ಮಾಡಿದ್ದಾನೆ!

    ಹೀಗೆ 'ಹೆಡ್ ಬುಷ್' ಸಿನಿಮಾದ ಟಿಕೆಟ್ ಬುಕ್ ಮಾಡಿ ಕ್ಯುಆರ್ ಕೋಡ್ ಹಂಚಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಒಬ್ಬರನ್ನು ನೋಡಿ ಮತ್ತೊಬ್ಬರು ಹೀಗೆ ಸಿನಿಮಾದ ಟಿಕೆಟ್‌ಗಳನ್ನು ಬುಕ್‌ ಮಾಡುತ್ತಿದ್ದಾರೆ. 'ಬಡವರ ಮಕ್ಕಳು ಬೆಳೀಲಿ' ಅಂತ ನಾನು ಹತ್ತು ಟಿಕೆಟ್ ಬುಕ್ ಮಾಡಿದ್ದೇನೆ' ಎಂದು ಒಬ್ಬರು, 'ದುರುದ್ದೇಶಪೂರ್ವಕವಾಗಿ ಟಾರ್ಗೆಟ್ ಆಗುತ್ತಿರುವ ಧನಂಜಯ್ ಗೆ ಬೆಂಬಲಿಸಲು ನಾನು ಐದು ಟಿಕೆಟ್ ಬುಕ್ ಮಾಡಿದ್ದೇನೆ' ಎಂದು ಇನ್ನೊಬ್ಬರು ಹೀಗೆ ಹಲವರು ಟಿಕೆಟ್ ಬುಕ್ ಮಾಡಿ ಕ್ಯುಆರ್ ಕೋಡ್ ಅನ್ನು ಉಚಿತವಾಗಿ ಹಂಚಿಕೊಂಡಿಕೊಂಡಿದ್ದಾರೆ.

    'ಹೆಡ್ ಬುಷ್' ಸಿನಿಮಾದ ದೃಶ್ಯದ ವಿವಾದ

    'ಹೆಡ್ ಬುಷ್' ಸಿನಿಮಾದ ದೃಶ್ಯದ ವಿವಾದ

    'ಹೆಡ್ ಬುಷ್' ಸಿನಿಮಾದ ದೃಶ್ಯವೊಂದರಲ್ಲಿ ನಟ ಧನಂಜಯ್ ವೀರಗಾಸೆ ವೇಷದಲ್ಲಿ ಬರುವ ರೌಡಿಗಳನ್ನು ಹೊಡೆಯುವ ದೃಶ್ಯವಿದೆ. ಈ ದೃಶ್ಯ ವೀರಗಾಸೆಯವರಿಗೆ ಮಾಡಿದ ಅಪಮಾನ ಎಂದು ಕೆಲವರು ಹುಲ್ಲೆಬ್ಬಿಸಿದ್ದಾರೆ. ಆ ದೃಶ್ಯದ ಬಗ್ಗೆ ನಟ ಧನಂಜಯ್ ಸ್ಪಷ್ಟನೆ ನೀಡಿದ್ದಾಗಿಯೂ ಕೆಲವು ಹಿಂದೂ ಪರ ಸಂಘಟನೆಯವರು ದೂರು ನೀಡಿದ್ದಾರೆ. ಧನಂಜಯ್‌ ಮೇಲೆ ಆಗುತ್ತಿರುವ ಈ ಅಟ್ಯಾಕ್‌ನಿಂದಾಗಿ ಅವರ ಪರವಾಗಿ ನಿಲ್ಲುವವರ ಸಂಖ್ಯೆಯೂ ಹೆಚ್ಚಾಗುತ್ತಾ ಸಾಗುತ್ತಿದೆ.

    English summary
    People booking tickets for Head Bush movie and giving away the QR code for free to support Dhananjay
    Thursday, October 27, 2022, 15:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X