Don't Miss!
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- News
ಬೊಮ್ಮಾಯಿ ಎಂದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಸಿಎಂ!
- Lifestyle
ದಕ್ಷಿಣ ಧ್ರುವಕ್ಕೆ ಯಾತ್ರೆ ಮಾಡಿ ಸಾಧನೆ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Sports
BGT 2023: ಭಾರತದ ಸ್ಪಿನ್ ದಾಳಿ ಭಯ: ಆಸ್ಟ್ರೇಲಿಯಾ ಆಟಗಾರರು ಮಾಡ್ತಿರೋದೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕಾಂತಾರ', 'RRR'ಗಳನ್ನು ತಪ್ಪು ಕಾರಣಗಳಿಗೆ ಜನ ಹೊಗಳುತ್ತಿದ್ದಾರೆ: ನಿರ್ದೇಶಕ ನಟೇಶ್ ಹೆಗ್ಡೆ
'ಕಾಂತಾರ', 'RRR' ಸೇರಿದಂತೆ ಹಲವು ಸಿನಿಮಾಗಳನ್ನು ತಪ್ಪು ಕಾರಣಕ್ಕೆ ಜನ ಹೊಗಳುವುದು, ತೆಗಳುವುದು ಮಾಡುತ್ತಿದ್ದಾರೆ ಎಂದು ಉದಯೋನ್ಮುಖ ಸಿನಿಮಾ ನಿರ್ದೇಶಕ ನಟೇಶ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಲಿಟ್‌ರೇಚರ್ ಫೆಸ್ಟ್‌ನಲ್ಲಿ 'ಬಾಲಿ-ಮಾಲಿ-ಕಾಲಿ-ಟಾಲಿ-ಸ್ಯಾಂಡಲ್‌ವುಡ್' ಗೋಷ್ಠಿಯಲ್ಲಿ ಭಾಗವಹಿಸಿದ್ದ ನಟೇಶ್, ಪ್ರೇಕ್ಷಕನ ಮನಸ್ಥಿತಿ ಹಾಗೂ ಅದು ಬದಲಾಗಬೇಕಿರುವ ರೀತಿಯ ಬಗ್ಗೆ ಮಾತನಾಡಿದ್ದಾರೆ.
''ಕಾಂತಾರ' ಸಿನಿಮಾದಲ್ಲಿ ದಲಿತನೊಬ್ಬ ಮೇಲುಜಾತಿಯವ ಮನೆಗೆ ಹೋಗಿ ಆತನ ಊಟದ ಟೇಬಲ್ ಮೇಲೆ ಸಮಾನಾಂತರವಾಗಿ ಕೂತು ಊಟ ಮಾಡುವ ದೃಶ್ಯವಿದೆ. ಆ ದೃಶ್ಯದ ಬಗ್ಗೆ ಚರ್ಚೆ ಆಗಬೇಕು, ಆ ಬಗ್ಗೆ ಮಾತನಾಡುವವರನ್ನು ಹುಡುಕಬೇಕು. ಆದರೆ ಜನ ನಾಯಕ ಪಾತ್ರ ಕಿರುಚುವುದನ್ನು ಕಂಡು ರೋಮಾಂಚಿತರಾಗುತ್ತಿದ್ದಾರೆ'' ಎಂದಿದ್ದಾರೆ ನಟೇಶ್ ಹೆಗ್ಡೆ.

'RRR' ಬಗ್ಗೆಯೂ ಮಾತು
ತೆಲುಗಿನ ಸೂಪರ್ ಹಿಟ್ ಸಿನಿಮಾ 'RRR' ಬಗ್ಗೆಯೂ ಮಾತನಾಡಿರುವ ನಟೇಶ್ ಹೆಗ್ಡೆ, ''RRR' ಸಿನಿಮಾದಲ್ಲಿ ಸಹ ನಾಯಕ ಕಾಡು ಪ್ರಾಣಿಗಳೊಟ್ಟಿಗೆ ಜಂಪ್ ಮಾಡುವುದು ಸೇರಿದಂತೆ ಹಲವು ಬಾಲಿಷ ದೃಶ್ಯಗಳನ್ನು ಜನರು ರೋಮಾಂಚಿತಗೊಳ್ಳುತ್ತಿದ್ದಾರೆ. ಈ ಮನಸ್ಥಿತಿಯಿಂದ ಪ್ರೇಕ್ಷಕ ಹೊರಗೆ ಬರಬೇಕು'' ಎಂದಿದ್ದಾರೆ.

ಅಂತರಾಷ್ಟ್ರೀಯ ಪ್ರಶಸ್ತಿಗಳ ಗೆದ್ದಿರುವ 'ಪೆದ್ರೊ'
ಅಂದಹಾಗೆ, ನಟೇಶ್ ಹೆಗ್ಡೆ ನಿರ್ದೇಶಿಸಿರುವ ಸಿನಿಮಾಕ್ಕೆ ಬಂಡವಾಳ ಹೂಡಿರುವುದು 'ಕಾಂತಾರ'ದ ನಟ ನಿರ್ದೇಶಕ ರಿಷಬ್ ಶೆಟ್ಟಿಯವರೇ. ನಟೇಶ್ ಹೆಗ್ಡೆ ನಿರ್ದೇಶಿಸಿದ್ದ ಕಿರುಚಿತ್ರ ಹಲವು ಕಿರುಚಿತ್ರ ಸ್ಪರ್ಧೆಗಳಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ಅದೆ ಕಾರಣಕ್ಕೆ ರಾಜ್ ಬಿ ಶೆಟ್ಟಿ, ನಟೇಶ್ ಅವರನ್ನು ಗುರುತಿಸಿ ಅವಕಾಶ ದೊರೆಯುವಂತೆ ಮಾಡಿದರು. ನಟೇಶ್ ನಿರ್ದೇಶಿಸಿದ 'ಪೆದ್ರೊ' ಸಿನಿಮಾಕ್ಕೆ ರಿಷಬ್ ಶೆಟ್ಟಿ ಬಂಡವಾಳ ಹೂಡಿದರು. ಆ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ ಸಹ.

'ವಾಘಾಚಿ ಪಾಣಿ'ಗೂ ರಿಷಬ್ ಶೆಟ್ಟಿ ಬಂಡವಾಳ
'ಪೆದ್ರೊ' ಸಿನಿಮಾವು ಹಲವು ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಂಸೆಗೂ ಪಾತ್ರವಾಗಿದೆ. ಇದೀಗ ನಟೇಶ್ ಹೆಗ್ಡೆ 'ವಾಘಾಚಿ ಪಾಣಿ' ಹೆಸರಿನ ಸಿನಿಮಾ ನಿರ್ದೇಶನ ಮಾಡುವವರಿದ್ದಾರೆ. ಈ ಸಿನಿಮಾಕ್ಕೂ ಸಹ ರಿಷಬ್ ಶೆಟ್ಟಿಯವರೇ ಬಂಡವಾಳ ಹೂಡುತ್ತಿದ್ದಾರೆ. 'ಪೆದ್ರೊ' ಸಿನಿಮಾಕ್ಕೂ ಮುನ್ನ ನಟೇಶ್ ಹೆಗ್ಡೆ 'ಕುರ್ಲಿ' ಹೆಸರಿನ ಕಿರು ಚಿತ್ರ ನಿರ್ದೇಶನ ಮಾಡಿದ್ದರು.

ಬಾಲಿವುಡ್‌ಗೆ ಪ್ರತಿಯಾಗಿ ಸಿನಿಮಾಗಳು
ಇದೇ ಸಂವಾದದಲ್ಲಿ ಮಾತನಾಡಿದ ಮಲಯಾಳಂ ಸಿನಿಮಾ ನಿರ್ದೇಶಕ ಕಮಲ್, ''1990 ರಲ್ಲಿ ಜಾಗತಿಕ ಆರ್ಥಿಕತೆಯಿಂದ ಬಾಲಿವುಡ್ ಬದಲಾಯ್ತು. ಮದುವೆ ಸಂಪ್ರದಾಯವೆಲ್ಲ ಸಿನಿಮಾ ವಸ್ತುವಾಗತೊಡಗಿತು. ಹಿಂದೂ ಆಚರಣೆಗಳನ್ನು ತೋರುತ್ತಾ ತೋರುತ್ತಾ ಕೊನೆಗೆ ನಾಯಕ ಪ್ರಧಾನ್ಯತೆ ಕಡೆಗೆ ಹೊರಳಲಾಯ್ತು. ಕೊನೆಗೆ ರಾಷ್ಟ್ರೀಯತೆಯ ಅತಿಯಾದ ತೋರುವಿಕೆ ಪ್ರಾರಂಭವಾಯಿತು. ಅದಕ್ಕೆ ವಿರುದ್ಧವಾಗಿ ಕತೆ ಹೆಣೆದ ಪ್ರಾದೇಶಿಕ ಸಿನಿಮಾಗಳು ಗೆಲ್ಲತೊಡಗಿದವು. ತೆಲುಗಿನಲ್ಲಿ ತನ್ನದೇ ಮಾದರಿಯ ಫ್ಯಾಂಟಸಿ ಸಿನಿಮಗಳು ಸಹ ಬಂದವು'' ಎಂದಿದ್ದಾರೆ.