»   » 'ಬಾಹುಬಲಿ' ಚೆನ್ನಾಗಿಲ್ಲ ಅಂದ್ರೆ ಮನೋವೈದ್ಯರ ಸಹಾಯ ಅಗತ್ಯ: ವರ್ಮಾ

'ಬಾಹುಬಲಿ' ಚೆನ್ನಾಗಿಲ್ಲ ಅಂದ್ರೆ ಮನೋವೈದ್ಯರ ಸಹಾಯ ಅಗತ್ಯ: ವರ್ಮಾ

Posted By:
Subscribe to Filmibeat Kannada

ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಾಲಿವುಡ್ ನಲ್ಲಿ ಸತತ ಸೋಲುಗಳನ್ನು ಕಂಡಿದ್ದು, ಪ್ರಸ್ತುತ ಅವರ ನಿರ್ದೆಶನದ 'ಸರ್ಕಾರ್ 3' ಸಿನಿಮಾ ಮೇ 12 ರಂದು ಭಾರತದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ವರ್ಮಾ ಸದ್ಯದಲ್ಲಿ ಅಮಿತಾಬ್ ಬಚ್ಚನ್ ಅಭಿನಯದ 'ಸರ್ಕಾರ್ 3' ಪ್ರಮೋಷನ್ ಗಾಗಿ ಮಾತಾಡಬೇಕು. ಆದರೆ ಆ ಚಿತ್ರದ ಬಗ್ಗೆ ಅವರು ಮಾತನಾಡಿರುವ ಯಾವುದೇ ವಿಷಯಗಳು ಸೌಂಡ್ ಮಾಡಿಲ್ಲ.

ಯಾಕಂದ್ರೆ ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುವ ರಾಮ್ ಗೋಪಾಲ್ ವರ್ಮಾ ಈಗ 'ಬಾಹುಬಲಿ 2' ಚಿತ್ರಕ್ಕೆ ಸಂಬಂಧ ಪಟ್ಟಂತೆ ಹೇಳಿಕೆಯೊಂದನ್ನು ನೀಡಿ ಸುದ್ದಿಯಲ್ಲಿದ್ದಾರೆ.

People who disliked Baahubali 2 need psychiatric help: Ram Gopal Varma

ವರ್ಮಾ ರವರು ಮೊನ್ನೆಯಷ್ಟೇ ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿ ಹೊಗಳಿಕೆ ಭರಾಟೆಯಲ್ಲಿ, " 'ಬಾಹುಬಲಿ 2' ಚಿತ್ರವನ್ನು ಇಷ್ಟಪಡದವರ ಬಗ್ಗೆ ದುಃಖವಾಗುತ್ತದೆ. ಅವರು ಯಾರೇ ಆಗಿದ್ದರೂ ಅವರಿಗೆ ಮನೋವೈದ್ಯರ ಸಹಾಯ ಬೇಕಾಗುತ್ತದೆ. ವೈದ್ಯರ ಬಿಲ್ಲನ್ನು ಪಾವತಿಸುವಂತೆ ನಾನು ಬಾಹುಬಲಿ ನಿರ್ಮಾಪಕ ಶೋಬು ಯಾರ್ಲಗಡ್ಡ ಅವರಲ್ಲಿ ರಿಕ್ವೆಸ್ಟ್ ಮಾಡುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ. ಇವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲೀಗ ಚರ್ಚೆಗೆ ಗ್ರಾಸವಾಗಿದೆ.

ಅಲ್ಲದೇ 'ಬಾಹುಬಲಿ 2' ಸಿನಿಮಾದಿಂದ ಬಾಲಿವುಡ್ ಚಿತ್ರರಂಗದ ಮೇಲೆ ಗಂಭೀರ ಪರಿಣಾಮ ಬೀರಿಗೆ. ಕಾರಣ ಪ್ರತಿಯೊಬ್ಬ ಸೂಪರ್ ಡೈರೆಕ್ಟರ್ ಮತ್ತು ಸೂಪರ್ ಸ್ಟಾರ್ ತಮ್ಮ ಮುಂದಿನ ಬ್ಲಾಕ್ ಬಾಸ್ಟರ್ ಸಿನಿಮಾಗೆ 'ಬಾಹುಬಲಿ 2' ಚಿತ್ರವನ್ನು ರೆಫರ್ ಮಾಡಬೇಕಾಗುತ್ತದೆ ಎಂದಿದ್ದಾರೆ. ಆದ್ದರಿಂದ ಬಿಟೌನ್ ನಲ್ಲಿಯೂ ಇವರ ಟ್ವೀಟ್ ಗಳ ಸುರಿಮಳೆ ಕೆಲವರ ತಲೆಯೊಳಗೆ ಹುಳ ಬಿಟ್ಟಂತಾಗಿದೆ.

People who disliked Baahubali 2 need psychiatric help: Ram Gopal Varma

" 'ಬಾಹುಬಲಿ 2' ಭಾರತದ 'ಅವತಾರ್' ಸಿನಿಮಾ ಇದ್ಹಾಂಗೆ. ಸಮಯ ಮತ್ತು ಹಣದ ದೃಷ್ಟಿ ಎರಡರಿಂದಲೂ, ಜೇಮ್ಸ್ ಕ್ಯಾಮೆರಾನ್ ತಮ್ಮ 'ಅವತಾರ್' ಚಿತ್ರಕ್ಕೆ ಏನು ವ್ಯಯಿಸಿದ್ದಾರೋ, ಎಸ್.ಎಸ್.ರಾಜಮೌಳಿ 'ಬಾಹುಬಲಿ 2' ಚಿತ್ರವನ್ನು ಅದೇ ರೀತಿಯಲ್ಲಿ ನಿರ್ಮಿಸಿದ್ದಾರೆ" ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.[ಕನ್ನಡ ಪ್ರತಿಭೆಗೆ ಮತ್ತೆ ಮಣೆ ಹಾಕಿದ ವರ್ಮಾ]

English summary
Ram Gopal Varma is all praise for Baahubali 2, says it is Indian version of James Cameron’s Avatar. And he tweeted 'People who disliked Baahubali 2 need psychiatric help'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada