For Quick Alerts
  ALLOW NOTIFICATIONS  
  For Daily Alerts

  ಕುಡ್ಲು ಟಾಕೀಸ್‌ನಲ್ಲಿ 'ಪೆಪ್ಪೆರೆರೆ ಪೆರೆರೆರೆ' ತುಳು ಸಿನಿಮಾ ಬಿಡುಗಡೆ

  |

  ನಿಶಾನ್ ವರುಣ್ ಮೂವೀಸ್ ಬ್ಯಾನರ್‌ ನಿರ್ಮಿಸಿರುವ ವಿಜಯ್ ಶೋಭರಾಜ್ ಪಾವೂರು ನಿರ್ದೇಶನದ ಪೆಪ್ಪೆರೆರೆ ಪೆರೆರೆರೆ ತುಳು ಸಿನಿಮಾ ಮಾರ್ಚ್ 7 ರಂದು ನಮ್ಮ ಕುಡ್ಲ ಟಾಕೀಸ್‌ನಲ್ಲಿ ಬಿಡುಗಡೆಯಾಗಿದೆ.

  ಕುಡ್ಲ ಟಾಕೀಸ್‌ನಲ್ಲಿ ಪೆಪ್ಪೆರೆರೆ ಪೆರೆರೆರೆ ಸಿನಿಮಾ ಬಿಡುಗಡೆ ಹಿನ್ನಲೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಆರ್. ಪದ್ಮರಾಜ್ ''ಇಂದಿನ ದಿನಗಳಲ್ಲಿ ಕುಟುಂಬದ ಅಂತರ ಜಾಸ್ತಿಯಾಗುತ್ತಾ ಇದೆ. ಈ ಸಂದರ್ಭದಲ್ಲಿ ಮನೆಯಲ್ಲೇ ಸಿನಿಮಾವನ್ನು ಕುಟುಂಬ ಸಮೇತ ವೀಕ್ಷಿಸುವ ಮೂಲಕ ಎಲ್ಲರೂ ಒಟ್ಟು ಸೇರುತ್ತಾರೆ. ಮನರಂಜನೆಯ ಜತೆಗೆ ಸಮಾಜಕ್ಕೆ ಸಂದೇಶ ಸಾರುವ ಸಿನಿಮಾಗಳಿಂದ ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ'' ಎಂದರು.

  ಸಂದರ್ಶನ: 'ಗೋರಿ'ಯಿಂದ ಬಂದ ಬಂಗಾರಿ ಶ್ವೇತಾ!ಸಂದರ್ಶನ: 'ಗೋರಿ'ಯಿಂದ ಬಂದ ಬಂಗಾರಿ ಶ್ವೇತಾ!

  ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಲನಚಿತ್ರ ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ ''ಪ್ರಸಕ್ತ ತುಳು ಸಿನಿಮಾಗಳಿಗೆ ಥಿಯೇಟರ್‌ನ ಸಮಸ್ಯೆ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ನಮ್ಮ ಕುಡ್ಲ ಟಾಕೀಸ್ ಮೂಲಕ ತುಳು ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ನಿರ್ಮಾಪಕರಲ್ಲಿ ಹೊಸ ಆಶಾಭಾವನೆ ಮೂಡಿದೆ'' ಎಂದರು.

  ಕುಡ್ಲ ಟಾಕೀಸ್‌ನ ಪರಿಕಲ್ಪನೆಯಿಂದ ಸಿನಿಮಾವನ್ನು ಇದೀಗ ಮನೆ ಮನೆಯಲ್ಲಿ ಕುಟುಂಬ ಸಮೇತರಾಗಿ ವೀಕ್ಷಿಸಬಹುದು. ತುಳು ಭಾಷೆಯನ್ನು ಉಳಿಸುವ ಮತ್ತು ತುಳು ಸಿನಿಮಾವನ್ನು ಬೆಳೆಸುವ ನಿಟ್ಟಿನಲ್ಲಿ ಕೇಬಲ್ ಆಪರೇಟರ್‌ಗಳ ಸಹಕಾರ ಅತೀ ಅಗತ್ಯವಾಗಿದೆ. ನಮ್ಮ ಕುಡ್ಲ ಟಾಕೀಸ್ ಮೂಲಕ ಸಿನಿಮಾ ಬಿಡುಗಡೆಯಾಗುವುದರಿಂದ ಹೊಸ ಹೊಸ ನಿರ್ಮಾಪಕರು ಸಿನಿಮಾ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಕಲಾವಿದರಿಗೆ, ತಂತ್ರಜ್ಞರಿಗೆ ಯುವ ಬರಹಗಾರ ಸಾಹಿತಿಗಳಿಗೆ ಈ ಮೂಲಕ ಅವಕಾಶ ದೊರೆಯಲಿದೆ. ನಮ್ಮ ಕುಡ್ಲ ಟಾಕೀಸ್ ಪರಿಕಲ್ಪನೆಯಿಂದ ತುಳು ಚಿತ್ರರಂಗಕ್ಕೆ ವ್ಯಾಕ್ಸಿನ್ ದೊರಕಿದಂತಾಗಿದೆ'' ಎಂದು ದೇವದಾಸ್ ಕಾಪಿಕಾಡ್ ತಿಳಿಸಿದರು.

  ''ನಾವು ಮಾಡಿದ ಕೆಲಸ ಎಲ್ಲರಿಗೂ ಮುಟ್ಟಬೇಕು, ತಲುಪಬೇಕು. ಕಷ್ಟಪಟ್ಟು ಮಾಡಿದ ಸಿನಿಮಾ ಪ್ರೇಕ್ಷಕರಿಗೆ ತಲುಪಿದಾಗ ಮಾಡಿದ ಕೆಲಸದಲ್ಲಿ ಸಾರ್ಥಕತೆ ಲಭಿಸುತ್ತದೆ'' ಎಂದು ಎ2ಎಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ನಿರ್ದೇಶಕ ನಟ ಅರ್ಜುನ್ ಕಾಪಿಕಾಡ್ ತಿಳಿಸಿದರು.

  ಪಂಜಾಬಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಕರಾವಳಿಯ ಬೆಡಗಿಪಂಜಾಬಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಕರಾವಳಿಯ ಬೆಡಗಿ

  ಸಮಾರಂಭದಲ್ಲಿ ಮಾಲ್ನಾಡ್ ಇನ್ಫೋಟೆಕ್‌ನ ಸಿಇಓ ಹರೀಶ್ ಬಿ.ಕರ್ಕೇರ, ಸತ್ಯಜಿತ್ ಸುರತ್ಕಲ್, ವಿಶ್ವಾಸ್‌ದಾಸ್, ಪೆಪ್ಪೆರೆರೆ ಪೆರೆರೆರೆ ಸಿನಿಮಾದ ನಿರ್ಮಾಪಕರಾದ ನಿಶಾನ್ ಕೃಷ್ಣ ಭಂಡಾರಿ, ವರುಣ್ ಸಾಲ್ಯಾನ್, ಕುಸೇಲ್ದರಸೆ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, ಸುರೇಶ್ ಬಿ ಕರ್ಕೇರ, ಮೋಹನ್ ಬಿ ಕರ್ಕೇರ, ಜಗನ್ನಾಥ ಶೆಟ್ಟಿ ಬಾಳ ಮೊದಲಾದವರು ಉಪಸ್ಥಿತರಿದ್ದರು. ಲೀಲಾಕ್ಷ ಬಿ ಕರ್ಕೇರ ಸ್ವಾಗತಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

  Recommended Video

  ದುಡ್ಡಿನ ಹಾರ ನೋಡಿ ಖುಷಿ ಪಟ್ಟ ಸಂತೋಷ್ ಆನಂದ್ ರಾಮ್

  ಪೆಪ್ಪೆರೆರೆ ಪೆರೆರೆರೆ ತುಳು ಚಲನ ಚಿತ್ರವು ಒಂದು ತಿಂಗಳ ಕಾಲ ಪ್ರತೀ ಭಾನುವಾರ ಮಧ್ಯಾಹ್ನ 1.30 ಸಂಜೆ 6, ರಾತ್ರಿ 9 ಗಂಟೆಗೆ ನಮ್ಮ ಕುಡ್ಲ ಟಾಕೀಸ್‌ನಲ್ಲಿ ಪ್ರದರ್ಶನ ಕಾಣಲಿದೆ.

  English summary
  Tulu movie Pepperere Pererere release on march 7th in kudla talkies.
  Sunday, March 7, 2021, 17:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X