For Quick Alerts
  ALLOW NOTIFICATIONS  
  For Daily Alerts

  ರಿಸೆಪ್ಷನ್ ನಲ್ಲಿ ಮಿಂಚಿದ ಚಂದನ್ ಶೆಟ್ಟಿಯ ಮುದ್ದಿನ 'ಆಪಲ್'.!

  |

  'ಬಿಗ್ ಬಾಸ್' ವಿನ್ನರ್, ಕನ್ನಡ ರಾಪರ್ ಚಂದನ್ ಶೆಟ್ಟಿ ಮತ್ತು 'ಗೊಂಬೆ' ನಿವೇದಿತಾ ಗೌಡ ವಿವಾಹ ಮಹೋತ್ಸವ ನಿನ್ನೆಯಷ್ಟೇ ಅದ್ಧೂರಿಯಾಗಿ ಜರುಗಿದ್ದು ನಿಮಗೆಲ್ಲ ಗೊತ್ತೇ ಇದೆ.

  'ರಾಯಲ್' ಥೀಮ್ ನಲ್ಲಿ ನಡೆದ ರಿಸೆಪ್ಷನ್ ನಲ್ಲಿ ವರ ಚಂದನ್ ಶೆಟ್ಟಿ ಮತ್ತು ವಧು ನಿವೇದಿತಾ ಸ್ಪೆಷಲ್ ಆಗಿ ಡಿಸೈನ್ ಮಾಡಿಸಿದ್ದ ಔಟ್ ಫಿಟ್ ಗಳನ್ನು ಧರಿಸಿ ಕಂಗೊಳಿಸಿದ್ದನ್ನ ನೀವೆಲ್ಲ ಕಣ್ತುಂಬಿಕೊಂಡಿದ್ದೀರಾ. ಇದೇ ಆರತಕ್ಷತೆಯಲ್ಲಿ 'ಆಪಲ್' ಕೂಡ ಮಿರಿ ಮಿರಿ ಮಿಂಚಿತ್ತು.

  ಏನಿದು 'ಆಪಲ್' ಅಂತ ಯೋಚನೆ ಮಾಡುತ್ತಿದ್ದೀರಾ.? ಚಂದನ್ ಶೆಟ್ಟಿಯ ಮುದ್ದಿನ ನಾಯಿ ಮರಿ ಹೆಸರು 'ಆಪಲ್'. 'ಬಿಗ್ ಬಾಸ್' ವಿನ್ನರ್ ಟ್ರೋಫಿ ಹಿಡಿದು ಮನೆಗೆ ಬಂದಾಗ ತಂದೆ-ತಾಯಿ ಚಂದನ್ ಶೆಟ್ಟಿ ಕೈಗೆ 'ಆಪಲ್'ನ ಕೊಟ್ಟು ಸರ್ ಪ್ರೈಸ್ ನೀಡಿದ್ದರು. ಇದೇ 'ಆಪಲ್' ನಿನ್ನೆ-ಮೊನ್ನೆ ಮದುವೆ ಮಂಟಪದ ತುಂಬೆಲ್ಲಾ ಓಡಾಡಿಕೊಂಡು ಒಡೆಯ ಚಂದನ್ ಶೆಟ್ಟಿ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿತ್ತು.

  ಫೋಟೋ ಆಲ್ಬಂ: ತಾರೆಗಳ ತೋಟದಲ್ಲಿ 'ಚಂದನ'ದ 'ಗೊಂಬೆ'ಯ ಕಲರ್ ಫುಲ್ ರಿಸೆಪ್ಷನ್

  ಆರತಕ್ಷತೆಯಲ್ಲಿ ಫ್ಯಾಮಿಲಿ ಫೋಟೋ ಕ್ಲಿಕ್ ಮಾಡುವ ಸಂದರ್ಭ ಬಂದಾಗಲೂ ಚಂದನ್ ಶೆಟ್ಟಿ ಕುಟುಂಬದ ಸದಸ್ಯನಾಗಿ 'ಆಪಲ್' ಇತ್ತು.

  ರಿಸೆಪ್ಷನ್ ನಲ್ಲಿ ಕ್ಯಾಮರಾ ಕಂಗಳಲ್ಲಿ ಸೆರೆಯಾದ ಚಂದನ್ ಶೆಟ್ಟಿಯ ಫ್ಯಾಮಿಲಿ ಫೋಟೋದಲ್ಲಿ ಚಂದನ್ ಶೆಟ್ಟಿ ತಂದೆ ಪರಮೇಶ್ ಶೆಟ್ಟಿ, ತಾಯಿ ಪ್ರೇಮ ಶೆಟ್ಟಿ, ಸಹೋದರ ಪುನೀತ್ ರಾಜ್ ಶೆಟ್ಟಿ ಮತ್ತು ಮುದ್ದಿನ ನಾಯಿ ಮರಿ ಆಪಲ್ ನ ನೀವು ಕಾಣಬಹುದು.

  ಚಂದನ್ ಶೆಟ್ಟಿ ಪ್ರಾಣಿ ಪ್ರಿಯ. ನಾಯಿ ಮತ್ತು ಪಕ್ಷಿಗಳು ಅಂದ್ರೆ ಚಂದನ್ ಶೆಟ್ಟಿಗೆ ಸಿಕ್ಕಾಪಟ್ಟೆ ಇಷ್ಟ. ಹೀಗಾಗಿ 'ಬಿಗ್ ಬಾಸ್' ಮನೆಯಿಂದ ವಿಜೇತನಾಗಿ ಹೊರಬಂದ ಚಂದನ್ ಶೆಟ್ಟಿಗೆ ಪೋಷಕರು ಶಿಟ್ಝು ತಳಿಯ ನಾಯಿ ಮರಿಯನ್ನು ಉಡುಗೊರೆಯಾಗಿ ನೀಡಿದ್ದರು. ಅದಕ್ಕೆ 'ಆಪಲ್' ಅಂತ ನಾಮಕರಣ ಮಾಡಲಾಗಿತ್ತು.

  English summary
  Have a look at Pet Apple in Chandan Shetty-Niveditha Gowda's wedding reception.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X