For Quick Alerts
  ALLOW NOTIFICATIONS  
  For Daily Alerts

  'ಪೇಟಾ' ಸುದ್ದಿಗೋಷ್ಠಿಯಲ್ಲಿ ಸುದೀಪ್-ಕಾರ್ತಿಕ್ ಬಗ್ಗೆ ಸರ್ಪ್ರೈಸ್ ಕೊಟ್ಟ ಜಾಕ್ ಮಂಜು

  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಪೇಟಾ' ಸಿನಿಮಾ ಇದೇ ವಾರ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಕಾರ್ತಿಕ್ ಸುಬ್ಬರಾಜು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಜನಿಯ ಕಂಬ್ಯಾಕ್ ಸಿನಿಮಾ ಇದಾಗಲಿದೆಯಂತೆ.

  ಎಲ್ಲ ಅಂದುಕೊಂಡಂತೆ ಆದ್ರೆ, ಪೇಟಾ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಮತ್ತು ಸುದೀಪ್ ಕಾಂಬಿನೇಷನ್ ನಲ್ಲಿ ಸಿನಿಮಾ ಬರಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಕನ್ನಡದ ವಿತರಕ ಜಾಕ್ ಮಂಜು.

  ಹೇಗಿರುತ್ತೆ ಸುದೀಪ್ - ಅನೂಪ್ ಜೋಡಿಯ ಸಿನಿಮಾ?

  ಹೌದು, ಪೇಟಾ ಚಿತ್ರವನ್ನ ಕರ್ನಾಟಕದಲ್ಲಿ ವಿತರಕ ಜಾಕ್ ಮಂಜು ಮತ್ತು ಸೈಯದ್ ಸಲಾಂ ವಿತರಣೆ ಮಾಡ್ತಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪೇಟಾ ನಿರ್ದೇಶಕ ಮತ್ತು ಜಾಕ್ ಮಂಜು ಈ ಬಗ್ಗೆ ಸುಳಿವು ನೀಡಿದ್ದಾರೆ. ಮುಂದೆ ಓದಿ....

  ಕಥೆ ಮಾಡಿಸುವ ಆಸೆ

  ಕಥೆ ಮಾಡಿಸುವ ಆಸೆ

  ''ಕಾರ್ತಿಕ್ ಸುಬ್ಬರಾಜು ನಿರ್ದೇಶನದಲ್ಲಿ ನನಗೆ ನಂಬಿಕೆ ಇದೆ. ಅವರ ಚಿತ್ರಗಳನ್ನ ನೋಡಿದ್ದೇನೆ. ಕಾರ್ತಿಕ್ ಸುಬ್ಬರಾಜು ಮತ್ತು ಸುದೀಪ್ ಜೋಡಿಯಲ್ಲಿ ಒಂದು ಕಥೆ ಮಾಡಿ, ಸಿನಿಮಾ ಮಾಡ್ಬೇಕು ಎಂಬ ಆಸೆ ಇದೆ. ಅದು ಪ್ರಗತಿಯಲ್ಲಿದೆ, ನೋಡೋಣ'' ಎಂದು ಜಾಕ್ ಮಂಜು ತಿಳಿಸಿದರು.

  'ಅರ್ಜುನ'ನಿಗೆ ಕೃಷ್ಣನ ದಾರಿ : ಜನ್ಯಗೆ ಜೀವ ನೀಡಿದ್ದ ಸುದೀಪ್

  ಕಾರ್ತಿಕ್ ಚಿತ್ರಗಳು ಕನ್ನಡದಲ್ಲಿ ರೀಮೇಕ್ ಆಗಿದೆ

  ಕಾರ್ತಿಕ್ ಚಿತ್ರಗಳು ಕನ್ನಡದಲ್ಲಿ ರೀಮೇಕ್ ಆಗಿದೆ

  ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಫಿಜಾ, ಜಿಗರ್ ಥಂಡಾ ಚಿತ್ರಗಳು ಕನ್ನಡದಲ್ಲಿ ರೀಮೇಕ್ ಆಗಿ, ಸಕ್ಸಸ್ ಕಂಡಿದೆ. ಈ ಚಿತ್ರಗಳನ್ನ ವಿತರಣೆ ಮಾಡಿದ್ದು ಕೂಡ ಇದೇ ಜಾಕ್ ಮಂಜು. ಹಾಗಾಗಿ, ವಿತರಕ ಮಂಜು ಅವರಿಗೆ ಕಾರ್ತಿಕ್ ಮೇಲೆ ನಂಬಿಕೆ ಇದೆ.

  ವಿಘ್ನಗಳನ್ನ ದಾಟಿ '50' ಮುಟ್ಟಿದ 'ದಿ ವಿಲನ್': ಸಂತಸದಲ್ಲೂ ಯಾಕೆ ಈ ನಿರ್ಲಕ್ಷ್ಯ.?

  ಮೊದಲ ಸಲ ವಿತರಣೆ

  ಮೊದಲ ಸಲ ವಿತರಣೆ

  ಜಾಕ್ ಮಂಜು ಇಷ್ಟು ದಿನ ಕನ್ನಡ ಸಿನಿಮಾಗಳನ್ನ ಮಾತ್ರ ವಿತರಣೆ ಮಾಡ್ತಿದ್ರು. ಇದೇ ಮೊದಲ ಬಾರಿಗೆ ಮೈಸೂರು ಟಾಕೀಸ್ ಮೂಲಕ ಪರಭಾಷೆ ಚಿತ್ರವೊಂದನ್ನ ಕರ್ನಾಟಕದಲ್ಲಿ ವಿತರಣೆ ಮಾಡ್ತಿದ್ದಾರೆ. ಅದು ರಜನಿಕಾಂತ್ ಸಿನಿಮಾ ಎನ್ನುವುದು ವಿಶೇಷ.

  ಸುದೀಪ್ ಆಪ್ತ ಜಾಕ್ ಮಂಜು

  ಸುದೀಪ್ ಆಪ್ತ ಜಾಕ್ ಮಂಜು

  ಅಂದ್ಹಾಗೆ, ಜಾಕ್ ಮಂಜು ಅವರು ಸುದೀಪ್ ಅವರ ಆಪ್ತ ವ್ಯಕ್ತಿ. ಬಹುತೇಕ ಸುದೀಪ್ ಸಿನಿಮಾಗಳಲ್ಲಿ ಜಾಕ್ ಮಂಜು ನಿರ್ಮಾಪಕರಾಗಿ, ವಿತರಕರಾಗಿ ಕೆಲಸ ಮಾಡ್ತಾರೆ. ಹಾಗಾಗಿ, ಸುದೀಪ್ ಗೆ ಕಾರ್ತಿಕ್ ಜೋಡಿಯಲ್ಲಿ ಸಿನಿಮಾ ಮಾಡುವ ಪ್ಲಾನ್ ಮಾಡ್ತಿದ್ದಾರೆ. ಬಹುಶಃ ಕಥೆ ಓಕೆ ಆದ್ರೆ, ಖಂಡಿತಾ ಈ ಸಿನಿಮಾ ಬರೋದು ಪಕ್ಕಾ.

  English summary
  Distributor Jack manju have planning to do movie with petta director karthik subbaraj and sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X