»   » ಕೊಚಾಡಿಯನ್ ರಜನಿ ಹೊಸ ಲುಕ್

ಕೊಚಾಡಿಯನ್ ರಜನಿ ಹೊಸ ಲುಕ್

Posted By:
Subscribe to Filmibeat Kannada

ಯಾಕೋ ಸೂಪರ್ ಸ್ಟಾರ್ ರಜನಿಕಾಂತ್ ಅವರ ಕೊಚಾಡಿಯನ್ ಚಿತ್ರಕ್ಕೆ ಕುಂಬಳಕಾಯಿ ಒಡೆದ ಟೈಂ ಸರಿಯಿಲ್ಲ ಎಂದು ಕಾಣುತ್ತದೆ. 2012ರಲ್ಲೇ ರಜನಿ ಅವರ ಮಹೋನ್ನತ ಚಿತ್ರ ಎಂದು ಹೇಳಿಕೊಂಡು ಹೊರ ಬಿದ್ದಿದ್ದ ಚಿತ್ರದ ಪೋಸ್ಟರ್ ಗಳು ಈಗ ಧೂಳು ಹಿಡಿದಿವೆ.ಆದರೆ, ಸೂಪರ್ ಸ್ಟಾಟ್ ರಜನಿ ಅವರನ್ನು ಹೊಸ ಗೆಟಪ್, ಲುಕ್ ನಲ್ಲಿ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು

ರಜನಿ ಅವರ ಹೊಸ ಅವತಾರಕ್ಕೆ ಮತ್ತೊಮ್ಮೆ ಹೊಸ ಸ್ಪರ್ಶ ನೀಡಲಾಗಿದ್ದು ಹೊಸ ಹೊಸ ಪೋಸ್ಟರ್ ಗಳನ್ನು ಹೊರ ಹಾಕುವ ಮೂಲಕ ನಿರ್ದೇಶಕಿ ಸೌಂದರ್ಯ ಅಶ್ವಿನ್ ತಮ್ಮ ಹೊಸ ಪ್ರಯತ್ನವನ್ನು ಜೀವಂತ ಇರಿಸಿಕೊಂಡಿದ್ದಾರೆ.

ರಜನಿಕಾಂತ್ ಅವರ ಪುತ್ರಿ ಸೌಂದರ್ಯ ಅವರು ಕಳೆದ ವಾರ ಸುದ್ದಿಗೋಷ್ಠಿ ನಡೆಸಿ ಈ ವಾರ ಹೊಸ ಹೊಸ ಪೋಸ್ಟರ್ ಗಳನ್ನು ಹೊರ ಬಿಡುತ್ತೇವೆ ಎಂದಿದ್ದರು. ಅದರಂತೆ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಪೋಸ್ಟರ್ ಗಳು ದಾಳಿ ಇಟ್ಟಿವೆ.

"A still from Kochadaiyaan :)," ಎಂದು ಟ್ವೀಟ್ ಮಾಡಿರುವ ಸೌಂದರ್ಯ ಇಷ್ಟರಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುವುದಾಗಿ ಹೇಳಿದ್ದಾರೆ. ಅದ್ಭುತ ಅನಿಮೇಷನ್ ತಂತ್ರಜ್ಞಾನವುಳ್ಳ ಕೊಚಾಡಿಯನ್ ಚಿತ್ರದ ಹೊಸ ಪೋಸ್ಟರ್ ಹೇಗಿದೆ? ಚಿತ್ರದ ಬಗ್ಗೆ ಯಾಕಿಷ್ಟು ನಿರೀಕ್ಷೆ? ಮುಂದಿನ ಚಿತ್ರ ಸರಣಿಯಲ್ಲಿ ನೋಡಿ

ರಜನಿ ಕೊಚಾಡಿಯನ್ ಪೋಸ್ಟರ್

ಟ್ವಿಟ್ಟರ್ ನಿಂದ ಹೊರಬಿದ್ದ ರಜನಿಕಾಂತ್ ಅಭಿನಯದ ಕೊಚಾಡಿಯನ್ ಪೋಸ್ಟರ್. ಇದೊಂದು ಐತಿಹಾಸಿಕ ಚಿತ್ರವಾಗಿದೆ.

ಪಾಂಡ್ಯ ಅರಸು ಕೊಚಾಡಿಯನ್ ರಣಧೀರನ್ ಸಾಹಸದ ಕಥೆ. ಚಿತ್ರದಲ್ಲಿ ರಜನಿ ಜೊತೆಗೆ ದೀಪಿಕಾ ಪಡುಕೋಣೆ, ಜಾಕಿ ಶ್ರಾಫ್, ಶರತ್ ಕುಮಾರ್, ಶೋಭನಾ, ಆದಿ ಹಾಗೂ ಇನ್ನಿತರ ಕಲಾವಿದರಿದ್ದಾರೆ.

ರಜನಿ ಕೊಚಾಡಿಯನ್ ಪೋಸ್ಟರ್

ಟಿನ್ ಟಿನ್ ಹಾಗೂ ಅವತಾರ್ ಮಾದರಿಯಲ್ಲಿ ತಯಾರಾಗಿರುವ ಚಿತ್ರಕ್ಕೆ ಹಾಲಿವುಡ್ ನ ನುರಿತ ತಂತ್ರಜ್ಞರು ಕೆಲಸ ಮಾಡಿದ್ದಾರೆ.

ರಜನಿ ಕೊಚಾಡಿಯನ್ ಪೋಸ್ಟರ್

ಚಿತ್ರ ಸದ್ಯಕ್ಕೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ರಜನಿಕಾಂತ್ ಕೂಡಾ ತಮ್ಮ ಡಬ್ಬಿಂಗ್ ಕಾರ್ಯ ಮುಗಿಸಿದ್ದಾರೆ.

ರಜನಿ ಕೊಚಾಡಿಯನ್ ಪೋಸ್ಟರ್

ಆಸ್ಕರ್ ಪ್ರಶಸ್ತಿ ವಿಜೇತ ರಸೂಲ್ ಪೂಕುಟ್ಟಿ ಜೊತೆ ರಜನಿಕಾಂತ್.

ಕೊಚಾಡಿಯನ್ ಚಿತ್ರಕ್ಕೆ ಎರೋಸ್ ಇಂಟರ್ ನ್ಯಾಷನಲ್ ಹಾಗೂ ಮೀಡಿಯಾ ಒನ್ ಗ್ಲೋಬಲ್ ಎಂಟರ್ ಟೈನ್ಮೆಂಟ್ ಜಂಟಿಯಾಗಿ ನಿರ್ಮಾಪಕರಾಗಿದ್ದಾರೆ. ಆಸ್ಕರ್ ವಿಜೇತ ಎ.ಆರ್ ರೆಹಮಾನ್ ಸಂಗೀತ, ರಾಜೀವ್ ಮೆನನ್ ಛಾಯಾಗ್ರಹಣ ಇದೆ. ತಮಿಳು, ತೆಲುಗು, ಮಲೆಯಾಳಂ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ರಜನಿ ಕೊಚಾಡಿಯನ್ ಪೋಸ್ಟರ್

ಕೊಚಾಡಿಯನ್ ಚಿತ್ರತಂಡ ಜೊತೆ ರಜನಿಕಾಂತ್
ಕೇನ್ಸ್ ಫಿಲಂ ಫೆಸ್ಟಿವಲ್ ನಲ್ಲಿ ಮೇ 15 ರಿಂದ 26 ರೊಳಗೆ ಈ ಚಿತ್ರದ ಬಹು ನಿರೀಕ್ಷಿತ ಟ್ರೇಲರ್ ಅನ್ನು ಲೋಕಾರ್ಪಣೆ ಮಾಡಲಾಗುತ್ತದೆ.

English summary
The first look and posters of Kochadaiyaan were released when the film was announced last year (2012). The pictures of Rajinikanth had garnered a lot of attention from media and public as the superstar was seen in never-before avatars. Now, after a long gap, the makers of the forthcoming movie have released the latest still from the flick.
Please Wait while comments are loading...