For Quick Alerts
ALLOW NOTIFICATIONS  
For Daily Alerts

  ಕಾಲಿವುಡ್ ನಲ್ಲಿ ಅರಳುತ್ತಿರುವ ಚಂದನವನದ ಬೆಡಗಿಯರು

  By ಜೇಮ್ಸ್ ಮಾರ್ಟಿನ್
  |

  ಕಿಚ್ಚ ಸುದೀಪ ಅವರು ನಟಿಸಿ, ನಿರ್ದೇಶಿಸಿದ 'ಮಾಣಿಕ್ಯ' ಚಿತ್ರದಲ್ಲಿ 'ಮಾನಸ' ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಚಿಕ್ಕಮಗಳೂರಿನ ಬೆಡಗಿ ರನ್ಯಾ ರಾವ್ ಈಗ ಕಾಲಿವುಡ್ ಸೇರಿದ್ದಾರೆ. ತಮಿಳು ಚಿತ್ರರಂಗದಲ್ಲಿ ಸದ್ಯಕ್ಕೆ ನಾಯಕಿಯರ ಕೊರತೆ ಇದೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

  ಕಾಲಿವುಡ್ ಮಂದಿ ಈಗ ಹಿಂದಿ, ಮಲೆಯಾಳಮ್ ಚಿತ್ರರಂಗದಿಂದ ನಾಯಕಿಯರನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಆಗಾಗ ಕನ್ನಡದ ಬೆಡಗಿಯರು ತಮಿಳು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಚಿಕ್ಕಮಗಳೂರಿನ ಬೆಡಗಿಯರ ಪೈಕಿ ತಮಿಳುನಾಡಿಗೆ ವಲಸೆ ಹೋಗುತ್ತಿರುವವರಲ್ಲಿ ರನ್ಯಾ ಎರಡನೆಯವರು.[ಅವಕಾಶ ಸಿಗದವರಲ್ಲ, ಇವರು ಅವಕಾಶ' ಕೊಡದವರು!]

  ರನ್ಯಾ ಮುನ್ನ ದೀಪಾ ಸನ್ನಿಧಿ ಅವರು ಈಗಾಗಲೇ ಸಿದ್ದಾರ್ಥ್ ಜತೆಯಲ್ಲಿ 'ಎನಕ್ಕುಲ್ ಒರುವನ್' (ಲೂಸಿಯಾ ರಿಮೇಕ್) ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ರನ್ಯಾ ಅವರು ವೆಂಕಟ್ ಪ್ರಭು ಅವರ 'ವಾಘಾ' ಚಿತ್ರದಲ್ಲಿ ವಿಕ್ರಮ್ ಪ್ರಭು (ಶಿವಾಜಿ ಪ್ರಭು ಅವರ ಪುತ್ರ) ಅವರ ಜೊತೆ ನಟಿಸುತ್ತಿದ್ದಾರೆ. ಇವರಿಬ್ಬರಲ್ಲದೆ ಈ ಪಟ್ಟಿಗೆ ಬೆಂಗಳೂರು ಬೆಡಗಿ ಕೃತಿ ಕರಬಂದ ಕೂಡಾ ಸೇರಿದ್ದು, ಜಿವಿ ಪ್ರಕಾಶ್ ಅವರ 'ಬ್ರೂಸ್ ಲೀ' ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.[ಗಾಸಿಪ್ ಗಳಿಗೆಲ್ಲ ಕ್ಯಾರೆ ಅನ್ನದ ದೀಪಾ ಸನ್ನಿಧಿ]

  ಆಡಿಷನ್ ಮೂಲಕವೇ ನನ್ನ ಆಯ್ಕೆಯಾಗಿದೆ. ನನ್ನ ಫೋಟೋಶೂಟ್, ಡೈಲಾಗ್ ಡೆಲಿವರಿ ನೋಡಿ ಮೆಚ್ಚಿದ ನಿರ್ದೇಶಕ ಜಿಎನ್ ಆರ್ ಕುಮಾರವೇಲನ್ ಅವರು ನನ್ನನ್ನು ಆಯ್ಕೆ ಮಾಡಿದ್ದಾರೆ. ವಿಕ್ರಮ್ ಪ್ರಭು ಜತೆ ನಟಿಸಲು ಸಂತಸವಾಗುತ್ತಿದೆ ಎಂದು ರನ್ಯಾ ಹೇಳಿದ್ದಾರೆ.[ತಮಿಳು 'ಲೂಸಿಯಾ' ಚಿತ್ರಕ್ಕೆ ಕಮಲ್ ಚಿತ್ರ ಶೀರ್ಷಿಕೆ]

  ಈಗಾಗಲೇ ಒಂದು ಹಂತದ ಚಿತ್ರೀಕರಣ ಕೂಡಾ ಮುಗಿಸಿರುವ 23ವರ್ಷ ವಯಸ್ಸಿನ ರನ್ಯಾ ಅವರು ಕನ್ನಡದಲ್ಲಿ ಮಾಣಿಕ್ಯ ಅಲ್ಲದೆ, ಗಣೇಶ್ ಜತೆಗೆ ಪಟಾಕಿ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆ ಮೂಲದ ರನ್ಯಾ ಅವರು ಕೊಡಗು, ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಓದಿದ್ದಾರೆ. ಮಾಡೆಲಿಂಗ್ ನಂತರ ಮುಂಬೈನಲ್ಲಿ ನಟನೆಯಲ್ಲಿ ತರಬೇತಿ ಪಡೆದುಕೊಂಡು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.[ಚಿತ್ರ ವಿಮರ್ಶೆ: ಮನ ಗೆದ್ದ ಸುದೀಪ್ 'ಮಾಣಿಕ್ಯ']

  -
  -
  -
  -
  -
  -
  -
  ಕಾಲಿವುಡ್ ನಲ್ಲಿ ಅರಳುತ್ತಿರುವ ಚಂದನವನದ ಬೆಡಗಿ

  ಕಾಲಿವುಡ್ ನಲ್ಲಿ ಅರಳುತ್ತಿರುವ ಚಂದನವನದ ಬೆಡಗಿ

  English summary
  It is not something new for Tamil cinema to import actresses from other film industries. While Hindi and Malayalam actresses have been Kollywood directors' favourite so far, Kannada actresses are slowly making their way into Tamil cinema. Ranya Rao, who will be making her Tamil debut in Vikram Prabhu's Wagah.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more